Kannada News Photo gallery Raksha Bandhan 2024 : These are best traditional gift for your sister on raksha Bandhan Kannada News
Raksha Bandhan 2024: ನಿಮ್ಮ ತಂಗಿಗೆ ಈ ಸಾಂಪ್ರದಾಯಿಕ ಉಡುಗೊರೆ ನೀಡಿ ಖುಷಿ ಪಡಿಸಿ
ಒಡಹುಟ್ಟಿದವರ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಬಲಪಡಿಸಿ ಭಾವನಾತ್ಮಕ ಸಂಕೇತವಾಗಿ ಆಚರಿಸುವ ಹಬ್ಬವೇ ಈ ರಕ್ಷಾ ಬಂಧನ. ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಈ ದಿನವನ್ನು ಸಂಭ್ರಮಿಸುತ್ತಾರೆ. ಅಣ್ಣನು ತನ್ನ ಕೈಗೆ ರಾಖಿ ಕಟ್ಟಿದ ಅಕ್ಕ ಅಥವಾ ತಂಗಿ ಏನಾದರೂ ಉಡುಗೊರೆ ಕೊಡೋದು ವಾಡಿಕೆ. ಈ ವಿಶೇಷವಾದ ದಿನದಂದು ನಿಮ್ಮ ತಂಗಿ ಅಥವಾ ಅಕ್ಕನಿಗೆ ಈ ಸಾಂಪ್ರದಾಯಿಕ ಉಡುಗೆಯನ್ನು ನೀಡಿ ಅವರನ್ನು ಖುಷಿ ಪಡಿಸಬಹುದು.
ಮನೆಯ ಸಿಂಗಾರಕ್ಕೆ ಸಾಂಪ್ರದಾಯಿಕ ಅಲಂಕಾರಿಕ ವಸ್ತುಗಳು : ಅಣ್ಣ ತಮ್ಮನು ತನ್ನ ತಂಗಿ ಅಥವಾ ಅಕ್ಕನಿಗೆ ವಿಶೇಷವಾಗಿ ಮನೆಯ ಸಾಂಪ್ರದಾಯಿಕ ಅಲಂಕಾರಿಕ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಹುದು. ತಂಗಿಯೂ ಸದಾ ಮನೆಯ ಸ್ವಚ್ಛತೆ ಹಾಗೂ ಅಲಂಕಾರಕ್ಕೆ ಒತ್ತು ನೀಡುವವರಾಗಿದ್ದರೆ ಸಾಂಪ್ರದಾಯಿಕ ಅಲಂಕಾರಿಕ ವಸ್ತುಗಳು ಬೆಸ್ಟ್. ವಿವಿಧ ಬಗೆಯ ಸಾಂಪ್ರದಾಯಿಕ ಶೋ ಕೇಸ್ ಐಟಂಗಳನ್ನು ನೀಡಿದರೆ ಖಂಡಿತ ಖುಷಿಯಾಗುತ್ತದೆ.
1 / 5
ಆಭರಣಗಳು : ತಂಗಿಯ ಸಂತೋಷವನ್ನೇ ಬಯಸುವ ಅಣ್ಣನು ತಂಗಿಗೆ ಈ ವಿಶೇಷ ದಿನದಂದು ಆಭರಣವನ್ನು ನೀಡಿದರೆ ಆಕೆಯು ಖುಷಿಪಡುತ್ತಾಳೆ. ಈಗಿನ ಕಾಲಕ್ಕೆ ಆಭರಣದ ಬೆಲೆಯೂ ಗಗನಕ್ಕೆರುತ್ತಿದ್ದೂ, ನೀವು ನೀಡುವ ಸಣ್ಣ ಆಭರಣವು ಆಕೆಗೆ ಇಷ್ಟವಾಗುತ್ತದೆ. ಹೀಗಾಗಿ ವಿವಿಧ ವಿನ್ಯಾಸದ ನೆಕ್ಲೇಸ್, ರಿಂಗ್, ಬ್ರೇಸ್‌ಲೆಟ್ ನಂತಹ ಉಡುಗೊರೆಯಾಗಿ ಆಯ್ಕೆ ಮಾಡಿಕೊಳ್ಳಬಹುದು.
2 / 5
ಓದುವ ಹವ್ಯಾಸವಿದ್ದರೆ ಪುಸ್ತಕ : ನಿಮ್ಮ ಸಹೋದರಿಯು ಪುಸ್ತಕ ಪ್ರೇಮಿಯಾಗಿದ್ದರೆ ಆಕೆಗೆ ಇಷ್ಟವಾದ ಪುಸ್ತಕವನ್ನು ನೀಡಲು ಇದೊಂದು ಒಳ್ಳೆ ಅವಕಾಶವಾಗಿದೆ. ನಿಮ್ಮ ತಂಗಿ ಅಥವಾ ಅಕ್ಕನ ಮೆಚ್ಚಿನ ಲೇಖಕರು, ಆಕೆಯೂ ಹೆಚ್ಚು ಓದುವ ಪುಸ್ತಕ ಯಾವುದೆಂದು ತಿಳಿದುಕೊಳ್ಳಿ. ಮೆಚ್ಚಿನ ಲೇಖಕರು ಬರೆದ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಸ್ತಕವಿದ್ದರೆ ಅದನ್ನು ಕೊಡುವುದು ಉತ್ತಮ.
3 / 5
ಅಚ್ಚುಮೆಚ್ಚಿನ ಸೀರೆ : ಹೆಣ್ಣು ಮಕ್ಕಳು ಯಾವುದೇ ಬಟ್ಟೆಯನ್ನು ತೊಟ್ಟರು ಕೂಡ ಆಕೆಯ ಅಂದವನ್ನು ಹೆಚ್ಚಿಸುವ ಏಕೈಕ ಉಡುಪು ಅದುವೇ ಸೀರೆ. ನಮ್ಮ ಭಾರತದ ಸಾಂಪ್ರದಾಯಿಕ ಉಡುಗೆಯೂ ಇದಾಗಿದ್ದು, ಫ್ಯಾನ್ಸಿ ಅಥವಾ ರೇಷ್ಮೆ ಸೀರೆಗಳಲ್ಲಿ ವಿವಿಧ ವಿನ್ಯಾಸದ ಸೀರೆಗಳಿವೆ. ಹೀಗಾಗಿ ನಿಮ್ಮ ಸಹೋದರಿಯ ಇಷ್ಟದ ಬಣ್ಣವನ್ನು ಅರಿತು ಆ ಬಣ್ಣದ ಸೀರೆಯನ್ನು ನೀಡಿದರೆ ಈ ಉಡುಗೊರೆಯ ನೆನಪು ಆಕೆಯ ಮನಸ್ಸಿನಲ್ಲಿ ಸದಾ ಇರುತ್ತದೆ.
4 / 5
ಬೆಳ್ಳಿ ಕಾಲ್ಗೆಜ್ಜೆ : ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆಯೆಂದರೆ ಬಲು ಇಷ್ಟ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳಲ್ಲಿ ಕಾಲ್ಗೆಜ್ಜೆಗಳು ಸಿಗುತ್ತದೆ. ಒಂದು ವೇಳೆ ನಿಮ್ಮ ಸಹೋದರಿಯೂ ಕಾಲ್ಗೆಜ್ಜೆ ಪ್ರಿಯರಾಗಿದ್ದರೆ, ನೀವು ಆಕೆಗೆ ಕೊಡಲು ಈ ಸಾಂಪ್ರಾದಾಯಿಕ ಉಡುಗೊರೆಯನ್ನೇ ಆಯ್ಕೆ ಮಾಡಿಕೊಳ್ಳಬಹುದು.