ಮದುವೆ ಬೇಡ, ಆದರೆ ಹೆಂಡತಿ ಬೇಕು, ಇಲ್ಲಿ ಸಿಗುತ್ತಾರೆ ನೋಡಿ ತಾತ್ಕಾಲಿಕ ಸುಂದರ ಪತ್ನಿಯರು
ಕೌಟುಂಬಿಕ ಕಲಹವು ಬೇಡ, ಯಾವುದೇ ಸಾಂಸಾರಿಕ ಜವಾಬ್ದಾರಿಗಳು ಬೇಡ, ಆದರೆ ಸ್ವಲ್ಪ ದಿನದ ವರೆಗೆ ಹೆಂಡತಿಬೇಕು. ಪತ್ನಿಯ ಸೇವೆಯ ಅನುಭವ ಬೇಕು ಎಂಬ ಆಸೆ ಇದ್ದರೆ ಈ ದೇಶಕ್ಕೆ ಭೇಟಿ ನೀಡಬಹುದು. ಇಲ್ಲಿ ಯಾವುದೇ ಶ್ವಾಶತ ಪತ್ನಿ ಇರಲ್ಲ, ಬದಲಿಗೆ ತಾತ್ಕಾಲಿಕ ಸುಂದರ ಪತ್ನಿಯರನ್ನು ಪಡೆಯಬಹುದು. ಈ ವಿಷಯವೇ ಒಂಥರ ಹೊಸದಾಗಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಆಗ್ನೇಯ ಏಷ್ಯಾದ ಸುಂದರ ದೇಶ ಥೈಲ್ಯಾಂಡ್, (Thailand) ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಈ ದೇಶವು ಒಂದು. ದೈಹಿಕ ತೃಪ್ತಿಗಾಗಿ ಇಲ್ಲಿಗೆ ಅನೇಕ ಜನರು ಬರುತ್ತಾರೆ. ಅದರಲ್ಲೂ ಈ ದೇಶ ರಾತ್ರಿಯಲ್ಲಿ ಇನ್ನು ಸುಂದರವಾಗಿ ಹಾಗೂ ರಸಿಕತೆಯಿಂದ ತುಂಬಿರುತ್ತದೆ. ಇದೀಗ ಥೈಲ್ಯಾಂಡ್ ಮತ್ತೊಂದು ವಿಚಾರವಾಗಿ ಟ್ರೆಂಡ್ ಆಗುತ್ತಿದೆ. ಇದೀಗ ಈ ವಿಚಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಥೈಲ್ಯಾಂಡ್‌ನ ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಬಾಡಿಗೆ ಹೆಂಡತಿಯರಂತೆ ಪ್ರವಾಸಿಗರೊಂದಿಗೆ ತಾತ್ಕಾಲಿಕ ಸಂಬಂಧಗಳನ್ನು ಹೊಂದಿರುತ್ತಾರೆ. ಒಂದು ವೇಳೆ ಈ ಮಹಿಳೆಯರಲ್ಲಿ ಅಥವಾ ಹುಡುಗಿಯರಲ್ಲಿ ಯಾರದಾರೂ ಇಷ್ಟವಾದರೆ ಅವರನ್ನು ಮದುವೆ ಕೂಡ ಆಗಬಹುದು.
ಥೈಲ್ಯಾಂಡ್‌ನಲ್ಲಿ ಬಾಡಿಗೆ ಹೆಂಡತಿ
ಈ ಪ್ರವೃತ್ತಿ ಥೈಲ್ಯಾಂಡ್‌ನ ಪಟ್ಟಾಯ ನಗರದಲ್ಲಿ ಬಹಳ ಹಿಂದಿನಿಂದಲೂ ಈ ಆಚರಣೆಯಲ್ಲಿದೆ. ಇದನ್ನು ‘ವೈಫ್ ಆನ್ ಹೈರ್’ ಅಥವಾ ‘ಬ್ಲ್ಯಾಕ್ ಪರ್ಲ್’ ಎಂದೂ ಕರೆಯುತ್ತಾರೆ. ಒಂದು ರೀತಿಯ ತಾತ್ಕಾಲಿಕ ವಿವಾಹದಂತಹ ಸಂಬಂಧ, ಇದರಲ್ಲಿ ಮಹಿಳೆಯನ್ನು ಸ್ವಲ್ಪ ಸಮಯದವರೆಗೆ ಹಣದ ಮೂಲಕ ಪುರುಷನೊಂದಿಗೆ ಹೆಂಡತಿಯಾಗಿ ಇರಿಸಿಕೊಳ್ಳಬಹುದು. ಆ ಮಹಿಳೆ ಹೆಂಡತಿಯಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾಳೆ. ಅಡುಗೆ ಮಾಡುವುದು, ಹೊರಗೆ ಹೋಗುವುದು ಇತ್ಯಾದಿ ಎಲ್ಲವನ್ನು ಮಾಡುತ್ತಾರೆ. ಇದೆಲ್ಲವೂ ಒಪ್ಪಂದದ ಅಡಿಯಲ್ಲಿ ನಡೆಯುತ್ತದೆ ಹಾಗೂ ಇದನ್ನು ಕಾನೂನುಬದ್ಧ ವಿವಾಹವೆಂದು ಪರಿಗಣಿಸಲಾಗುವುದಿಲ್ಲ.
ಲಾವರ್ಟ್ ಎ ಎಮ್ಯಾನುಯೆಲ್ ಬರೆದ ‘ಥಾಯ್ ಟ್ಯಾಬೂ – ಆಧುನಿಕ ಸಮಾಜದಲ್ಲಿ ಹೆಂಡತಿ ಬಾಡಿಗೆಯ ಏರಿಕೆ’ ಎಂಬ ಪುಸ್ತಕವು ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಥೈಲ್ಯಾಂಡ್‌ನಲ್ಲಿ ಬಡತನದಿಂದ ಈ ಪ್ರವೃತ್ತಿ ಬೆಳೆಯಿತು. ಈ ಕಾರಣಕ್ಕೆ ಮಹಿಳೆಯರು ಹಣ ಸಂಪಾದಿಸಲು ಹಾಗೂ ತಮ್ಮ ಕುಟುಂಬವನ್ನು ಪೋಷಣೆ ಮಾಡಲು ಈ ಕೆಲಸ ಮಾಡುತ್ತಿದ್ದರು. ಮಹಿಳೆಯರು ಸಾಮಾನ್ಯವಾಗಿ ಬಾರ್‌ಗಳು ಅಥವಾ ರಾತ್ರಿ ಕ್ಲಬ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಕೆಲವೊಂದು ಪುರುಷರನ್ನು ಆಕರ್ಷಣೆ ಮಾಡಿ, ಗ್ರಾಹಕರಾಗಿ ಪಡೆಯುತ್ತಾರೆ.
ಬಾಡಿಗೆ ಹೆಂಡತಿಯರಾಗುವ ಮಹಿಳೆಯರ ಬೆಲೆ ವಯಸ್ಸು, ಸೌಂದರ್ಯ, ಶಿಕ್ಷಣ ಮತ್ತು ಸಮಯದ ಅವಧಿ ಈ ವಿಷಯಗಳನ್ನು ಅವಲಂಬಿಸಿರುತ್ತದೆ. ಕೆಲವು ಮಹಿಳೆಯರು ಕೆಲವೇ ದಿನಗಳವರೆಗೆ ಬಾಡಿಗೆಗೆ ಇದ್ದರೆ, ಕೆಲವರು ತಿಂಗಳುಗಳ ಕಾಲ ಇರುತ್ತಾರೆ. ವರದಿಗಳ ಪ್ರಕಾರ, ಬಾಡಿಗೆ $1600 (ಸುಮಾರು ರೂ. 1.3 ಲಕ್ಷ) ರಿಂದ $116000 (ಸುಮಾರು ರೂ. 96 ಲಕ್ಷ) ವರೆಗೆ ಇರಬಹುದು. ಇದರ ಬಗ್ಗೆ ಯಾವುದೇ ಕಾನೂನು ಇಲ್ಲ, ಆದ್ದರಿಂದ ಎಲ್ಲವೂ ಖಾಸಗಿ ಒಪ್ಪಂದದ ಅಡಿಯಲ್ಲಿ ನಡೆಯುತ್ತದೆ. ಥೈಲ್ಯಾಂಡ್‌ನಲ್ಲಿ ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಈ ಪದ್ಧತಿ ಹೊಸದಾಗಿ ಕಂಡರೂ, ಜಪಾನ್ ಮತ್ತು ಕೊರಿಯಾದಂತಹ ದೇಶಗಳಲ್ಲಿ ಇದು ಮೊದಲೇ ಪ್ರಾರಂಭವಾಗಿತ್ತು. ‘ಗರ್ಲ್‌ಫ್ರೆಂಡ್ ಫಾರ್ ಹೈರ್’ ನಂತಹ ಸೇವೆಗಳು ಈಗಾಗಲೇ ಅಲ್ಲಿ ಚಾಲನೆಯಲ್ಲಿವೆ. ಥೈಲ್ಯಾಂಡ್ ಕೂಡ ಈ ಮಾದರಿಯನ್ನು ಅಳವಡಿಸಿಕೊಂಡಿದೆ.
ಇದನ್ನೂ ಓದಿ: ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ? ಇಲ್ಲಿದೆ ನೋಡಿ
ದೇಶದಲ್ಲಿ ಬಾಡಿಗೆ ಹೆಂಡತಿಯ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ ಎಂದು ಥಾಯ್ ಸರ್ಕಾರ ಒಪ್ಪಿಕೊಂಡಿದೆ. ಈ ವ್ಯವಹಾರದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸಲು ಅದನ್ನು ನಿಯಂತ್ರಿಸಲು ಈಗ ಕಾನೂನು ರೂಪಿಸುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ, ಥೈಲ್ಯಾಂಡ್‌ನಲ್ಲಿ ಬಾಡಿಗೆ ಹೆಂಡತಿಯ ಪ್ರವೃತ್ತಿ ಕೇವಲ ತಾತ್ಕಾಲಿಕ ಸಂಬಂಧವಲ್ಲ, ಬದಲಾಗಿ ಅದು ದೊಡ್ಡ ವ್ಯವಹಾರವಾಗಿದೆ. ಈ ಕಾರಣದಿಂದಾಗಿ ಅನೇಕ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ, ಆದರೆ ಈ ಪ್ರವೃತ್ತಿ ಸಾಮಾಜಿಕ ಮತ್ತು ನೈತಿಕ ಚರ್ಚೆಯ ವಿಷಯವೂ ಆಗುತ್ತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








