Stress: ಒತ್ತಡವು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಜೀವನವನ್ನು ನರಕಕ್ಕೆ ತಳ್ಳಬಹುದು

| Updated By: ನಯನಾ ರಾಜೀವ್

Updated on: Jun 13, 2022 | 4:51 PM

ಮನೆ, ಕಚೇರಿ, ಮೀಟಿಂಗ್, ಹೊಸ ಹೊಸ ಅಸೈನ್​ಮೆಂಟ್​ಗಳಿಂದ ನೀವು ದಣಿದು ಒತ್ತಡ(Stress)ದಲ್ಲಿ ಜೀವನ ಸಾಗಿಸುತ್ತಿದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ. ನಿಮಗೆ ನೀವು ಸಮಯಕೊಡದಿದ್ದರೆ ಮುಂದೊಂದು ದಿನ ಆರೋಗ್ಯ ಸಮಸ್ಯೆಗಳು ಫ್ರೀ ಆಗಿ ನಿಮ್ಮನ್ನು ಸೇರುತ್ತವೆ.

Stress: ಒತ್ತಡವು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಜೀವನವನ್ನು ನರಕಕ್ಕೆ ತಳ್ಳಬಹುದು
Stress
Follow us on

ಮನೆ, ಕಚೇರಿ, ಮೀಟಿಂಗ್, ಹೊಸ ಹೊಸ ಅಸೈನ್​ಮೆಂಟ್​ಗಳಿಂದ ನೀವು ದಣಿದು ಒತ್ತಡ(Stress)ದಲ್ಲಿ ಜೀವನ ಸಾಗಿಸುತ್ತಿದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ. ನಿಮಗೆ ನೀವು ಸಮಯಕೊಡದಿದ್ದರೆ ಮುಂದೊಂದು ದಿನ ಆರೋಗ್ಯ ಸಮಸ್ಯೆಗಳು ಫ್ರೀ ಆಗಿ ನಿಮ್ಮನ್ನು ಸೇರುತ್ತವೆ. ರಾತ್ರಿ ನಿದ್ರೆ ಬಾರದಿದ್ದರೆ, ಕೆಲವು ವಿಚಾರಗಳು ನಿಮ್ಮನ್ನು ಕಾಡುತ್ತಿದ್ದರೆ, ಯಾರೊಂದಿಗೂ ಮಾತನಾಡಲು ಮನಸ್ಸಿಲ್ಲದಿದ್ದರೆ ನಿಮ್ಮ ಅಮೂಲ್ಯ ಸಮಯವನ್ನು ನಿಮಗಾಗಿಯೇ ಮೀಸಲಿಡಿ, ನಿಮಗೆ ನೀವೇ ಕಂಪನಿ ಕೊಟ್ಟುಕೊಳ್ಳಿ. ಒಳ್ಳೆಯ ಸಂಗೀತವನ್ನು ಆಲಿಸಿ, ಬೇರೆ ಉತ್ತಮ ಹವ್ಯಾಸಗಳಿದ್ದರೆ ಅವುಗಳನ್ನೂ ಮಾಡಿ. ನಿತ್ಯ ಒಂದು ಗಂಟೆಯಾದರೂ ನಿಮಗಾಗಿ ನೀವು ಬದುಕಿ.

ಮೊದಲು ಕೇವಲ ಒತ್ತಡ ಬಳಿಕ ತಲೆನೋವು, ಖಿನ್ನತೆ, ಏಕಾಗ್ರತೆ ಕೊರತೆ, ಬೇಸರ, ಒಂಟಿ ಭಾವನೆ, ಜೀವನದ ಮೇಲೆ ಜಿಗುಪ್ಸೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹೀಗೆ ಒಂದಕ್ಕೊಂದು ಸಂಬಂಧ ಪಡುತ್ತಾ ಒತ್ತಡ ಅತಿಯಾದರೆ ಜೀವಕ್ಕೂ ಅಪಾಯ.

ಮನುಷ್ಯ ಎಂದ ಮೇಲೆ ಕೆಲಸ, ಒತ್ತಡ ಎಲ್ಲವೂ ಸಹಜ ಆದರೆ ಅದರ ಮಧ್ಯೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ದಿನಚರಿಯಲ್ಲಿ ಕೆಲವನ್ನು ಅಡಕ ಮಾಡಿಕೊಳ್ಳಲೇಬೇಕು.

ಹೌದು, ಒತ್ತಡದ ಜೀವನದ ನಡುವೆ ಆಗಾಗ ಸ್ವಲ್ಪ ಬಿಡುವು ಪಡೆದುಕೊಳ್ಳಬೇಕು, ಶಾಪಿಂಗ್, ಕುಟುಂಬದ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುವುದು, ಪ್ರವಾಸ ಹೋಗುವುದು, ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ಹರಟೆ ಹೊಡೆಯುವುದು ಇವೆಲ್ಲವೂ ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಔಷಧದಂತೆ ಕಾರ್ಯ ನಿರ್ವಹಿಸುತ್ತದೆ.

ಒತ್ತಡವು ನಿಮ್ಮ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಲ್ಲದು?
-ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವುದು
-ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಸದಾ ಗೊಂದಲ
-ಖಿನ್ನತೆ
-ಉದರ ಬೇನೆ
-ಶಾಂತವಾಗಿ ಕುಳಿತುಕೊಳ್ಳಲಾಗದ ಪರಿಸ್ಥಿತಿ
-ಶಕ್ತಿ ಕುಂದುವಿಕೆ
-ತಲೆ ನೋವು
-ನಿದ್ರಾಹೀನತೆ
-ಉಸಿರಾಟದ ತೊಂದರೆ
-ಆತಂಕ
-ಹೃದಯ ಬಡಿತ ಹೆಚ್ಚಳ
-ಯಾವುದೇ ವಿಷಯಗಳಲ್ಲಿ ಹೆಚ್ಚು ಗಮನಕೊಡಲು ಸಾಧ್ಯವಾಗದೇ ಇರುವುದು

ನೀವು ಮಾಡಬೇಕಾಗಿದ್ದೇನು?
ನಿತ್ಯ ಧ್ಯಾನ ಮಾಡಿ, ಕುಟುಂಬದವರ ಜತೆ ಸಮಯ ಕಳೆಯಿರಿ, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಅಥವಾ ಪ್ರಾಣಾಯಾಮ ಮಾಡಿ, ಚೆನ್ನಾಗಿ ಊಟ ಮಾಡಿ, ಒಳ್ಳೆಯ ನಿದ್ರೆ ಮಾಡಿ ಎಲ್ಲಾ ರೋಗಗಳಿಂದ ಸದಾ ದೂರವಿರಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ