ICMR Dietary Guidelines Part 16 : ವಯಸ್ಸು 60 ದಾಟಿದ ನಂತರ ಯಾವ ಆಹಾರ ಸೇವಿಸಬೇಕು, ಸೇವಿಸಬಾರದು? ಸರ್ಕಾರ ಮಾರ್ಗಸೂಚಿಯಲ್ಲಿ ಏನಿದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: May 28, 2024 | 5:42 PM

ಇಂದಿನ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದ ಸಣ್ಣ ವಯಸ್ಸಿನಲ್ಲಿಯೇ ಕಾಯಿಲೆಗಳು ಬರುತ್ತಿವೆ. ಇನ್ನು ವಯಸ್ಸಾದ ಮೇಲಂತೂ ಕೇಳುವುದೇ ಬೇಡ. ಔಷಧಗಳನ್ನು ಇಟ್ಟುಕೊಂಡೇ ಜೀವಿಸಬೇಕಾಗುತ್ತದೆ. ವಯಸ್ಸು ಆದಂತೆ ಹಸಿವು ಹಾಗೂ ಜೀರ್ಣ ಕ್ರಿಯೆಯು ಕಡಿಮೆಯಾಗುವ ಕಾರಣ ಆಹಾರ ಸೇವನೆಯ ಕಡೆಗೆ ಗಮನ ನೀಡಬೇಕು ಎಂದು ಐಸಿಎಂಆರ್ ಆಹಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ICMR Dietary Guidelines Part 16 : ವಯಸ್ಸು 60 ದಾಟಿದ ನಂತರ ಯಾವ ಆಹಾರ ಸೇವಿಸಬೇಕು, ಸೇವಿಸಬಾರದು? ಸರ್ಕಾರ ಮಾರ್ಗಸೂಚಿಯಲ್ಲಿ ಏನಿದೆ?
Follow us on

ಇತ್ತೀಚೆಗಷ್ಟೇ ಐಸಿಎಂಆರ್ ಭಾರತೀಯರ ಉತ್ತಮ ಗುಣಮಟ್ಟದ ಆರೋಗ್ಯಕ್ಕಾಗಿ 16 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ವಯಸ್ಸದವರ ಆಹಾರ ಕ್ರಮ ಹೇಗಿರಬೇಕು ಎಂದು ತಿಳಿಸಿದೆ. ಈ ವಯಸ್ಸು ಆದಂತೆ ಹಸಿವಾಗುವುದು ಹಾಗೂ ಜೀರ್ಣಕ್ರಿಯೆಯು ಕಡಿಮೆಯಾಗುವ ಕಾರಣ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವವುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಿದರೆ ಒಳ್ಳೆಯದು. ದಿನಕ್ಕೆ 300 ರಿಂದ 330 ಗ್ರಾಂನಷ್ಟು ಈ ಆಹಾರವನ್ನು ಸೇವಿಸುವುದು ಉತ್ತಮ ಎಂದು ಹೇಳಿದೆ.

ವೃದ್ಧರು ಈ ಆಹಾರಗಳಿಂದ ದೂರವಿರಿ

ವಯಸ್ಸಾದಂತೆ ನಾಲಿಗೆ ರುಚಿಯಾಗುತ್ತದೆ ಎಂದು ಸಿಕ್ಕ ಆಹಾರವನ್ನು ಸೇವಿಸಿದರೆ ಆರೋಗ್ಯವು ಕೆಡುತ್ತದೆ. ಹೀಗಾಗಿ ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥಗಳು, ಮಸಾಲೆ ಪದಾರ್ಥಗಳು, ಬ್ರೆಡ್, ಬನ್, ನೂಡಲ್ಸ್, ನಾನ್,ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಆಹಾರಗಳನ್ನು ಸೇವನೆಯು ಆದಷ್ಟು ತಪ್ಪಿಸುವುದು ಒಳ್ಳೆಯದು. ಪದೇ ಪದೇ ಕಾಫಿ, ಟೀ ಸೇವಿಸುವುದು ಒಳ್ಳೆಯದಲ್ಲ. ಅದಲ್ಲದೇ, ಮದ್ಯಪಾನ, ಧೂಮಪಾನದಂತಹ ಕೆಟ್ಟ ಅಭ್ಯಾಸವನ್ನು ತ್ಯಜಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದೆ.

ವಯಸ್ಸಾದವರು ಈ ಆಹಾರಗಳತ್ತ ಹೆಚ್ಚು ಗಮನವಹಿಸಿ

ವಯಸ್ಸಾದಂತೆ ದೇಹದ ಅಂಗಗಳು ಕಾರ್ಯನಿರ್ವಹಿಸುವುದು ನಿಧಾನವಾಗುತ್ತದೆ. ಹೀಗಾಗಿ ಅಂಗಗಳ ಸಾಮರ್ಥ್ಯದ ಆಧಾರದ ಮೇಲೆ ಆಹಾರ ಕ್ರಮವಿರಬೇಕು. ದ್ರವ ರೂಪದ ಆಹಾರಗಳು, ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ, ಜೋಳ, ಪ್ರೊಟೀನ್ ಯುಕ್ತ ಬೇಳೆಕಾಳುಗಳು, ಮೊಳಕೆ ಕಾಳುಗಳು, ಮೊಟ್ಟೆ, ಮೀನು, ಸೊಪ್ಪು ತರಕಾರಿಗಳು ಸೇರಿದಂತೆ ಗೆಡ್ಡೆಗೆಣಸು ಆಹಾರದ ಭಾಗವಾಗಿರಲಿ. ಅದಲ್ಲದೇ, ದಿನಕ್ಕೆ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರನ್ನು ಸೇವಿಸಬೇಕು. ದಿನ ನಿತ್ಯ ವ್ಯಾಯಾಮ, ವಾಕಿಂಗ್ ನಂತಹ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ಬಳಲುತ್ತಿರುವವರು ಮಾವಿನ ಹಣ್ಣನ್ನು ತಿನ್ನಬಹುದೇ? ತಜ್ಞರು ಹೇಳುವುದೇನು?

ವಯಸ್ಸಾದ ಕಾಲದಲ್ಲಿ ಕಾಡುವ ಮಲಬದ್ಧತೆ ಸಮಸ್ಯೆಗೆ ನಾರಿನ ಅಂಶವಿರುವ ಆಹಾರಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಿ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು ಹಾಗೂ ದೊಡ್ಡ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಮೂಳೆಗಳ ಸಮಸ್ಯೆಯನ್ನು ನಿವಾರಿಸಲು ಕ್ಯಾಲ್ಸಿಯಂಯುಕ್ತ ಆಹಾರಗಳನ್ನು ಸೇವಿಸಿ ಎಂದು ಐಸಿಎಂಆರ್ ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ