ಹಸಿ ಮಾಂಸ, ಹಸಿ ಹಾಲು ಸೇವನೆ ಒಳ್ಳೆಯದಾ?; ಏನಿದು ಹೊಸ ಚರ್ಚೆ?

|

Updated on: Dec 06, 2023 | 4:40 PM

ಸಾಮಾಜಿಕ ಜಾಲತಾಣಗಳಲ್ಲಿ ಹಸಿ ಹಾಲು ಕುಡಿಯೋದು, ಹಸಿ ಮಾಂಸ ತಿನ್ನೋದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಚರ್ಚೆ ಹರಿದಾಡುತ್ತಿದೆ. ಆದರೆ, ನಿಜಕ್ಕೂ ಇದು ಸತ್ಯವಾ? ಆಹಾರವನ್ನು ಬೇಯಿಸದೆ ಹಸಿಯಾಗಿ ತಿಂದರೆ ಏನಾಗುತ್ತೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಸಿ ಮಾಂಸ, ಹಸಿ ಹಾಲು ಸೇವನೆ ಒಳ್ಳೆಯದಾ?; ಏನಿದು ಹೊಸ ಚರ್ಚೆ?
ಹಸಿ ಮಾಂಸ
Follow us on

ನವದೆಹಲಿ: ಇತ್ತೀಚೆಗೆ ಸೋಷಿಯಲ್ ಮೀಡಿಯಾದ ಮೂಲಕ ತಮಗೆ ಬೇಕಾದ್ದನ್ನು ಜನರ ಮೇಲೆ ಹೇರುವ ಅಥವಾ ಜನರನ್ನು ಪ್ರಭಾವಗೊಳಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಮಾಜಿಕ ಮಾಧ್ಯಮದ ಆರೋಗ್ಯ ಪ್ರಭಾವಿಗಳು ಹಸಿ ಮಾಂಸವನ್ನು ಅದರಲ್ಲೂ ವಿಶೇಷವಾಗಿ ಯಕೃತ್ತನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಿದ್ದಾರೆ. ಹಸಿ ಲಿವರ್ ಮಾಂಸ ತಿನ್ನುವುದರಿಂದ ಹೆಚ್ಚಿನ ಶಕ್ತಿ ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇದರಲ್ಲಿ ಸತ್ಯಾಂಶವಿದೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಲಿವರ್ ಕಿಂಗ್ ಎಂದು ಕರೆಯಲ್ಪಡುವ ಬ್ರಿಯಾನ್ ಜಾನ್ಸನ್ ಅವರಂತಹ ಜನಪ್ರಿಯ ವ್ಯಕ್ತಿಗಳು ಪ್ರತಿ ಊಟದಲ್ಲಿ ಕನಿಷ್ಠ 3 ಔನ್ಸ್ ಹಸಿ ಲಿವರ್, ಗೋಮಾಂಸ ಸೇವಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಟಿಕ್​ಟಾಕ್​ನಲ್ಲಿ ಜಾನ್ಸನ್ 4 ಮಿಲಿಯನ್ ಅನುಯಾಯಿಗಳನ್ನು ಮತ್ತು 81.5 ಲೈಕ್​ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಹಲ್ಲಿನ ಆರೋಗ್ಯ ಕಾಪಾಡುವ 8 ಸೂಪರ್‌ಫುಡ್‌ಗಳು ಇಲ್ಲಿವೆ

ಪಾಶ್ಚರೀಕರಿಸದ ಹಾಲು ಆರೋಗ್ಯಕ್ಕೆ ಉತ್ತಮ ಎಂದು ಹೇಳುವ ಪಾಲ್ ಸಲಾಡಿನೊ ರೀತಿಯ ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ಜನರ ಅಭಿರುಚಿ ಮತ್ತು ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ, ಆಹಾರ ಸುರಕ್ಷತಾ ತಜ್ಞರು ಹೇಳುವಂತೆ ಹಸಿ ಮಾಂಸ ಅಥವಾ ಹಸಿ ಹಾಲನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಗಂಭೀರ ಅಪಾಯವಿದೆ.

ಹಸಿ ಆಹಾರ ಏಕೆ ಒಳ್ಳೆಯದಲ್ಲ?:

ಆಹಾರವನ್ನು ಬಿಸಿಮಾಡುವುದು ಅಥವಾ ಬೇಯಿಸುವುದರಿಂದ ಪೋಷಕಾಂಶಗಳು ಸಾಯುತ್ತವೆ ಎಂಬುದು ಜನಪ್ರಿಯ ನಂಬಿಕೆಯಾಗಿದೆ. ಆದರೆ ತಜ್ಞರು ಇದು ಎಲ್ಲಾ ಆಹಾರಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ. ಅಧ್ಯಯನಗಳ ಪ್ರಕಾರ, ಪ್ರೋಟೀನ್ ಮತ್ತು ವಿಟಮಿನ್‌ಗಳು ಸೇರಿದಂತೆ ಮಾಂಸದಲ್ಲಿನ ಪ್ರಮುಖ ಪೋಷಕಾಂಶಗಳು ಸಾಮಾನ್ಯ ಅಡುಗೆ ತಾಪಮಾನದಿಂದ ಪ್ರಭಾವಿತವಾಗುವುದಿಲ್ಲ. ಅದಕ್ಕಾಗಿಯೇ ಚಿಕನ್ ಅನ್ನು ಬೇಯಿಸುವುದರಿಂದ ಅದರ ಮೂಲ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುವುದಿಲ್ಲ.


ಆದರೆ ಕಚ್ಚಾ ಮಾಂಸವನ್ನು ತಿನ್ನುವ ಅಪಾಯಗಳು ಬೇಯಿಸಿದ ಮಾಂಸಕ್ಕಿಂತ ಹೆಚ್ಚು. ತಜ್ಞರು ಹೇಳುವಂತೆ ಬೇಯಿಸದ ಮಾಂಸವು ನಿಮಗೆ ಕ್ಯಾಂಪಿಲೋಬ್ಯಾಕ್ಟರ್‌ಗಳು ಮತ್ತು ಸಾಲ್ಮೊನೆಲ್ಲಾ ಸೋಂಕು ತರುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಥವಾ ಸಿಡಿಸಿ ಪ್ರಕಾರ, ಕ್ಯಾಂಪಿಲೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಂ ಕ್ಯಾಂಪಿಲೋಬ್ಯಾಕ್ಟೀರಿಯೊಸಿಸ್ ಅನ್ನು ಉಂಟುಮಾಡುತ್ತದೆ. ಇದು ಪ್ರಪಂಚದಾದ್ಯಂತ ಅತಿಸಾರ ಕಾಯಿಲೆಗೆ ಕಾರಣವಾಗುವ ಸಾಮಾನ್ಯ ಬ್ಯಾಕ್ಟೀರಿಯವಾಗಿದೆ.

ಇದನ್ನೂ ಓದಿ: Towel: ನೀವು ನಿತ್ಯ ಬಳಸುವ ಟವೆಲ್​ನಲ್ಲಿರುತ್ತೆ ಅಪಾಯಕಾರಿ ಬ್ಯಾಕ್ಟೀರಿಯಾಗಳು, ಶುಚಿತ್ವ ಕಾಪಾಡುವುದು ಹೇಗೆ?

ಸಾಲ್ಮೊನೆಲ್ಲಾ ಸಾಮಾನ್ಯವಾಗಿ ಪ್ರಾಣಿ ಮತ್ತು ಮಾನವನ ಕರುಳಿನಲ್ಲಿ ವಾಸಿಸುತ್ತದೆ. ಹಸಿ ಅಥವಾ ಬೇಯಿಸದ ಮಾಂಸ, ಚಿಕನ್ ಅಥವಾ ಮೊಟ್ಟೆಗಳನ್ನು ತಿನ್ನುವ ಮೂಲಕ ಅಥವಾ ಹಸಿ ಹಾಲು ಕುಡಿಯುವವರಲ್ಲಿ ಇದು ಗಂಭೀರವಾದ ಸೋಂಕನ್ನು ಉಂಟುಮಾಡುತ್ತದೆ. ಪ್ರಪಂಚದಾದ್ಯಂತ ಪ್ರತಿ ವರ್ಷ 60 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಹಾರದಿಂದ ಹರಡುವ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಸಿಡಿಸಿ ಹೇಳುತ್ತದೆ.

ಮಾಂಸವನ್ನು ಸಂಪೂರ್ಣವಾಗಿ ಬೇಯಿಸುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಕಚ್ಚಾ ಮಾಂಸವು ಹೆಚ್ಚಿನ ಪ್ರಮಾಣದ ತಾಮ್ರ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದರ ಮಿತಿಮೀರಿದ ಸೇವನೆಯು ತೀವ್ರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.

ಬ್ಯಾಕ್ಟೀರಿಯಾದ ಸೋಂಕು ಎಂದರೇನು?
ಬ್ಯಾಕ್ಟೀರಿಯಾದ ಸೋಂಕುಗಳು ಬ್ಯಾಕ್ಟೀರಿಯಾದ ಬೆಳವಣಿಗೆಯಿಂದ ಉಂಟಾಗುವ ಆರೋಗ್ಯ ತೊಂದರೆಯಾಗಿದೆ. ನಿಮ್ಮ ಚರ್ಮ, ಕರುಳು (ಜಿಐ ಟ್ರಾಕ್ಟ್), ಶ್ವಾಸಕೋಶಗಳು, ಹೃದಯ, ಮೆದುಳು, ರಕ್ತ ಅಥವಾ ನಿಮ್ಮ ದೇಹದಲ್ಲಿ ಎಲ್ಲಿಯಾದರೂ ಈ ಹಾನಿಕಾರಕ ಬ್ಯಾಕ್ಟೀರಿಯಾ ದಾಳಿ ನಡೆಸಿದರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳೇನು?:

ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳೆಂದರೆ ನಿಮ್ಮ ಚರ್ಮದ ಮೇಲೆ ಜ್ವರ, ದದ್ದುಗಳು, ಶೀತ, ಆಯಾಸ, ತಲೆನೋವು, ಅತಿಸಾರ, ಉಸಿರಾಟದ ತೊಂದರೆ, ಕುತ್ತಿಗೆ ಬಿಗಿತ, ವಾಕರಿಕೆ, ಕಡಿಮೆ ರಕ್ತದೊತ್ತಡ, ಕೆಮ್ಮು, ವಿಪರೀತ ಬೆವರುವುದು. ಈ ಸಮಸ್ಯೆಗಳು ಕಾಣಿಸಿಕೊಂಡರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ