ಏನಿದು ಹೈಪೋಥರ್ಮಿಯಾ? ಇದರ ರೋಗಲಕ್ಷಣಗಳೇನು? ಈ ಕಾಯಿಲೆ ಬಾರದಂತೆ ತಡೆಯಲು ತಜ್ಞರು ನೀಡುವ ಸಲಹೆಗಳೇನು?

| Updated By: Digi Tech Desk

Updated on: Dec 31, 2024 | 11:20 AM

Hypothermia: ದೇಹದ ಉಷ್ಣತೆಯು ಸಾಮಾನ್ಯ ಸ್ಥಿತಿಗಿಂತ ಕಡಿಮೆಯಿದ್ದರೆ ಅದನ್ನು ಹೈಪೋಥರ್ಮಿಯಾ ಎಂದು ಕರೆಯುತ್ತಾರೆ. ಈ ವೇಳೆ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಹೃದಯಾಘಾತ ಅಥವಾ ಸಾವು ಕೂಡ ಸಂಭವಿಸಬಹುದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಈ ಹೈಪೋಥರ್ಮಿಯಾ ರೋಗಲಕ್ಷಣಗಳೇನು? ಹಾಗೂ ಈ ರೋಗಬಾರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಜ್ಞರು ಹೇಳುವುದೇನು? ಎನ್ನುವ ಮಾಹಿತಿಯು ಈ ಕೆಳಗಿದೆ.

ಏನಿದು ಹೈಪೋಥರ್ಮಿಯಾ? ಇದರ ರೋಗಲಕ್ಷಣಗಳೇನು? ಈ ಕಾಯಿಲೆ ಬಾರದಂತೆ ತಡೆಯಲು ತಜ್ಞರು ನೀಡುವ ಸಲಹೆಗಳೇನು?
ಸಾಂದರ್ಭಿಕ ಚಿತ್ರ
Follow us on

ಚಳಿಗಾಲ ಆರಂಭವಾಗಿದ್ದು ಕೆಲವು ಪ್ರದೇಶಗಳಲ್ಲಿ ವಿಪರೀತ ಚಳಿಯ ವಾತಾವರಣವಿದೆ. ಈ ಋತುವಿನಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಶೀತ ವಾತಾವರಣದಲ್ಲಿ ಬೆಚ್ಚಗಿನ ಆಹಾರವನ್ನು ದೇಹ ಬಯಸುತ್ತದೆ. ಬೆಚ್ಚಗಿನ ಆಹಾರವು ದೇಹವನ್ನು ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ಕೆಲವೊಮ್ಮೆ ದೇಹದ ಉಷ್ಣತೆಯು 95 ಡಿಗ್ರಿ ಫ್ಯಾರನ್‌ಹೀಟ್ (35 ಡಿಗ್ರಿ ಸೆಲ್ಸಿಯಸ್) ಗಿಂತ ಕಡಿಮೆಯಾದಾಗ ಸಂಭವಿಸುವ ಸ್ಥಿತಿಯೇ ಈ ಹೈಪೋಥರ್ಮಿಯಾ ಆಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತಕ್ಷಣವೇ ಚಿಕಿತ್ಸೆಯನ್ನು ಪಡೆಯಬೇಕು. ಇಲ್ಲದಿದ್ದರೆ ಹೃದಯ ಸ್ತಂಭನವಾಗಿ ಸಾವು ಸಂಭವಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ತಜ್ಞರು.

ಹೈಪೋರ್ಮಿಯಾ ಕಾಯಿಲೆ ಎಷ್ಟು ಅಪಾಯಕಾರಿ?

ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಡಾ.ಎಲ್.ಎಚ್. ​​ಘೋಟೆಕರ್, ಟಿವಿ 9 ಭಾರತ್ ವರ್ಷ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ, ದೇಹದ ಉಷ್ಣತೆಯು ಕಡಿಮೆಯಿದ್ದಾಗ ಹೈಪೋಥರ್ಮಿಯಾ ಕಾಯಿಲೆಯು ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ಹೃದಯ, ನರಮಂಡಲ ಮತ್ತು ಇತರ ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಹೃದಯ ಸ್ತಂಭನವಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ ಹೆಚ್ಚು ಹೊತ್ತು ಮನೆಯಿಂದ ಹೊರಗಿರುವವರಿಗೆ ಈ ಕಾಯಿಲೆ ಬರುವ ಅಪಾಯ ಹೆಚ್ಚು. ಶೀತ ವಾತಾವರಣಕ್ಕೆ ಮೈಯೊಡ್ಡಿ ಉಂಟಾಗುವ ಬಹುತೇಕ ಸಾವುಗಳಿಗೆ ಈ ಹೈಪೋಥರ್ಮಿಯಾ ಪ್ರಮುಖ ಕಾರಣವಾಗಿದೆ. ಈ ಋತುವಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಹೈಪೋಥರ್ಮಿಯಾ ಏಕೆ ಸಂಭವಿಸುತ್ತದೆ?

* ಚಳಿಗಾಲದಲ್ಲಿ ಹೆಚ್ಚು ಸಮಯ ಶೀತವಾತಾವರಣಕ್ಕೆ ಮೈಯೊಡ್ದುವುದು.

* ಶೀತ ವಾತಾವರಣದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸದೇ ಇರುವುದು.

* ದೀರ್ಘಕಾಲದಿಂದ ಕಡಿಮೆ ಉಷ್ಣತೆಯಲ್ಲಿ ಬಳಲುತ್ತಿರುವುದು.

ಇದನ್ನೂ ಓದಿ: ಬೆಳಿಗ್ಗೆ, ಸಂಜೆ ಅಥವಾ ರಾತ್ರಿ: ಮೊಟ್ಟೆಗಳನ್ನು ತಿನ್ನಲು ಸರಿಯಾದ ಸಮಯ ಯಾವುದು?

ಹೈಪೋಥರ್ಮಿಯಾ ಕಾಯಿಲೆಯ ಲಕ್ಷಣಗಳು

* ಮೈನಡುಕ

* ಅತಿಯಾದ ಚಳಿಯ ಭಾವನೆ

* ತೀವ್ರ ತಲೆನೋವು

* ಪ್ರಜ್ಞಾಹೀನತೆ

* ಸುಸ್ತು, ಆಯಾಸ

* ಅಸ್ಪಷ್ಟ ಮಾತು

* ಹೈಪೋಥರ್ಮಿಯಾ ಕಾಯಿಲೆ ಬಾರದಂತೆ ತಡೆಯುವುದು ಹೇಗೆ?*

* ಸಾಧ್ಯವಾದಷ್ಟು ದೇಹವನ್ನು ಬೆಚ್ಚಗಿರಿಸುವ ಆಹಾರವನ್ನು ಸೇವಿಸುವುದು.

* ಬೆಳಗ್ಗೆ ಮತ್ತು ಸಂಜೆಯ ವೇಳೆ ಕಡಿಮೆ ತಾಪಮಾನದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು.

* ದೇಹವನ್ನು ಬೆಚ್ಚಗಿಡಲು ನಿಯಮಿತ ವ್ಯಾಯಾಮ ಮಾಡುವುದು.

* ಚಳಿಗಾಲಕ್ಕೆ ಮೈ ಬೆಚ್ಚಗೆ ಇರಿಸುವ ಸೂಕ್ತವಾದ ಬಟ್ಟೆಗಳನ್ನು ಧರಿಸುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 31 December 24