World Menstrual Hygiene Day 2023: ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಪ್ರತೀ ಮಹಿಳೆ ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ

|

Updated on: May 27, 2023 | 3:14 PM

ನೀವು ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌, ಮೆನ್‌ಸ್ಟ್ರಲ್ ಕಪ್ ಅಥವಾ ಬಟ್ಟೆಗಳನ್ನು ಬಳಸುತ್ತಿದ್ದರೆ, ಅದನ್ನು ಸರಿಯಾಗಿ ಬಳಸುವ ಕ್ರಮ,ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು ಮುಂತಾದ ವಿಷಯಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

World Menstrual Hygiene Day 2023: ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಪ್ರತೀ ಮಹಿಳೆ ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ
Menstrual Hygiene Day 2023(ವಿಶ್ವ ಮುಟ್ಟಿನ ನೈರ್ಮಲ್ಯ ದಿನ)
Image Credit source: RIO Pads
Follow us on

ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಟ್ಟಿನ ಸಮಯದಲ್ಲಿ ಅನುಸರಿಸಬೇಕಾದ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲು ಪ್ರತಿ ವರ್ಷ ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ . ಈ ವಿಶೇಷ ದಿನವನ್ನು 2014ರಿಂದ ಆಚರಣೆಗೆ ತರಲಾಯಿತು. ಮುಟ್ಟಿನ ನೈರ್ಮಲ್ಯದ ಮಹತ್ವವನ್ನು ಎತ್ತಿ ಹಿಡಿಯಲು, ಮುಟ್ಟಿನ ಸುತ್ತಲಿನ ಕಳಂಕವನ್ನು ತೊಡೆದುಹಾಕಲು ಮತ್ತು ಮುಟ್ಟಿನ ಸಮಯದಲ್ಲಿ ಬಳಸಲಾಗುವ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. UNICEF ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1.8 ಶತಕೋಟಿ ಜನರು ಪ್ರತಿ ತಿಂಗಳು ಋತುಮತಿಯಾಗುತ್ತಾರೆ. ಅವರಲ್ಲಿ ಸಾಕಷ್ಟು ಮಹಿಳೆಯರು ಲಿಂಗ ಅಸಮಾನತೆ, ತಾರತಮ್ಯದ ಸಾಮಾಜಿಕ ನಿಯಮಗಳು, ಸಾಂಸ್ಕೃತಿಕ ನಿಷೇಧಗಳು, ಬಡತನ ಮತ್ತು ಶೌಚಾಲಯಗಳು ಮತ್ತು ನೈರ್ಮಲ್ಯ ಉತ್ಪನ್ನಗಳಂತಹ ಮೂಲಭೂತ ಸೇವೆಗಳ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ.

ಮುಟ್ಟಿನ ನೈರ್ಮಲ್ಯ ಎಂದರೇನು?

ಗರ್ಭಾಶಯವು ಗರ್ಭಾಶಯದ ಒಳಪದರದಿಂದ ರಕ್ತ ಮತ್ತು ಅಂಗಾಂಶವನ್ನು ಚೆಲ್ಲುತ್ತದೆ. ಇದು ಯೋನಿಯ ಮೂಲಕ ದೇಹದಿಂದ ಹೊರ ಬಂದಾಗ ಮುಟ್ಟು ಸಂಭವಿಸುತ್ತದೆ. ಈ ಸಮಯದಲ್ಲಿ ಪ್ರತೀ ಮಹಿಳೆಯರು ಯೋನಿಯ ಭಾಗಗಳನ್ನು ಅತ್ಯಂತ ನೈರ್ಮಲ್ಯದಿಂದ ಇಟ್ಟುಕೊಳ್ಳುವುದು ಅಗತ್ಯ. ಈ ಸಮಯದಲ್ಲಿ ನಿರ್ಲಕ್ಷ್ಯ ತೋರಿದರೆ ಗರ್ಭಾಶಯ, ಚರ್ಮ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಜೊತೆಗೆ ನೀವು ಬಳಸುವಂತಹ ಪ್ಯಾಡ್​​​ ಮುಂತಾದ ಯಾವುದೇ ಉತ್ಪನ್ನಗಳ ಬಗ್ಗೆ ಸರಿಯಾದ ತಿಳಿದುಕೊಂಡು ಉಪಯೋಗಿಸುವುದು ಅಗತ್ಯ.

ಮುಟ್ಟಿನ ನೈರ್ಮಲ್ಯ ದಿನವನ್ನು ಮೇ 28 ರಂದು ಏಕೆ ಆಚರಿಸಲಾಗುತ್ತದೆ?

ಮುಟ್ಟಿನ ನೈರ್ಮಲ್ಯ ದಿನವನ್ನು ಪ್ರತಿ ವರ್ಷ ಐದನೇ ತಿಂಗಳ 28 ನೇ ದಿನದಂದು ಆಚರಿಸಲಾಗುತ್ತದೆ ಏಕೆಂದರೆ ಮುಟ್ಟಿನ ಚಕ್ರವು ಸರಾಸರಿ 28 ದಿನಗಳು ಮತ್ತು ಪ್ರತಿ ತಿಂಗಳು ಮಹಿಳೆಯರಲ್ಲಿ ಐದು ದಿನಗಳವರೆಗೆ ರಕ್ತಸ್ರಾವ ಇರುತ್ತದೆ.

ಇದನ್ನೂ ಓದಿ: ನಿಮ್ಮ ಥೈರಾಯ್ಡ್ ಆರೋಗ್ಯವನ್ನು ಸುಧಾರಿಸಲು 7 ಭಾರತೀಯ ಗಿಡಮೂಲಿಕೆಗಳು

ಮುಟ್ಟಿನ ನೈರ್ಮಲ್ಯ ದಿನ 2023 ರ ಧ್ಯೇಯ:

2030 ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವ ಧ್ಯೇಯವನ್ನು ಹೊಂದಿದೆ.

ಮುಟ್ಟಿನ ನೈರ್ಮಲ್ಯಕ್ಕಾಗಿ ಕೆಲವೊಂದು ಸಲಹೆಗಳು:

  • ಋತುಸ್ರಾವದ ಸಮಯದಲ್ಲಿ ನೀವು ಯಾವುದೇ ಮಟ್ಟಿಗೆ ಸಂಬಂಧಿಸಿದ ಉತ್ಪನ್ನವನ್ನು ಬಳಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ.
  • ಮುಟ್ಟಿನ ಉತ್ಪನ್ನಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಬೇಡಿ ಮತ್ತು ಬದಲಿಗೆ ಅವುಗಳನ್ನು ಟಾಯ್ಲೆಟ್ ಪೇಪರ್ ಅಥವಾ ಟಿಶ್ಯೂನಿಂದ ಸುತ್ತಿ ಡಸ್ಟ್‌ಬಿನ್‌ನಲ್ಲಿ ಹಾಕಿ.
  • ರಕ್ತಸ್ರಾವ ಕಡಿಮೆ ಇದ್ದರೂ ಕೂಡ ಪ್ರತಿ 3 ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕು.
  • ನೀವು ಸ್ಯಾನಿಟರಿ ಪ್ಯಾಡ್‌ಗಳ ಬದಲಾಗಿ ಟ್ಯಾಂಪೂನ್​​​​ಗಳನ್ನು ಬಳಸುತ್ತಿದ್ದರೆ, ಪ್ರತಿ 4-8 ಗಂಟೆಗಳಿಗೊಮ್ಮೆ ಬದಲಾಯಿಸಿ.
  • ಮೆನ್‌ಸ್ಟ್ರಲ್ ಕಪ್​​​ಗಳನ್ನು ಬಳಸುತ್ತಿದ್ದರೆ, ಒಂದು ದಿನದ ಬಳಕೆಯ ನಂತರ ಅವುಗಳನ್ನು ಸ್ವಚ್ಛಗೊಳಿಸಿ. ಜೊತೆಗೆ 5 ದಿನಗಳ ನಂತರ ಕೆಲವು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಹಾಕಿ, ಸ್ವಚ್ಛಗೊಳಿಸಿ ಇಡಿ.
  • ಋತು ಸ್ರಾವದ ಸಮಯದಲ್ಲಿ ಯೋನಿಯ ಭಾಗಗಳನ್ನು ತೊಳೆದ ನಂತರ ಟಿಶ್ಯೂ ಪೇಪರ್​ನಿಂದ ಸರಿಯಾಗಿ ನಿಮ್ಮ ದೇಹದ ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿ. ಆ ಪ್ರದೇಶವನ್ನು ಎಂದಿಗೂ ಒದ್ದೆಯಾಗಿ ಇಟ್ಟುಕೊಳ್ಳಬೇಡಿ.
  • ಋತುಸ್ರಾವದ ಸಮಯದಲ್ಲಿ ದೇಹವನ್ನು ತೇವಾಂಶದಿಂದಿಟ್ಟುಕೊಳ್ಳಲು ಸಾಕಷ್ಟು ನೀರು ಹಾಗೂ ಹಣ್ಣಿನ ರಸವನ್ನು ಕುಡಿಯುವುದು ಅಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: