ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿಯಾದರೂ ಬರಬಹುದು. ಸಾಮಾನ್ಯವಾಗಿ ಶ್ವಾಸಕೋಶ, ಸ್ತನ, ಹೊಟ್ಟೆಯ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಕೇಳಿರಬಹುದು. ಅದರ ಜೊತೆಗೆ ತುಟಿಯ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಇತರ ಕ್ಯಾನ್ಸರ್ಗಳಿಗೆ ಹೋಲಿಸಿದರೆ ಇದರ ಪ್ರಕರಣಗಳು ಕಡಿಮೆಯಾದರೂ, ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗಾದರೆ ಇದರ ರೋಗಲಕ್ಷಣಗಳೇನು? ಇದನ್ನು ತಡೆಯುವುದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತುಟಿಗಳ ಚರ್ಮದ ಮೇಲೆ ಕ್ಯಾನ್ಸರ್ ಉಂಟಾಗುತ್ತದೆ. ಇದು ಮೇಲಿನ ಅಥವಾ ಕೆಳಗಿನ ತುಟಿಯಲ್ಲಿ ಎಲ್ಲಿಯಾದರೂ ಕಂಡು ಬರಬಹುದು. ಆದರೆ ಇದು ಸಾಮಾನ್ಯವಾಗಿ ಕೆಳ ತುಟಿಯಲ್ಲಿ ಹೆಚ್ಚು ಕಂಡು ಬರುತ್ತವೆ. ಇದನ್ನು ಒಂದು ರೀತಿಯ ಬಾಯಿಯ ಕ್ಯಾನ್ಸರ್ ಎಂದು ಪರಿಗಣಿಸಲಾಗಿದ್ದು, ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ತುಟಿಗಳ ಸುತ್ತಲೂ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಕ್ಯಾನ್ಸರ್ ಉಂಟಾಗುತ್ತದೆ.
ಡಾ. ವಿನೀತ್ ತಲ್ವಾರ್ ಅವರು ಹೇಳುವ ಪ್ರಕಾರ ಸಿಗರೇಟ್, ತಂಬಾಕು ಮತ್ತು ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ತುಟಿಯ ಕ್ಯಾನ್ಸರ್ ಬರಬಹುದು. ಸಿಗರೇಟಿನಿಂದಾಗಿ ತುಟಿಗಳು ಕಪ್ಪಾಗುವುದು ಮತ್ತು ಬಿಳಿ ಚರ್ಮ ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಈ ರೋಗದ ಅಪಾಯ ಹೆಚ್ಚು ಎಂದು ಹೇಳಲಾಗುತ್ತದೆ.
ಬಿಳಿ ತುಟಿಗಳು (ಬಿಳಿ ತೇಪೆ ಕಂಡುಬರುವುದು)
ತುಟಿಯ ಮೇಲೆ ಹುಣ್ಣು ಕಾಣಿಸಿಕೊಳ್ಳುವುದು, ಇದು ಏನೂ ಮಾಡಿದರೂ ಕಡಿಮೆಯಾಗದಿರುವುದು.
ತುಟಿಗಳು ಅಥವಾ ಬಾಯಿಯ ಸುತ್ತ ನೋವು ಅಥವಾ ಮರಗಟ್ಟುವಿಕೆ ಉಂಟಾಗುವುದು.
ಇದನ್ನೂ ಓದಿ: ಬೂದುಗುಂಬಳಕಾಯಿ ಸಿಹಿ ತಿಂಡಿ ಮಾಡಲು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು
ಧೂಮಪಾನದಿಂದ ಆದಷ್ಟು ದೂರವಿರಿ. ನೀವು ಈಗಾಗಲೇ ತಂಬಾಕು ಸೇವನೆ ಮಾಡುತ್ತಿದ್ದರೆ, ಅದನ್ನು ತ್ಯಜಿಸುವುದು ಉತ್ತಮ.
ತಂಬಾಕು ಬಳಕೆ, ಸಿಗರೇಟು, ನಿಮ್ಮ ತುಟಿಗಳ ಜೀವಕೋಶಗಳನ್ನು ಹಾನಿಗೊಳಿಸಬಹುದು. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.
(ಸೂಚನೆ: ಈ ವಿಷಯಗಳು ನಿಮ್ಮ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಿ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ