ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1: ಆತಂಕಕಾರಿ ಮಾಹಿತಿ ಬಹಿರಂಗ

ಕಲುಷಿತ ನೀರಿನಿಂದ ಹರಡುವ ಕಾಯಿಲೆಗಳಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಟೈಫಾಯ್ಡ್ ಮತ್ತು ಅತಿಸಾರ ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶಗಳಿಗಿಂತಲೂ ನಗರದಲ್ಲೇ ಹೆಚ್ಚು ವರದಿಯಾಗುತ್ತಿವೆ. ಟ್ಯಾಂಕರ್ ನೀರು, ಒಳಚರಂಡಿ ಮಿಶ್ರಿತ ನೀರು ಮುಖ್ಯ ಕಾರಣಗಳಾಗಿವೆ. ಬೇಸಿಗೆಯಲ್ಲಿ ಈ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದ್ದು, ಮಕ್ಕಳು ಮತ್ತು ಹಿರಿಯರೇ ಹೆಚ್ಚು ಬಾಧಿತರಾಗಿದ್ದಾರೆ.

ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1: ಆತಂಕಕಾರಿ ಮಾಹಿತಿ ಬಹಿರಂಗ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Feb 18, 2026 | 6:55 PM

ಬೆಂಗಳೂರು, ಫೆಬ್ರವರಿ 18: ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ. ಅತಿ ಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಟೈಫಾಯ್ಡ್ ಪೈಕಿ ಮೂರನೇ ಸ್ಥಾನ ಮತ್ತು ಅತಿಸಾರ ಪ್ರಕರಣಗಳಲಲ್ಲಿ 5ನೇ ನಂಬರ್​ನ ಕರ್ನಾಟಕ ಪಡೆದಿದ್ದು, ‌ಹಳ್ಳಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಯಾವ ವರ್ಷದಲ್ಲಿ ಎಷ್ಟು ಪ್ರಕರಣ?

ವರ್ಷ ಅತಿಸಾರ ಕೇಸ್​ ಟೈಫಾಯ್ಡ್ ಕೇಸ್​
2025 1.8 ಲಕ್ಷ 39,348
2024 1.8 ಲಕ್ಷ 45,641
2023 1.4 ಲಕ್ಷ 42,096
2022 1.3 ಲಕ್ಷ 28232

ಇದನ್ನೂ ಓದಿ: ಪೋಷಕರಿಗೆ ದೊಡ್ಡ ಸವಾಲಾದ ಮಕ್ಕಳ ಮೊಬೈಲ್ ಅಡಿಕ್ಷನ್; ನಿಮ್ಹಾನ್ಸ್ ಮೊರೆ ಹೋದ ಹೆತ್ತವರು

ಅಕ್ಯುಟ್‌ ಡಯಾರಿಯಲ್‌ ಡಿಸೀಸ್‌ ಲಕ್ಷಣಗಳು ಏನು?

  • ಭೇದಿ
  • ವಾಕರಿಕೆ ಜೊತೆಗೆ ವಾಂತಿ
  • ಕಿಬ್ಬೊಟ್ಟೆಯ ಸೆಳೆತ
  • ಹೊಟ್ಟೆನೋವು
  • ಜ್ವರ ಮತ್ತಿತರೆ ಲಕ್ಷಣ

ಮಕ್ಕಳು ಮತ್ತು ಹಿರಿಯರಲ್ಲೇ ಅಧಿಕ

2021ರಿಂದ 2025ರ ತನಕ ಕರ್ನಾಟಕದಲ್ಲಿ ಅತಿಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಖಾಯಿಲೆಗಳು ಪತ್ತೆಯಾಗಿದ್ದು, ರಾಜಧಾನಿಯಲ್ಲಿ ಕಲುಷಿತ ನೀರಿನ ಕಾರಣ ಪ್ರತಿ ದಿನ ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ಮೇಲಿಂದ ಮೆಲೆ ವರದಿಯಾಗ್ತಿವೆ. ಈ ನಡುವೆ ಬೇಸಿಗೆಯಲ್ಲಿ ಪ್ರಕರಣಗಳು ಮತ್ತಷ್ಟು ಹೆಚ್ಚಳ ಆಗುವ ಆತಂಕ ಕೂಡ ಇದ್ದು, ಪ್ರತಿ ದಿನ ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಟ್ಯಾಂಕರ್ ವಾಟರ್, ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಡ್ಜ್ ವಾಟರ್, ಪೈಪ್ ಲೈನ್​​ಗಳ ಕಲುಷಿತ ನೀರಿನಿಂದ ಅತಿಸಾರ ಪ್ರಕರಣಗಳು ದ್ವಿಗುಣಗೊಂಡಿವೆ. ಇದರಿಂದ ವಾಂತಿ, ಭೇದಿಯಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಜನ ಸಂಖ್ಯೆ ಹೆಚ್ಚಳವಾಗಿದೆ.‌ ಮಕ್ಕಳು ಮತ್ತು ಹಿರಿಯರಲ್ಲೇ ಈ ಸಮಸ್ಯೆ ಅಧಿಕವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.