ಲ್ಯಾಕ್ಟಿಕ್ ಆಮ್ಲ, ನೈಟ್ರಿಕ್ ಆಕ್ಸೈಡ್​ನಿಂದ ಕ್ಯಾನ್ಸರ್ ಕೋಶಗಳಲ್ಲಿ ಇಮ್ಯುನೊಥೆರಪಿ ಹೆಚ್ಚಳ; ವಿಜ್ಞಾನಿಗಳ ವರದಿ

|

Updated on: Dec 12, 2023 | 12:09 PM

ಇಮ್ಯುನೊಥೆರಪಿಯಲ್ಲಿ ಇಂಟರ್​ಫೆರಾನ್-ಗಾಮಾ ಎಂದು ಕರೆಯಲ್ಪಡುವ ಸೈಟೊಕಿನ್ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯು ಕ್ಯಾನ್ಸರ್ ಗೆಡ್ಡೆಗಳನ್ನು ತೊಡೆದುಹಾಕಲು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ. ಈ ಅಧ್ಯಯನದಲ್ಲಿ ಸಂಶೋಧಕರು ಇಂಟರ್​ಫೆರಾನ್-ಗಾಮಾ ಆ್ಯಕ್ಟಿವ್ ಆಗಲು ವಿವಿಧ ರೀತಿಯ ಕ್ಯಾನ್ಸರ್ ಕೋಶಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ಲ್ಯಾಕ್ಟಿಕ್ ಆಮ್ಲ, ನೈಟ್ರಿಕ್ ಆಕ್ಸೈಡ್​ನಿಂದ ಕ್ಯಾನ್ಸರ್ ಕೋಶಗಳಲ್ಲಿ ಇಮ್ಯುನೊಥೆರಪಿ ಹೆಚ್ಚಳ; ವಿಜ್ಞಾನಿಗಳ ವರದಿ
ಕ್ಯಾನ್ಸರ್
Image Credit source: iStock
Follow us on

ಬೆಂಗಳೂರು: ಚಿಕಿತ್ಸೆಗೆ ಪ್ರತಿಕ್ರಿಯಿಸದ ಕ್ಯಾನ್ಸರ್ ಕೋಶಗಳು ಇಮ್ಯುನೊಥೆರಪಿಗೆ ಉತ್ತಮವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುವ ಹೊಸ ವಿಧಾನಗಳನ್ನು ಐಐಎಸ್‌ಸಿಯ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಕ್ಯಾನ್ಸರ್ ಕೋಶಗಳು ಇಮ್ಯುನೊಥೆರಪಿಗೆ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಈ ಅಧ್ಯಯನದ ಬಗ್ಗೆ ಫ್ರಾಂಟಿಯರ್ಸ್ ಇನ್ ಇಮ್ಯುನಾಲಜಿಯಲ್ಲಿ ಪ್ರಕಟಿಸಲಾಗಿದೆ.

ಇಮ್ಯುನೊಥೆರಪಿಯಲ್ಲಿ ಇಂಟರ್​ಫೆರಾನ್-ಗಾಮಾ (IFN-^) ಎಂದು ಕರೆಯಲ್ಪಡುವ ಸೈಟೊಕಿನ್ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯು ಕ್ಯಾನ್ಸರ್ ಗೆಡ್ಡೆಗಳನ್ನು ತೊಡೆದುಹಾಕಲು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ. ಈ ಅಧ್ಯಯನದಲ್ಲಿ ಸಂಶೋಧಕರು ಇಂಟರ್​ಫೆರಾನ್-ಗಾಮಾ ಆ್ಯಕ್ಟಿವ್ ಆಗಲು ವಿವಿಧ ರೀತಿಯ ಕ್ಯಾನ್ಸರ್ ಕೋಶಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೆಲವು ರೀತಿಯ ಜೀವಕೋಶಗಳು ಮಾತ್ರ ಪ್ರೋಟೀನ್ ಸಕ್ರಿಯಗೊಳಿಸುವಿಕೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ ಎಂದು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ವಿಜ್ಞಾನಿಗಳು ಲ್ಯಾಬ್‌ನಲ್ಲಿ ಕ್ಯಾನ್ಸರ್ ಕೋಶಗಳಿಗೆ IFN-^ ಮೂಲಕ ಚಿಕಿತ್ಸೆ ನೀಡಿದರು. ಆಗ ಜೀವಕೋಶದ ಬೆಳವಣಿಗೆಯ ಮಾಧ್ಯಮದ ಬಣ್ಣವು ಹಳದಿ ಬಣ್ಣಕ್ಕೆ ಬದಲಾಗಿದೆ ಎಂದು ಕಂಡುಹಿಡಿದರು. ಇದು ಜೀವಕೋಶಗಳು ಲ್ಯಾಕ್ಟಿಕ್ ಆಮ್ಲವನ್ನು ಬಿಡುಗಡೆ ಮಾಡುತ್ತಿದೆ ಎಂದು ಸೂಚಿಸುತ್ತದೆ. ಯಕೃತ್ತು ಮತ್ತು ಮೂತ್ರಪಿಂಡದಿಂದ ಪಡೆದ ಕ್ಯಾನ್ಸರ್ ಜೀವಕೋಶದ ರೇಖೆಗಳು IFN-^ ಸಕ್ರಿಯಗೊಳಿಸುವಿಕೆಯ ಮೇಲೆ ನೈಟ್ರಿಕ್ ಆಕ್ಸೈಡ್ (NO) ಮತ್ತು ಲ್ಯಾಕ್ಟಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸಿವೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ವಿಷಕಾರಿ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳ (ROS) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಆಕ್ಸಿಡೇಟಿವ್ ಹಾನಿಗೆ ಕಾರಣವಾಗುತ್ತದೆ ಹಾಗೂ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ