Menstrual Hygiene: ಋತುಚಕ್ರದ ಸಮಯದಲ್ಲಿ ನೀವು ಈ ತಪ್ಪುಗಳನ್ನು ಮಾಡುತ್ತೀರಾ? ಕ್ಯಾನ್ಸರ್ ಬರಬಹುದು ಹುಷಾರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 17, 2024 | 3:39 PM

ಹದಿಹರೆಯದ ಸಮಯದಲ್ಲಿ, ಋತುಚಕ್ರ ಪ್ರಾರಂಭವಾದಾಗ ಹುಡುಗಿಯರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ ಜೊತೆಗೆ ಒಂದಿಷ್ಟು ಅನುಮಾನಗಳು ಕಾಡುತ್ತವೆ. ಆದರೆ ಯಾರೂ ಸಾರ್ವಜನಿಕವಾಗಿ ಅದನ್ನು ಮಾತನಾಡುವುದಿಲ್ಲ. ಇಂದಿಗೂ ಅಂಗಡಿಗಳಿಗೆ ಹೋಗಿ ಪ್ಯಾಡ್ ಕೇಳುವಾಗ ಒಂದು ರೀತಿಯ ಮುಜುಗರ ಕಾಡುತ್ತದೆ. ಈ ತಿಳುವಳಿಕೆಯ ಕೊರತೆಯಿಂದಾಗಿ, ಸಮಸ್ಯೆಗಳು ಉದ್ಭವಿಸುತ್ತವೆ, ಅದಕ್ಕಾಗಿಯೇ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಮತ್ತು ಈ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Menstrual Hygiene: ಋತುಚಕ್ರದ ಸಮಯದಲ್ಲಿ ನೀವು ಈ ತಪ್ಪುಗಳನ್ನು ಮಾಡುತ್ತೀರಾ? ಕ್ಯಾನ್ಸರ್ ಬರಬಹುದು ಹುಷಾರ್
ಸಾಂದರ್ಭಿಕ ಚಿತ್ರ
Follow us on

ಋತುಚಕ್ರವು ಹೆಣ್ಣಿನ ಜೀವನದಲ್ಲಿ ನಡೆಯುವ ಬಹಳ ಸಾಮಾನ್ಯವಾದ ಶಾರೀರಿಕ ಪ್ರಕ್ರಿಯೆ. ಆದರೂ ಮುಟ್ಟಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯ ಆತಂಕ ಇದ್ದೆ ಇರುತ್ತದೆ. ಒಂದು ಕಡೆ ಸೋರಿಕೆಯ ಭಯ, ಇನ್ನೊಂದು ಕಡೆ ನೋವು. ಇನ್ನು ಋತುಚಕ್ರ ಸರಿಯಾಗಿ ಆಗದಿದ್ದರೂ ಕೂಡ ಭಯವಾಗುತ್ತದೆ. ಹದಿಹರೆಯದ ಸಮಯದಲ್ಲಿ, ಋತುಚಕ್ರ ಪ್ರಾರಂಭವಾದಾಗ ಹುಡುಗಿಯರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ ಜೊತೆಗೆ ಒಂದಿಷ್ಟು ಅನುಮಾನಗಳು ಕಾಡುತ್ತವೆ. ಆದರೆ ಯಾರೂ ಸಾರ್ವಜನಿಕವಾಗಿ ಅದನ್ನು ಮಾತನಾಡುವುದಿಲ್ಲ. ಇಂದಿಗೂ ಅಂಗಡಿಗಳಿಗೆ ಹೋಗಿ ಪ್ಯಾಡ್ ಕೇಳುವಾಗ ಒಂದು ರೀತಿಯ ಮುಜುಗರ ಕಾಡುತ್ತದೆ. ಈ ತಿಳುವಳಿಕೆಯ ಕೊರತೆಯಿಂದಾಗಿ, ಸಮಸ್ಯೆಗಳು ಉದ್ಭವಿಸುತ್ತವೆ, ಅದಕ್ಕಾಗಿಯೇ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಕ್ಯಾನ್ಸರ್ ಗೆ ಕಾರಣವಾಗಬಹುದು

ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಇದು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಮುಟ್ಟಿನ ಸಮಯದ ನೈರ್ಮಲ್ಯದ ಕೊರತೆಯು ಮೂತ್ರನಾಳದ ಸೋಂಕು ಮತ್ತು ಗರ್ಭಕಂಠದ ಕ್ಯಾನ್ಸರ್ ನಂತಹ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ಬಟ್ಟೆಗಳ ಬದಲು ಸ್ಯಾನಿಟರಿ ಪ್ಯಾಡ್ ಗಳು, ಮುಟ್ಟಿನ ಕಪ್ ಗಳು ಮತ್ತು ಟ್ಯಾಂಪೂನ್ ಗಳನ್ನು ಬಳಸಬಹುದು. ಇದು ನಿಮಗೆ ತುಂಬಾ ಸುರಕ್ಷಿತ.

ಇದನ್ನೂ ಓದಿ: ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ

ಇದನ್ನು ಮಾತ್ರ ಮರೆಯಬೇಡಿ:

ದೀರ್ಘಕಾಲದವರೆಗೆ ಸ್ಯಾನಿಟರಿ ನ್ಯಾಪ್ಕಿನ್ ಬಳಸಬೇಡಿ. ಪ್ಯಾಡ್ ಅನ್ನು ಪ್ರತಿ 4 ಗಂಟೆಗಳಿಗೊಮ್ಮೆ ಬದಲಾಯಿಸುವುದು ಒಳ್ಳೆಯದು. ಒಂದೇ ಸ್ಯಾನಿಟರಿ ಪ್ಯಾಡ್ ನ ದೀರ್ಘಕಾಲದ ಬಳಕೆಯು ಯೋನಿ ಸಂಬಂಧಿತ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿ 5 ಗಂಟೆಗಳಿಗೊಮ್ಮೆ ಟ್ಯಾಂಪೂನ್ ಅನ್ನು ಬದಲಿಸಿ. ಮುಟ್ಟಿನ ಕಪ್ ಅನ್ನು 8- 10 ಗಂಟೆಗಳ ಕಾಲ ಬಳಸಬಹುದು. ಆದರೆ ಈ ಕಪ್ ಅನ್ನು ಚೆನ್ನಾಗಿ ತೊಳೆಯಬೇಕು ಅಂದರೆ ಬಳಕೆ ಮಾಡಿದ ನಂತರ ಇದನ್ನು ಬೆಚ್ಚಗಿನ ನೀರು ಮತ್ತು ದ್ರವ ಸಾಬೂನಿನಿಂದ ತೊಳೆಯುವುದು ಉತ್ತಮ. ಮುಟ್ಟಿನ ಕಪ್ ಗಳು, ಸ್ಯಾನಿಟರಿ ಪ್ಯಾಡ್ ಗಳ ಬಳಕೆಯ ಮೊದಲು ಮತ್ತು ನಂತರ ಸಾಬೂನಿನಿಂದ ಕೈಗಳನ್ನು ತೊಳೆಯಿರಿ. ಮುಟ್ಟಿನ ಸಮಯದಲ್ಲಿ ಖಾಸಗಿ ಭಾಗಗಳನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳುವುದನ್ನು ಮರೆಯಬೇಡಿ. ಈ ಭಾಗದಲ್ಲಿ ಯಾವುದೇ ರೀತಿಯ ಅಲರ್ಜಿ, ನೋವು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಅದರ ಹೊರತು ನೀವಾಗಿಯೇ ಯಾವುದೇ ರೀತಿಯ ಔಷಧಗಳನ್ನು ಬಳಸಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ