ತಲೆ ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಉದ್ದ ಕೂದಲಿಗೆ ಹೆಣ್ಣು ಮಕ್ಕಳು ಹರಸಾಹಸ ಪಡುತ್ತಾರೆ. ಉದ್ದ ಕೂದಲನ್ನು ನೋಡಿದಾಗ ನನಗೂ ಆ ರೀತಿ ಕೂದಲು ಬೇಕು ಅಂತ ನಾನಾ ಎಣ್ಣೆ, ಶಾಂಪೂಗಳನ್ನ ಬಳಸುತ್ತಾರೆ. ಕೂದಲಿಗೆ ಆರೈಕೆ ಚೆನ್ನಾಗಿ ಆದಾಗ ಉದ್ದ ಮತ್ತು ದಟ್ಟವಾಗಿ ಬೆಳೆಯುತ್ತದೆ. ಕೆಲವರಿಗೆ ಕೂದಲು ಉದ್ದವಾಗಿರುತ್ತದೆ. ಆದರೆ ದಪ್ಪವಾಗಿರಲ್ಲ. ಇನ್ನು ಕೆಲವರಿಗೆ ಕೂದಲು ದಪ್ಪವಾಗಿದ್ದರೂ, ಬೆಳವಣಿಗೆ ಹೆಚ್ಚು ಕುಂಠಿತವಾಗಿರುತ್ತದೆ. ಈ ಎಲ್ಲ ಸಮಸ್ಯೆಗಳು ಮಹಿಳೆಯರ ಸೌಂದರ್ಯಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಕೂದಲಿನ ಆರೈಕೆ ಅನಿವಾರ್ಯವಾಗಿದೆ.
ಆರೋಗ್ಯಕರ ಎಣ್ಣೆಗಳಲ್ಲಿ ಆಲಿವ್ ಎಣ್ಣೆಯೂ ಒಂದು. ಇದನ್ನು ಅಡುಗೆಗೆ ಬಳಸಲಾಗುತ್ತದೆ. ಜೊತೆಗೆ ದಟ್ಟ ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೂದಲು ಉದುರುವುದು, ಹೆಚ್ಚು ಒಣಗುವುದು, ಸ್ಪ್ಲಿಟ್ಸ್ ಹೇರ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಇದು ಪರಿಹಾರವಾಗಿದೆ. ಈ ಎಣ್ಣೆ ಎಲ್ಲರಿಗೂ ಸರಿಹೊಂದುತ್ತದೆ. ಹೀಗಾಗಿ ಯಾವುದೇ ಭಯವಿಲ್ಲದೆ ಇದನ್ನು ಎಲ್ಲರು ಬಳಸಬಹುದು.
ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆ
ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ಬಳಸಬಹುದು. ಆಲಿವ್ ಎಣ್ಣೆಯೊಂದಿಗೆ ಬೆಳ್ಳುಳ್ಳಿ ಸೇರಿಸಿ ಪೇಸ್ಟ್ನ ತಯಾರಿಸಬೇಕು. ರೆಡಿಯಿರುವ ಮಿಶ್ರಣವನ್ನು ತಲೆಯ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಬೇಕು. ಈ ಪೇಸ್ಟ್ ಸುಮಾರು 30 ನಿಮಿಷ ತಲೆಯಲ್ಲಿ ಇರಬೇಕು. 30 ನಿಮಿಷಗಳ ಬಳಿಕ ನೀವು ಬಳಸುವ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಬೇಕು. ಹೀಗೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಅಲ್ಲದೇ ಕೂದಲು ರೇಷ್ಮೆಯಂತಾಗುತ್ತದೆ.
ಮೊಟ್ಟೆ ಮತ್ತು ಆಲಿವ್ ಎಣ್ಣೆ
ಮೊಟ್ಟೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಮೊಟ್ಟೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿದಾಗ ಇದು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೊಟ್ಟೆಯ ಹಳದಿ ಭಾಗ ಮತ್ತು ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಸಿದ್ಧವಾಗಿರುವ ಮಿಶ್ರಣವನ್ನು ತಲೆಗೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ. ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ. ಇದು ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಕೂದಲು ಮೃದುವಾಗುತ್ತದೆ.
ಇದನ್ನೂ ಓದಿ
Viral Video: ಮಿಡತೆಯನ್ನು ಹೆದರಿಸಲು ಪ್ರಯತ್ನಿಸಿದ ಹುಡುಗ! ಮುಂದೆ ಏನಾಗುತ್ತದೆ ಎಂಬುದನ್ನು ನೀವೇ ನೋಡಿ
Health Tips: ಸೈನಸ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಯೋಗ ಭಂಗಿಗಳು ಮುಖ್ಯ
(If olive oil is used, the hair will be long)