Ice Water: ಐಸ್ ನೀರು ಕುಡಿಯುವುದರಿಂದ ಹೃದಯಕ್ಕೆ ಅಪಾಯವಾದೀತು!

ಈಗಾಗಲೇ ಬೇಸಿಗೆಯ ಧಗೆ ಶುರುವಾಗಿದೆ. ಬಿಸಿಲಿನ ಝಳಕ್ಕೆ ಬಾಯಾರಿಕೆಯೂ ಹೆಚ್ಚಾಗಿರುತ್ತದೆ. ಹೀಗಾಗಿ, ಏನಾದರೂ ಕುಡಿಯುತ್ತಿರಬೇಕು ಎಂದೆನಿಸುವುದು ಸಹಜ. ಈ ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಬಹುತೇಕ ಜನರು ಫ್ರಿಡ್ಜ್​ನಲ್ಲಿ ನೀರನ್ನು ಇಟ್ಟುಕೊಂಡಿರುತ್ತಾರೆ ಅಥವಾ ಐಸ್​ ಕ್ಯೂಬ್ ಇಟ್ಟುಕೊಂಡಿರುತ್ತಾರೆ. ಆದರೆ, ಈ ರೀತಿಯ ತಣ್ಣನೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Ice Water: ಐಸ್ ನೀರು ಕುಡಿಯುವುದರಿಂದ ಹೃದಯಕ್ಕೆ ಅಪಾಯವಾದೀತು!
ತಣ್ಣನೆ ನೀರು Image Credit source: iStock
Follow us
ಸುಷ್ಮಾ ಚಕ್ರೆ
|

Updated on:Feb 29, 2024 | 4:29 PM

ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡಲು ನಮ್ಮಲ್ಲಿ ಬಹುತೇಕ ಜನರು ಫ್ರಿಡ್ಜ್​ನಲ್ಲಿ ಬಾಟಲಿಗಳಲ್ಲಿ ನೀರು ಇಡಲು ಆರಂಭಿಸುತ್ತೇವೆ. ಈ ತಂಪಾದ ನೀರನ್ನು ಕುಡಿದಾಗ ಸೆಖೆಗೆ ಬಹಳ ಆರಾಮವೆನಿಸುವುದು ನಿಜ. ಆದರೆ, ಈ ರೀತಿ ಅತಿಯಾದ ತಣ್ಣನೆಯ ನೀರು (Ice Water) ಕುಡಿಯುವುದರಿಂದ ನಮ್ಮ ಗಂಟಲಿನ ಮೇಲೆ ಮಾತ್ರವಲ್ಲದೆ ಆರೋಗ್ಯದ ಇತರ ಅಂಶಗಳ ಮೇಲೂ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿರುವುದು ಉತ್ತಮ. ಇತ್ತೀಚೆಗೆ ದೇಹದಾರ್ಢ್ಯ ಪಟುಯೊಬ್ಬರು ಐಸ್ ಹಾಕಿದ ತಣ್ಣೀರನ್ನು ಸೇವಿಸಿದ ನಂತರ ತಮ್ಮ ಹೃದಯವು ಜೋರಾಗಿ ಬಡಿದುಕೊಳ್ಳುವುದನ್ನು ಮತ್ತು ಎದೆ ಭಾರವಾಗುವುದನ್ನು ಗಮನಿಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ತಣ್ಣನೆಯ ಐಸ್ ನೀರು ಕುಡಿದು ಆಸ್ಪತ್ರೆಗೆ ದಾಖಲಾದ 35 ವರ್ಷದ ಫ್ರಾಂಕ್ಲಿನ್ ಅರಿಬಿಯಾನಾ ಅವರಿಗೆ ವೈದ್ಯರು ಪರೀಕ್ಷೆ ಮಾಡಿದಾಗ ಅವರಲ್ಲಿ ಅನಿಯಮಿತ ಹೃದಯ ಬಡಿತ ಉಂಟಾಗಿರುವುದನ್ನು ಪತ್ತೆ ಮಾಡಿದರು. ಬಾಡಿ ಬಿಲ್ಡರ್ ಆಗಿದ್ದ ಅವರು ವ್ಯಾಯಾಮದ ನಂತರ ಐಸ್ ಹಾಕಿದ ತಣ್ಣನೆಯ ನೀರನ್ನು ಸೇವಿಸಿದ್ದರು. ಆಗ ಅವರ ಹೃದಯವು ಅನಿಯಮಿತವಾಗಿ ಮತ್ತು ವೇಗವಾಗಿ ಹೊಡೆದುಕೊಳ್ಳಲಾರಂಭಿಸಿತು ಎಂದು ವೈದ್ಯರು ಪತ್ತೆಹಚ್ಚಿದರು.

ಇದನ್ನೂ ಓದಿ: Plastic Bottle: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? ಈ ಕ್ಷಣವೇ ನಿಲ್ಲಿಸಿ

ಇದನ್ನು ವೈದ್ಯಕೀಯವಾಗಿ ಹೃತ್ಕರ್ಣದ ಕಂಪನ ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ಸಾವಿಗೂ ಕಾರಣವಾಗಬಹುದು. ಈ ಸಮಸ್ಯೆಗೆ ಚಿಕಿತ್ಸೆ ನೀಡಲು ವೈದ್ಯರು ನಂತರ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು. ಫ್ರಾಂಕ್ಲಿನ್ ಅವರಿಗೆ 18 ವರ್ಷವಾಗಿದ್ದಾಗ ತಣ್ಣೀರು ಕುಡಿದ ನಂತರ ಮೊದಲ ಬಾರಿಗೆ ಕುಸಿದುಬಿದ್ದಿದ್ದರು. ವೈದ್ಯರು ಅವರಿಗೆ ಅನಿಯಮಿತ ಹೃದಯ ಬಡಿತದ ಸಮಸ್ಯೆಯಿದೆ ಎಂದು ಪತ್ತೆಹಚ್ಚುವ ಮೊದಲು ಕಳೆದ 15 ವರ್ಷಗಳಲ್ಲಿ 20 ಬಾರಿ ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಈ ಸಮಸ್ಯೆಗೆ ತಣ್ಣೀರಿನ ಸೇವನೆಯೇ ಕಾರಣವೆಂದು ಅವರಿಗೆ ತಿಳಿದಿರಲಿಲ್ಲ.

ರೋಗಿಯು ನೀರು ಕುಡಿದ ನಂತರ ಎದೆಯಲ್ಲಿ ಜೋರಾದ ಬಡಿತದ ಬಗ್ಗೆ ವೈದ್ಯರಿಗೆ ಹೇಳಿದ್ದರು. ವೈದ್ಯರ ಆ ರೋಗಿಯ ಅಂಗಿಯನ್ನು ತೆಗೆದುಹಾಕಿ ಮತ್ತು ಅವರ ಎದೆಯಿಂದ ಹೃದಯ ಬಡಿತವನ್ನು ನೋಡಿದರು. ಹೃದಯ ಬಡಿದುಕೊಳ್ಳುತ್ತಿತ್ತು. ಮೊದಲು, ಅವರು ಹೃದಯದ ಹಿಗ್ಗುವಿಕೆಯನ್ನು ಗಮನಿಸಿದರು. ಈ ಸಮಸ್ಯೆ ಶುರುವಾದ 15 ವರ್ಷಗಳ ನಂತರ ಇದು ಹೃತ್ಕರ್ಣದ ಕಂಪನ ಸಮಸ್ಯೆ ಎಂದು ವೈದ್ಯರು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: Heart Attack: ಅತಿಯಾಗಿ ವರ್ಕ್​ಔಟ್ ಮಾಡಿದರೂ ಹೃದಯಾಘಾತ ಆಗುತ್ತಾ?; ವೈದ್ಯರ ಸಲಹೆ ಇಲ್ಲಿದೆ

ಹೃತ್ಕರ್ಣದ ಕಂಪನ ಎಂದರೇನು?:

ಹೃತ್ಕರ್ಣದ ಕಂಪನವು ಹೃದಯದ ಮೇಲಿನ ಕೋಣೆಗಳು ಅನಿಯಮಿತವಾಗಿ ಬಡಿಯುವ ಸ್ಥಿತಿಯಾಗಿದೆ. ಅವು ಕೆಳಗಿನ ಹೃದಯದ ಕೋಣೆಗಳೊಂದಿಗೆ ಸಿಂಕ್ ಆಗುವುದಿಲ್ಲ. ಹೆಚ್ಚಿನ ರೋಗಿಗಳಲ್ಲಿ ಇದು ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದರೂ ಕೆಲವೊಮ್ಮೆ, ಅನಿಯಮಿತ ಹೃದಯ ಬಡಿತವು ಈ ಕೆಳಗಿನ ರೋಗಲಕ್ಷಣಗಳಿಗೆ ಕಾರಣವಾಗಬಹುದು…

– ಜೋರಾದ ಹೃದಯ ಬಡಿತ

– ತಲೆತಿರುಗುವಿಕೆ

– ಉಸಿರಾಟದ ತೊಂದರೆ

– ಸುಸ್ತು

ಈ ಸಮಸ್ಯೆಯನ್ನು ಗುರುತಿಸದೆ ಮತ್ತು ಚಿಕಿತ್ಸೆ ನೀಡದೆ ಬಿಡುವುದರಿಂದ ಪಾರ್ಶ್ವವಾಯುವಿನ ಅಪಾಯ 5 ಪಟ್ಟು ಹೆಚ್ಚಬಹುದು. ಫ್ರಾಂಕ್ಲಿನ್ ಪ್ರಕರಣದಲ್ಲಿ ಐಸ್ ನೀರು ಮೆದುಳನ್ನು ಹೃದಯಕ್ಕೆ ಸಂಪರ್ಕಿಸುವ ವಾಗಸ್ ನರವನ್ನು ಕೆರಳಿಸಿರಬಹುದು. ಇದರಿಂದಾಗಿ ಹೃತ್ಕರ್ಣದ ಕಂಪನ ಉಂಟಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ದೇಹವು ತಣ್ಣನೆಯ ನೀರಿಗೆ ಒಡ್ಡಿಕೊಂಡಾಗ ಇದು ಡೈವಿಂಗ್ ರಿಫ್ಲಕ್ಸ್ ಅನ್ನು ಉಂಟುಮಾಡುತ್ತದೆ. ಇದು ಹೃದಯದ ಕೆಲಸವನ್ನು ನಿಧಾನಗೊಳಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Thu, 29 February 24

ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ