ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ

ರಾತ್ರಿ ಮಲಗುವ ಮುಂಚೆ ನಾಳೆ ಬೆಳಗ್ಗೆ ಏನು ತಿಂಡಿ ಮಾಡೋದು ಎನ್ನುವ ಯೋಚನೆ ಎಲ್ಲಾ ಮಹಿಳೆಯರದ್ದು. ದೋಸೆ ಮಾಡಿದರೆ ಸಾಕಾಗುವುದಿಲ್ಲ, ಅದರ ಜೊತೆಗೆ ಚಟ್ನಿಯೋ ಸಾಂಬಾರೋ ನೆಚ್ಚಿ ಕೊಳ್ಳಲು ಇರಲೇಬೇಕು. ಆದರೆ ಕರಾವಳಿ ಶೈಲಿಯ ಮಸಾಲೆ ನೀರುದೋಸೆ ಮಾಡಿದರೆ ಚಟ್ನಿಯ ಅಗತ್ಯವೇ ಇಲ್ಲ. ಮನೆಯಲ್ಲಿರುವ ಕೆಲವೇ ಕೆಲವು ಐಟಂ ಬಳಸಿ ಮಾಡಬಹುದಾದ ಈ ದೋಸೆಯೂ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ
ಮಸಾಲೆ ನೀರುದೋಸೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 17, 2024 | 3:08 PM

ಕರಾವಳಿಯಲ್ಲಿ ಸಖತ್ ಫೇಮಸ್ ತಿಂಡಿ ಎಂದರೆ ನೀರುದೋಸೆ. ಆದರೆ ತೆಳ್ಳನೆಯ ಮಸಾಲೆ ದೋಸೆಯೂ ಕೂಡ ಇಲ್ಲಿ ಫೇಮಸ್. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಈ ದೋಸೆಯನ್ನು ಮಸಾಲೆಯನ್ನು ಸೇರಿಸಿ ಮಾಡಬಹುದು. ಸಿಹಿ ಖಾರ ಮಿಶ್ರಿತ ಈ ದೋಸೆ ತೆಳ್ಳಗೆಯಿದ್ದು ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಮನೆಯಲ್ಲಿರುವ ಈ ಕೆಲವು ಕೆಲವು ಐಟಂಗಳಿದ್ದರೆ ಮಸಾಲೆ ನೀರುದೋಸೆ ರೆಡಿಯಾದ್ದಂತೆಯೇ.

ಮಸಾಲೆ ನೀರು ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

* ದೋಸೆ ಅಕ್ಕಿ

* ಈರುಳ್ಳಿ

* ತೆಂಗಿನ ತುರಿ

* ಅರ್ಧ ಚಮಚ ಜೀರಿಗೆ ಬೀಜ

* ಒಂದು ಚಮಚ ಕೊತ್ತಂಬರಿ ಬೀಜ

* ಬೆಲ್ಲ

* ಘಾಟಿ ಮೆಣಸು

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಫ್ರಿಡ್ಜ್​​​​ನಲ್ಲಿ ಇಡುವ ಆಹಾರವನ್ನು ಎಷ್ಟು ಸಮಯದೊಳಗೆ ಸೇವನೆ ಮಾಡಬೇಕು ಗೊತ್ತಾ?

ಮಸಾಲೆ ನೀರು ದೋಸೆ ಮಾಡುವ ವಿಧಾನ

* ದೋಸೆ ಅಕ್ಕಿಯನ್ನು ನಾಲ್ಕರಿಂದ ಐದು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.

* ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಈರುಳ್ಳಿ, ತೆಂಗಿನಕಾಯಿ ತುರಿ, ಜೀರಿಗೆ, ಒಂದು ಚಮಚದಷ್ಟು ಕೊತ್ತಂಬರಿ ಬೀಜ, ಬೆಲ್ಲ, ಮೂರರಿಂದ ನಾಲ್ಕು ಘಾಟಿ ಮೆಣಸು ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ನಂತರದಲ್ಲಿ ಈ ಹಿಟ್ಟಿಗೆ ಉಪ್ಪು ಹಾಗೂ ಬೇಕಿದ್ದರೆ ನೀರು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.

* ಬಿಸಿ ತವಾದ ಮೇಲೆ ದೋಸೆ ಹಿಟ್ಟು ಹಾಕಿ. ಅದನ್ನು ಒಂದು ಪ್ಲೇಟ್ ನಿಂದ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ನಿಮಿಷ ಬೇಯಿಸಿದರೆ ಮಸಾಲೆ ನೀರು ದೋಸೆ ಸವಿಯಲು ಸಿದ್ಧ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್