ನಿಜವಾಗಿಯೂ ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು ಹೇಗಿರುತ್ತೆ? ಇದರಿಂದ ಹೊರಬರಲು ಸುಲಭ ಮಾರ್ಗ ಯಾವುದು?

ಪ್ರತಿ ಐದು ಜನರಲ್ಲಿ ಒಬ್ಬರಿಗೆ ಖಿನ್ನತೆ ಕಂಡುಬರಬಹುದು. ಆದರೆ ಈ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ, ಸಮಯಕ್ಕೆ ಸರಿಯಾಗಿ ಸಹಾಯ ಪಡೆದು, ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದರಿಂದ ಹೊರಬರಬಹುದು. ಆದರೆ ಡಿಪ್ರೆಶನ್‌ಗೆ ಪ್ರಮುಖ ಕಾರಣಗಳೇನು, ಲಕ್ಷಣಗಳು ಹೇಗಿರುತ್ತೆ, ಡಿಪ್ರೆಶನ್‌ನಿಂದ ಹೊರಬರುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಜವಾಗಿಯೂ ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು ಹೇಗಿರುತ್ತೆ? ಇದರಿಂದ ಹೊರಬರಲು ಸುಲಭ ಮಾರ್ಗ ಯಾವುದು?
Depression
Image Credit source: Getty Images

Updated on: Jun 19, 2026 | 10:08 PM

ಡಿಪ್ರೆಶನ್ (ಖಿನ್ನತೆ) ಎಂಬುದು ಕೇವಲ ದುಃಖ ಅಥವಾ ಮಾನಸಿಕ ದುರ್ಬಲತೆ ಅಲ್ಲ. ಇದು ವ್ಯಕ್ತಿಯ ಆಲೋಚನೆ, ಭಾವನೆ, ನಡವಳಿಕೆ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಅಧ್ಯಯನಗಳ ಪ್ರಕಾರ, ಜೀವನದಲ್ಲಿ ಕನಿಷ್ಠ ಒಮ್ಮೆ ಐವರಲ್ಲಿ ಒಬ್ಬರು ಡಿಪ್ರೆಶನ್ (Depression) ಅನುಭವಿಸುವ ಸಾಧ್ಯತೆ ಇದೆ. ಆದರೆ ಈ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ, ಸಮಯಕ್ಕೆ ಸರಿಯಾಗಿ ಸಹಾಯ ಪಡೆದು, ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದರಿಂದ ಹೊರಬರಬಹುದು. ಆದರೆ ಡಿಪ್ರೆಶನ್‌ಗೆ ಪ್ರಮುಖ ಕಾರಣಗಳೇನು, ಲಕ್ಷಣಗಳು ಹೇಗಿರುತ್ತೆ, ಡಿಪ್ರೆಶನ್‌ನಿಂದ ಹೊರಬರುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಿಪ್ರೆಶನ್‌ಗೆ ಪ್ರಮುಖ ಕಾರಣಗಳು

ಸಾಮಾನ್ಯವಾಗಿ ಡಿಪ್ರೆಶನ್‌ಗೆ ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಕಾರಣವಾಗಬಹುದು. ನಿರಂತರ ನಕಾರಾತ್ಮಕ ಚಿಂತನೆಗಳು, ಆತ್ಮವಿಶ್ವಾಸದ ಕೊರತೆ, ಒತ್ತಡ, ಕುಟುಂಬ ಅಥವಾ ಉದ್ಯೋಗ ಸಂಬಂಧಿತ ಸಮಸ್ಯೆಗಳು ಇದಕ್ಕೆ ಕಾರಣವಾಗುತ್ತವೆ. ಕೆಲವರಲ್ಲಿ ಮೆದುಳಿನಲ್ಲಿರುವ “ಹ್ಯಾಪಿ ಕೆಮಿಕಲ್ಸ್” ಎಂದು ಕರೆಯುವ ಸೆರೋಟೊನಿನ್ ಮತ್ತು ಡೋಪಮಿನ್ ಮಟ್ಟ ಕಡಿಮೆಯಾಗುವುದರಿಂದಲೂ ಡಿಪ್ರೆಶನ್ ಉಂಟಾಗಬಹುದು.

ಸಾಮಾನ್ಯ ಲಕ್ಷಣಗಳು:

  • ನಿರಂತರ ದುಃಖ ಅಥವಾ ಏನು ಇಲ್ಲ ಎಂಬ ಭಾವನೆ
  • ಹಿಂದಿನ ಆಸಕ್ತಿಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ದೈಹಿಕ ಹಾಗೂ ಮಾನಸಿಕ ಆಯಾಸ
  • ನಿದ್ರೆ ಸಮಸ್ಯೆಗಳು
  • ಏಕಾಗ್ರತೆಯ ಕೊರತೆ
  • ಅತಿಯಾದ ಆತಂಕ ಅಥವಾ ಕಿರಿಕಿರಿ
  • ಒಂಟಿತನವನ್ನು ಇಷ್ಟಪಡುವುದು

ಇದನ್ನೂ ಓದಿ: ಈ ಸರಳ ಸಲಹೆಯನ್ನು ಪಾಲಿಸುವ ಮೂಲಕ ಕೋಪವನ್ನು ನಿಯಂತ್ರಿಸಬಹುದು

ವಯಸ್ಸಿನ ಪ್ರಕಾರ ಕಂಡುಬರುವ ಲಕ್ಷಣಗಳು:

ಮಕ್ಕಳಲ್ಲಿ: ಒಂಟಿತನ, ಆಟಗಳಲ್ಲಿ ಆಸಕ್ತಿ ಕಡಿಮೆ, ಶಾಲೆಗೆ ಹೋಗಲು ಹಿಂಜರಿಕೆ.

ಯುವಕರಲ್ಲಿ: ಕೋಪ, ಆತಂಕ, ಆತ್ಮವಿಶ್ವಾಸದ ಕೊರತೆ, ಕೆಲಸಗಳನ್ನು ಮುಂದೂಡುವ ಅಭ್ಯಾಸ.

ಮಹಿಳೆಯರಲ್ಲಿ: ಹಾರ್ಮೋನ್ ಬದಲಾವಣೆಗಳು, ಹೆರಿಗೆಯ ನಂತರದ ಖಿನ್ನತೆ.

ಡಿಪ್ರೆಶನ್‌ನಿಂದ ಹೊರಬರುವುದು ಹೇಗೆ?

  • ಡಿಪ್ರೆಶನ್ ಲಕ್ಷಣಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಜ್ಞರ ಸಲಹೆ ಪಡೆಯುವುದು ಅಗತ್ಯ.
  • ಕೌನ್ಸೆಲಿಂಗ್ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಸಹಾಯಕವಾಗಬಹುದು.
  • ಪ್ರತಿದಿನ ವ್ಯಾಯಾಮ ಮತ್ತು ಯೋಗ ಮಾಡುವುದು ಉತ್ತಮ.
  • ಸರಿಯಾಗಿ ನಿದ್ರೆ ಮಾಡಬೇಕು.
  • ಧ್ಯಾನ ಮತ್ತು ಮೈಂಡ್‌ಫುಲ್‌ನೆಸ್ ಅಭ್ಯಾಸ ಮಾಡಬೇಕು.
  • ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us