ಲಸಿಕೆ ನೀಡಿಕೆ
ಕೋವಿಡ್‌ನಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಐತಿಹಾಸಿಕ ಕ್ರಮ ತೆಗೆದುಕೊಂಡಿದೆ. ಮೋದಿ ಸರ್ಕಾರದ ನೇತೃತ್ವದಲ್ಲಿ 100 ಕೋಟಿ ಲಸಿಕೆಗಳನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನ ಮೇ 1ರಿಂದ ಆರಂಭವಾಯಿತು.
ಅಕ್ಟೋಬರ್ 21, 2021
ಭಾರತದಲ್ಲಿ ಈವರೆಗೆ 100 ಕೋಟಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್ ತೆಗೆದುಕೊಂಡವರ ಸಂಖ್ಯೆಯೇ ಹೆಚ್ಚು. ಎರಡನೇ ಡೋಸ್ ತೆಗೆದುಕೊಂಡಿರುವವರ ಸಂಖ್ಯೆ ಇನ್ನೂ ಕಡಿಮೆಯೇ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ, ದೇಶದಲ್ಲಿ ಲಸಿಕೆ ವಿತರಣೆಗೆ ಹೊಸ ವೇಗ ಸಿಕ್ಕಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಿದೆ. ಕೆಳಗೆ ನೀಡಲಾದ ಗ್ರಾಫ್ ಮೂಲಕ, ನೀವು ದೇಶಾದ್ಯಂತ ನಡೆಯುತ್ತಿರುವ ಲಸಿಕೆ ವಿತರಣೆ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಬಹುದು. 2021ರ ಅಂತ್ಯದ ವೇಳೆಗೆ ದೇಶದ ಎಲ್ಲ ವಯಸ್ಕರಿಗೆ ಲಸಿಕೆ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಈ ಗ್ರಾಫ್ ಪ್ರಕಾರ, ಭಾರತದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಮೇ ಕೊನೆಯ ವಾರದ ಆಸುಪಾಸಿನಲ್ಲಿ ಕಡಿಮೆಯಾಗಲಾರಂಭಿಸಿತು. ಲಸಿಕಾ ಅಭಿಯಾನವು ವೇಗವಾಗಿ ಸಾಗುತ್ತಲೇ ಇದೆ. ಭಾರತದಲ್ಲಿ ಮೇ 1ರಿಂದ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಣಾ ಅಭಿಯಾನವನ್ನು ಆರಂಭಿಸಲಾಯಿತು. ಭಾರತದಲ್ಲಿ 100 ಕೋಟಿ ಲಸಿಕೆ ವಿತರಣೆಯನ್ನು ಪೂರ್ಣಗೊಳಿಸಲಾಗಿದೆ.
ಇತರ ಕೆಲವು ದೇಶಗಳಲ್ಲಿ 100 ಜನರಿಗೆ ನೀಡಲಾದ ಸರಾಸರಿ ಡೋಸೇಜ್ ಆಧರಿಸಿದ ವರದಿಗಳನ್ನು ನೀವು ಕೆಳಗೆ ನೋಡಬಹುದು.