AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸರಳ ಸಲಹೆಯನ್ನು ಪಾಲಿಸುವ ಮೂಲಕ ಕೋಪವನ್ನು ನಿಯಂತ್ರಿಸಬಹುದು

ಯಾವುದೇ ಭಾವನೆಯನ್ನು ಅತಿಯಾಗಿ ವ್ಯಕ್ತಪಡಿಸುವುದು ಹಾನಿಕಾರಕ. ಅದರಲ್ಲೂ ಅತಿಯಾದ ಕೋಪ ಸಂಬಂಧವನ್ನೇ ಹಾಳು ಮಾಡುತ್ತದೆ. ಅಲ್ಲದೆ ಕೋಪವು ವ್ಯಕ್ತಿಯ ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಯ ಪರಿಣಾಮ ಬೀರುತ್ತದೆ, ದೇಹದಲ್ಲಿ ಒತ್ತಡವನ್ನೂ ಹೆಚ್ಚಿಸುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯ. ಈ ಕೆಲವು ಪ್ರಮುಖ ಕೋಪ ನಿರ್ವಹಣಾ ಸಲಹೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ನೀವು ಕೋಪವನ್ನು ನಿಯಂತ್ರಿಸಬಹುದು.

ಈ ಸರಳ ಸಲಹೆಯನ್ನು ಪಾಲಿಸುವ ಮೂಲಕ ಕೋಪವನ್ನು ನಿಯಂತ್ರಿಸಬಹುದು
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 18, 2026 | 7:42 PM

Share

ಕೋಪವು (Anger) ಮನುಷ್ಯನ ಬಹುದೊಡ್ಡ ಶತ್ರುವಾಗಿದ್ದು, ಕೋಪದ ಮಾತುಗಳು, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಂಬಂಧವನ್ನು ಹಾಳು ಮಾಡುತ್ತದೆ. ಅಲ್ಲದೆ ಇದು ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಯ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬಂದೀತೆ ಎನ್ನುವಂತೆ ಕೋಪದಲ್ಲಿ ತೆಗದುಕೊಳ್ಳುವಂತಹ ನಿರ್ಧಾರಗಳು ನಮ್ಮನ್ನು ಜೀವನಪರ್ಯಂತ ವಿಷಾಧಿಸುವಂತೆ ಮಾಡುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯ. ಈ  ಕೆಲವು ಪ್ರಮುಖ ಕೋಪ ನಿರ್ವಹಣಾ ಸಲಹೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ನೀವು ಕೋಪವನ್ನು ನಿಯಂತ್ರಿಸಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೋಪವನ್ನು ನಿಯಂತ್ರಿಸುವುದು ಹೇಗೆ?

ಸುಮ್ಮನಿರಿ: ಕೋಪ ಬಂದಾಗ ಏನೇನೋ ಪ್ರತಿಕ್ರಿಯೆ ತೋರ್ಪಡಿಸುವುದಕ್ಕಿಂತ, ಕೋಪ ಬಂದಾಗ ಮೌನವಾಗಿರುವುದು ಉತ್ತಮ. ನೀವು ಏನನ್ನೂ ಹೇಳದಿದ್ದರೆ, ಅದು ಸಂಘರ್ಷಕ್ಕೆ ಕಾರಣವಾಗುವುದಿಲ್ಲ. ಮತ್ತು ನೀವು ಕೋಪಗೊಂಡಾಗ ಮೌನವಾಗಿದ್ದರೆ, ತಪ್ಪು ಮಾತನಾಡುವುದನ್ನು ತಪ್ಪಿಸಬಹುದು. ಇದು ಪರಿಸ್ಥಿತಿಯನ್ನೂ ಶಾಂತವಾಗಿಸುತ್ತದೆ. ಹಾಗಾಗಿ ಕೋಪ ಬಂದಾಗ ಶಾಂತವಾಗಿರುವನ್ನು ಅಭ್ಯಾಸ ಮಾಡಿಕೊಳ್ಳಿ.

ಸ್ಥಳ ಬದಲಾಯಿಸಿ: ನೀವು ತುಂಬಾ ಕೋಪಗೊಂಡಿದ್ದರೆ, ಕೋಪಗೊಂಡ ಸ್ಥಳದಿಂದ ಬೇರೆಡೆ ಹೋಗಿ. ನಿಮ್ಮ ಸ್ಥಳವನ್ನು ಬದಲಾಯಿಸುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ. ಟೆರೇಸ್‌ ಅಥವಾ ಉದ್ಯಾನವನದಂತಹ ತಾಜಾ ಗಾಳಿ ಇರುವ ಸ್ಥಳಗಳಿಗೆ ಹೋಗಿ. ಇದು ನಿಮ್ಮ ಕೋಪವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಸಂಗೀತ ಕೇಳಿ: ಕೋಪ ಬಂದಾಗ ಜನರು ತಪ್ಪು ಮಾತುಗಳನ್ನಾಡುತ್ತಾರೆ ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ತಮ್ಮನ್ನು ಅಥವಾ ಇತರರನ್ನು ನೋಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಎಲ್ಲರೂ ನೋವು ಅನುಭವಿಸಬೇಕಾಗುತ್ತದೆ. ಹಾಗಾಗಿ ಕೋಪಗೊಂಡರೆ ನಿಮ್ಮ ನೆಚ್ಚಿನ ಹಾಡನ್ನು ಕೇಳಿ, ಮನಸ್ಸನ್ನು ಶಾಂತಗೊಳಿಸುವ ಸಂಗೀತವನ್ನು ಆಲಿಸಿ. ಸಂಗೀತವನ್ನು ಕೇಳುವುದರಿಂದ ಮನಸ್ಸು ಮತ್ತು ಮೆದುಳು ಕೂಡ ಶಾಂತವಾಗುತ್ತದೆ.

 ವಾಕಿಂಗ್‌ ಮಾಡಿ: ನೀವು ತುಂಬಾ ಒತ್ತಡದಲ್ಲಿರುವಾಗ ಅಥವಾ ಕೋಪದಲ್ಲಿರುವಾಗ ವಾಕಿಂಗ್‌ ಮಾಡಿ. ಚುರುಕಾದ ನಡಿಗೆಯು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಆದ್ದರಿಂದ, ನೀವು ಕೋಪಗೊಂಡಿದ್ದರೆ ಅಥವಾ ಒತ್ತಡಕ್ಕೊಳಗಾಗಿದ್ದರೆ, ಪ್ರಕೃತಿಯ ಮಡಿಲಲ್ಲಿ ವಾಕಿಂಗ್‌ ಮಾಡಿ.

ಉಸಿರಾಟದ ವ್ಯಾಯಾಮ ಮಾಡಿ: ನೀವು ಕೋಪಗೊಳ್ಳುತ್ತಿದ್ದರೆ ಅಥವಾ ಒತ್ತಡಕ್ಕೊಳಗಾಗುತ್ತಿದ್ದರೆ, ಸಮಯ ಸಿಕ್ಕಾಗಲೆಲ್ಲಾ ಉಸಿರಾಟದ ವ್ಯಾಯಾಮವನ್ನು ಅಭಯಾಸ ಮಾಡಿ.  ನಿಮಗೆ ಕೋಪ ಬಂದಾಗಲೆಲ್ಲಾ, ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಧಾನವಾಗಿ ಉಸಿರನ್ನು ಒಳಗೆಳೆದು ಆಳವಾಗಿ ಉಸಿರನ್ನು ಬಿಡಿ. ಇದನ್ನು ಕನಿಷ್ಠ 8 ರಿಂದ 10 ಬಾರಿ ಮಾಡಿ. ಇದು ನಿಮ್ಮ ಕೋಪವನ್ನು ಗಣನೀಯವಾಗಿ ಶಾಂತಗೊಳಿಸುತ್ತದೆ.

ಇದನ್ನೂ ಓದಿ: ಸಂತೋಷದಿಂದ ಜೀವನ ನಡೆಸಲು ನೀವು ಮಾಡಬೇಕಾದದ್ದು ಇಷ್ಟೆ

 ಸ್ಟ್ರೆಚಿಂಗ್ ಸಹಾಯ ಮಾಡುತ್ತದೆ: ಸ್ಟ್ರೆಚಿಂಗ್ ವ್ಯಾಯಾಮ ನಿಮ್ಮ ದೇಹದಲ್ಲಿನ ಒತ್ತಡವನ್ನು ಬಿಡುಗಡೆ ಮಾಡುವುದಲ್ಲದೆ, ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೋಪ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ಅಲ್ಲದೆ ನೀವು ನಿರಂತರವಾಗಿ ಕೋಪಗೊಂಡಿದ್ದರೆ, ಯೋಗ, ಧ್ಯಾನ, ಸಂಗೀತ, ನೃತ್ಯ ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳನ್ನು ಪ್ರಯತ್ನಿಸಿ.

ಅತಿಯಾದ ಕೋಪದ ಪರಿಣಾಮಗಳೇನು?

  • ಅತಿಯಾದ ಕೋಪವು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಟ್ಟೆ ನೋವು, ಆಮ್ಲೀಯತೆ ಮತ್ತು ಅಜೀರ್ಣದತೊಂದರೆ ಉಂಟುಮಾಡಬಹುದು.
  • ಅತಿಯಾದ ಕೋಪವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ, ಇದನ್ನು ಒತ್ತಡದ ಹಾರ್ಮೋನುಗಳು ಎಂದೂ ಕರೆಯುತ್ತಾರೆ, ಇದು ಉಸಿರಾಟ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಕ್ಕೆ ಅಪಾಯಕಾರಿಯಾಗಬಹುದು.
  • ಒತ್ತಡದ ಹಾರ್ಮೋನುಗಳು ಅಧಿಕ ಪ್ರಮಾಣದಲ್ಲಿರುವುದರಿಂದ ನಿದ್ರೆಯ ಸಮಸ್ಯೆಗಳು ಉಂಟಾಗಬಹುದು. ನಿದ್ರೆಯ ಕೊರತೆಯು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us