ಮಾರಣಾಂತಿಕ ರೇಬಿಸ್ ರೋಗದ ಬಗ್ಗೆ ಈ ಸಂಗತಿಗಳು ತಿಳಿದಿರಲಿ

ಮನುಷ್ಯರಿಗೆ ರೇಬೀಸ್ ಹರಡುವಿಕೆಯು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯಿಂದ ಆಳವಾದ ಕಡಿತ ಅಥವಾ ಪರಚುವಿಕೆಯ ನಂತರ ಸಂಭವಿಸುತ್ತದೆ. ಸೋಂಕಿತ ಪ್ರಾಣಿಯ ಲಾಲಾರಸವು ಕಣ್ಣುಗಳು ಅಥವಾ ಬಾಯಿ ಅಥವಾ ತಾಜಾ ಚರ್ಮದ ಗಾಯಗಳ ಮೂಲಕ ನೇರ ಸಂಪರ್ಕಕ್ಕೆ ಬಂದರೆ ಈ ವೈರಸ್ ಹರಡಬಹುದು.

ಮಾರಣಾಂತಿಕ ರೇಬಿಸ್ ರೋಗದ ಬಗ್ಗೆ ಈ ಸಂಗತಿಗಳು ತಿಳಿದಿರಲಿ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Sep 08, 2023 | 7:07 PM

ಘಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿ ನಾಯಿ ಕಚ್ಚಿ 14 ವರ್ಷದ ಬಾಲಕ ಈ ವಾರ ಸಾವನ್ನಪ್ಪಿದ್ದ. ರೇಬಿಸ್‌ಗೆ ಬಲಿಯಾದ ಈ ಬಾಲಕನ ಮೇಲೆ 1 ತಿಂಗಳ ಹಿಂದೆ ನಾಯಿ ದಾಳಿ ಮಾಡಿತ್ತು. ಆದರೆ ಭಯದಿಂದ ಆತ ತನ್ನ ಪೋಷಕರಿಗೆ ಈ ಬಗ್ಗೆ ಹೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಬಾಲಕನ ಸಾವು ಬೀದಿನಾಯಿಗಳ ಕಾಟದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಹಾಗೇ, ಈ ಮಾರಣಾಂತಿಕ ವೈರಲ್ ಕಾಯಿಲೆಯ ಬಗ್ಗೆ ಆತಂಕ ಸೃಷ್ಟಿಸಿದೆ.

ರೇಬೀಸ್ ಮಾರಣಾಂತಿಕವಾದರೂ ತಡೆಗಟ್ಟಬಹುದಾದ ವೈರಲ್ ಕಾಯಿಲೆಯಾಗಿದ್ದು, ಇದು ಸೋಂಕಿತ ಪ್ರಾಣಿ ಕಚ್ಚುವುದರಿಂದ ಹರಡುತ್ತದೆ. ಈ ವೈರಸ್ ಸಸ್ತನಿಗಳ ನರಮಂಡಲದೊಳಗೆ ನುಸುಳುತ್ತದೆ. ಮೆದುಳಿನಲ್ಲಿ ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ. ನಂತರ ಆ ಜೀವಿ ಬದುಕುಳಿಯಲು ಸಾಧ್ಯವಿಲ್ಲ.

ಇದನ್ನೂ ಓದಿ: Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಾಯಿಗಳಿಂದಲೇ ಬಹುಪಾಲು ಮಾನವನಿಗೆ ರೇಬೀಸ್ ಹರಡುತ್ತದೆ. ಮನುಷ್ಯರಿಗೆ ಹರಡಿರುವ ರೇಬೀಸ್ ಪ್ರಕರಣಗಳಲ್ಲಿ ಶೇ. 99ರಷ್ಟು ನಾಯಿಯಿಂದಲೇ ಬಂದಿದೆ. ರೇಬೀಸ್‌ ಹರಡುವ ಇತರ ಪ್ರಾಣಿಗಳಲ್ಲಿ ಬೆಕ್ಕುಗಳು, ನರಿಗಳು ಮತ್ತು ಮುಂಗುಸಿಗಳು ಸೇರಿವೆ.

ಮನುಷ್ಯರಿಗೆ ರೇಬೀಸ್ ಹರಡುವಿಕೆಯು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯಿಂದ ಆಳವಾದ ಕಡಿತ ಅಥವಾ ಪರಚುವಿಕೆಯ ನಂತರ ಸಂಭವಿಸುತ್ತದೆ. ಸೋಂಕಿತ ಪ್ರಾಣಿಯ ಲಾಲಾರಸವು ಕಣ್ಣುಗಳು ಅಥವಾ ಬಾಯಿ ಅಥವಾ ತಾಜಾ ಚರ್ಮದ ಗಾಯಗಳ ಮೂಲಕ ನೇರ ಸಂಪರ್ಕಕ್ಕೆ ಬಂದರೆ ಈ ವೈರಸ್ ಹರಡಬಹುದು.

ಇದನ್ನೂ ಓದಿ: ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್

ರೇಬೀಸ್‌ನ ಲಕ್ಷಣಗಳೇನು?: ರೇಬೀಸ್‌ನ ಆರಂಭಿಕ ಲಕ್ಷಣಗಳು ಕಚ್ಚುವಿಕೆಯ ನಂತರ ಕೆಲವು ದಿನಗಳಿಂದ 1 ವರ್ಷದವರೆಗೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಜ್ವರ, ತಲೆನೋವು, ಸ್ನಾಯು ನೋವು, ಹಸಿವಿನ ಕೊರತೆ, ವಾಕರಿಕೆ ಮತ್ತು ಆಯಾಸದಂತಹ ರೋಗಲಕ್ಷಣಗಳೊಂದಿಗೆ ಕಚ್ಚಿದ ಜಾಗದ ಸುತ್ತಲೂ ಜುಮ್ಮೆನಿಸುವಿಕೆ, ಚುಚ್ಚುವಿಕೆ ಅಥವಾ ತುರಿಕೆಯನ್ನು ಒಳಗೊಂಡಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ