ಸಾಂದರ್ಭಿಕ ಚಿತ್ರ
ಚಳಿಗಾಲ ಆರಂಭವಾಗಿದ್ದು, ಈ ಚುಮುಚುಮು ಚಳಿಗೆ ಬೆಚ್ಚಗೆ ಹೊದ್ದು ಮಲಗಿ ಬಿಡೋಣ ಎಂದೆನಿಸುತ್ತದೆ. ಹೆಚ್ಚಿನವರು ತಂಪಾದ ವಾತಾವರಣದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು ಕಂಬಳಿ ಹಾಗೂ ಬೆಚ್ಚಗಿನ ಸ್ವೆಟರ್‌ಗಳನ್ನು ಬಳಸುತ್ತಾರೆ. ಆದರೆ ಕೆಲವರಿಗೆ ರಾತ್ರಿ ಮಲಗುವಾಗ ಕಾಲಿನಿಂದ ತಲೆಯವರೆಗೇ ಬೆಡ್ ಶೀಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಲಗುವುದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ರೀತಿ ಮಲಗುವ ಅಭ್ಯಾಸದಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂದು ತಿಳಿದುಕೊಳ್ಳುವುದು ಸೂಕ್ತ.
- ಚರ್ಮಕ್ಕೆ ಹಾನಿಕಾರಕ : ಚಳಿಗಾಲದ ಋತುವಿನಲ್ಲಿ ಮುಖಕ್ಕೆ ಬೆಡ್ ಶೀಟ್ ಹಾಕಿ ಮಲಗುವುದರಿಂದ, ಈ ಹೊದಿಕೆಯಲ್ಲಿರುವ ಅಶುದ್ಧ ಗಾಳಿ ಹೊರಗೆ ಹೋಗುವುದಿಲ್ಲ. ಈ ಕೆಟ್ಟ ಗಾಳಿಯಿಂದ ತ್ವಚೆಯ ಬಣ್ಣ ಮಾಸುವಂತೆ ಮಾಡುತ್ತದೆ. ಸುಕ್ಕುಗಳು, ಮೊಡವೆಗಳು ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.
- ಶ್ವಾಸಕೋಶದ ಸಮಸ್ಯೆ : ಮುಖವನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಶ್ವಾಸಕೋಶಕ್ಕೆ ಗಾಳಿ ಸಿಗುವುದಿಲ್ಲ. ಇದರಿಂದ ಶ್ವಾಸಕೋಶಗಳು ಸಂಕುಚಿತಗೊಳ್ಳುತ್ತವೆ. ತಜ್ಞರು ಹೇಳುವಂತೆ ಈ ರೀತಿಯ ಅಭ್ಯಾಸದಿಂದ ಕ್ರಮೇಣವಾಗಿ ತಲೆನೋವು ಮತ್ತು ಅಸ್ತಮಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ : ಹೊದಿಕೆ ಹೊದ್ದು ಮಲಗುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುವುದಿಲ್ಲ. ದೇಹದ ಪ್ರತಿಯೊಂದು ರಕ್ತವು ಸರಿಯಾದ ಪ್ರಮಾಣದಲ್ಲಿ ಹರಿಯುವುದಿಲ್ಲ.
- ಆಯಾಸ : ಮುಖದ ಮೇಲೆ ಹೊದಿಕೆ ಹಾಕಿಕೊಂಡು ಮಲಗಿದರೆ ಆಮ್ಲಜನಕವು ಸರಿಯಾಗಿ ಸಿಗುವುದಿಲ್ಲ. ಇದರಿಂದ ಅತಿಯಾದ ಆಯಾಸ, ಸುಸ್ತು ಉಂಟಾಗುತ್ತದೆ. ಅದಲ್ಲದೇ, ತಲೆನೋವು, ವಾಕರಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ಕೂದಲು ಉದುರುವಿಕೆ ಸಮಸ್ಯೆ : ತಲೆಯನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
- ನಿದ್ರೆಗೆ ತೊಂದರೆ : ಕಾಲಿನಿಂದ ತಲೆಯವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹದ ಉಷ್ಣತೆಯೂ ಹೆಚ್ಚಾಗಿ ಇದರಿಂದ ದೇಹವು ಬೆವರಲು ಪ್ರಾರಂಭವಾಗುತ್ತದೆ. ಇದರಿಂದ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ.
- ಹೃದಯಾಘಾತದ ಸಾಧ್ಯತೆ ಹೆಚ್ಚು : ತಲೆಯಿಂದ ಕಾಲಿನವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕವು ಸಿಗುವುದಿಲ್ಲ. ಈ ರೀತಿ ಅಭ್ಯಾಸದಿಂದ ಹೃದಯಾಘಾತ ಹಾಗೂ ಉಸಿರಾಟ ತೊಂದರೆಯ ಅಪಾಯವೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ