ಟೊಮೇಟೊ ಬೆಲೆ ಕಡಿಮೆಯಾಗುತ್ತಿರುವುದರಿಂದ ಪ್ರತಿ ಮನೆಯಲ್ಲೂ ಟೊಮೇಟೊ ಮತ್ತೆ ಕಾಣಿಸಿಕೊಂಡಿದೆ. ಟೊಮೇಟೊದಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಅಲ್ಲದೆ ವಿಟಮಿನ್ ಇ ಇದ್ದು, ಥಯಾಮಿನ್, ನಿಯಾಸಿನ್, ವಿಟಮಿನ್ ಬಿ 6, ಮೆಗ್ನೀಸಿಯಮ್, ರಂಜಕ ಮತ್ತು ತಾಮ್ರದಿಂದಲೂ ಸಮೃದ್ಧವಾಗಿದೆ. ಮಳೆಗಾಲದಲ್ಲಿ ಟೊಮೇಟೊವನ್ನು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ಸೋಂಕು ಮತ್ತು ರೋಗಗಳಿಂದ ರಕ್ಷಿಸುತ್ತದೆ. ಆದರೆ ರೈತರು ತರಕಾರಿ, ಟೊಮೇಟೊ ( Tomatoes) ಬೆಳೆಗೆ ಬಹಳಷ್ಟು ಕೀಟನಾಶಕ ಬಳಸುತ್ತಾರೆ. ಅದಕ್ಕಾಗಿ ಅವುಗಳನ್ನು ಸ್ವಚ್ಛವಾಗಿ ತೊಳೆದ ನಂತರ ಬಳಸಬೇಕು (Health).
ಸಾವಯವ ಟೊಮೆಟೊಗಳ ಬಳಕೆ ಇನ್ನೂ ಉತ್ತಮವಾಗಿದೆ. 100 ಗ್ರಾಂ ಟೊಮೆಟೊದಲ್ಲಿರುವ ಪೋಷಕಾಂಶಗಳು ಯಾವುವು? ಸುಮಾರು 22 ಕ್ಯಾಲೋರಿಗಳು, 4.8 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 3.2 ಗ್ರಾಂ ಸಕ್ಕರೆ, 1.1 ಗ್ರಾಂ ಪ್ರೋಟೀನ್, 0.2 ಗ್ರಾಂ ಕೊಬ್ಬು, 1.5 ಗ್ರಾಮ್ ಫೈಬರ್ ಅನ್ನು ಹೊಂದಿರುತ್ತದೆ.
ಆಹಾರದಲ್ಲಿ ಟೊಮೆಟೊವನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಎಲ್ಡಿಎಲ್ ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಪದಾರ್ಥ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯುತ್ತದೆ. ಅವುಗಳಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಟೊಮೆಟೊದಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ಹೇರಳವಾಗಿರುವ ಕಾರಣ, ಇದು ಕಣ್ಣಿನ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಮತ್ತು ಕಣ್ಣುಗಳಿಗೆ ಒಳ್ಳೆಯದು. ಇದಲ್ಲದೆ, ಟೊಮೆಟೊಗಳು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಪದಾರ್ಥವು ಯುವಿ ನಂತಹ ಹಾನಿಕಾರಕ ಕಿರಣಗಳ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ಟೊಮೆಟೊದಲ್ಲಿ ಗ್ಲೈಸೆಮಿಕ್ (Glycemic index) ಕಡಿಮೆ. ಇವನ್ನು ಮಧುಮೇಹಿಗಳು ಸೇವಿಸಬಹುದು. ಆದರೆ ಇವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಮಾತ್ರ ತೆಗೆದುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಮರೆಯಬೇಡಿ.
ಟೊಮ್ಯಾಟೋ ಫೋಲೇಟ್ ಅನ್ನು ಹೊಂದಿರುತ್ತದೆ. ಭ್ರೂಣದ ನರ ಕೊಳವೆಯ ಬೆಳವಣಿಗೆಗೆ ಇದು ಅವಶ್ಯಕವಾಗಿದೆ. ಇವುಗಳಲ್ಲಿರುವ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ತಾಯಿ ಮತ್ತು ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಕೆಲವರಿಗೆ ಟೊಮೆಟೊ ಅಲರ್ಜಿ. ಅಂತಹವರು ಯಾಮಾರಿ ಟೊಮ್ಯಾಟೊ ತಿಂದರೆ ಚರ್ಮದಲ್ಲಿ ದದ್ದುಗಳು ಬರುವುದಲ್ಲದೆ ಜೀರ್ಣಾಂಗವ್ಯೂಹದ ತೊಂದರೆಯೂ ಉಂಟಾಗುತ್ತದೆ. ಟೊಮೆಟೊದಲ್ಲಿ ಮ್ಯಾಲಿಕ್ ಮತ್ತು ಸಿಟ್ರಿಕ್ ಆಮ್ಲ ಅಧಿಕವಾಗಿದೆ. ಇದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಟೊಮೆಟೊಗಳ ಅತಿಯಾದ ಸೇವನೆಯು ಜಠರ ಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಕೆಲವರು ಟೊಮೆಟೊ ತಿಂದರೆ ತೂಕ ಹೆಚ್ಚುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ.
ಟೊಮ್ಯಾಟೋ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಹಸಿ ಟೊಮ್ಯಾಟೊ ಬೇಯಿಸಿದಕ್ಕಿಂತ ಉತ್ತಮ ಮತ್ತು ಅವುಗಳನ್ನು ಬೇಯಿಸದೆ ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಸಎನ್ಬಹುದು . ಟೊಮೆಟೊವನ್ನು ಬೇಯಿಸುವುದು ವಾಸ್ತವವಾಗಿ ಲೈಕೋಪೀನ್‌ನ ಲಭ್ಯತೆಯನ್ನು ಹೆಚ್ಚಿಸುತ್ತದೆ. ಟೊಮೇಟೊ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬರಬಹುದು ಎಂಬ ತಪ್ಪು ಕಲ್ಪನೆಯೂ ಅನೇಕರಲ್ಲಿದೆ. ಟೊಮೆಟೊದಲ್ಲಿ ಆಕ್ಸಲೇಟ್ ಅಧಿಕವಿದ್ದರೂ, ಹಿತಮಿತವಾಗಿ ತಿಂದರೆ ಯಾವುದೇ ರೋಗ ಬರುವುದಿಲ್ಲ ಎಂಬುದು ಆರೋಗ್ಯ ತಜ್ಞರ ಸಲಹೆ.