Food Poisoning: ಫ್ರಿಡ್ಜ್​​​​ನಲ್ಲಿ ಇಡುವ ಆಹಾರವನ್ನು ಎಷ್ಟು ಸಮಯದೊಳಗೆ ಸೇವನೆ ಮಾಡಬೇಕು ಗೊತ್ತಾ?

ತಾಜಾ ಆಹಾರವನ್ನು ತಯಾರಿಸಿ, ಸೇವನೆ ಮಾಡುವುದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಆಹಾರವನ್ನು ತಯಾರಿಸಿ ಅದನ್ನು ಶೈತ್ಯೀಕರಿಸುವವರಿದ್ದಾರೆ. ಇದರಿಂದ ಆಹಾರವು ಬೇಗನೆ ಹಾಳಾಗುವುದಿಲ್ಲ ಜೊತೆಗೆ ಸಮಯ ಉಳಿತಾಯವಾಗುತ್ತದೆ ಎಂಬ ಕಾರಣದಿಂದ ಈ ರೀತಿ ಮಾಡುತ್ತಾರೆ. ಇದು ಆಹಾರ ಬೇಗ ಹಾಳಾಗದಂತೆ ತಡೆಯುತ್ತದೆ. ಆದರೆ ಫ್ರಿಡ್ಜ್ ನಲ್ಲಿ ಇರುವ ಎಲ್ಲಾ ವಸ್ತುಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ. ಕೆಲವು ಬೇಗನೆ ಹಾಳಾಗಬಹುದು. ಇನ್ನು ಕೆಲವು ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಫ್ರಿಡ್ಜ್ ನಲ್ಲಿ ಇರಿಸಲಾದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಎಷ್ಟು ಸಮಯದವರೆಗೆ ಸೇವನೆ ಮಾಡಬೇಕು? ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

Food Poisoning: ಫ್ರಿಡ್ಜ್​​​​ನಲ್ಲಿ ಇಡುವ ಆಹಾರವನ್ನು ಎಷ್ಟು ಸಮಯದೊಳಗೆ ಸೇವನೆ ಮಾಡಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 17, 2024 | 9:27 AM

ಬಿಡುವಿಲ್ಲದ ಮತ್ತು ಒತ್ತಡ ಜೀವನಶೈಲಿಯಿಂದಾಗಿ, ನಮಗೆ ತಾಜಾ ಆಹಾರವನ್ನು ತಯಾರಿಸಿ, ಸೇವನೆ ಮಾಡುವುದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಆಹಾರವನ್ನು ತಯಾರಿಸಿ ಅದನ್ನು ಶೈತ್ಯೀಕರಿಸುವವರಿದ್ದಾರೆ. ಇದರಿಂದ ಆಹಾರವು ಬೇಗನೆ ಹಾಳಾಗುವುದಿಲ್ಲ ಜೊತೆಗೆ ಸಮಯ ಉಳಿತಾಯವಾಗುತ್ತದೆ ಎಂಬ ಕಾರಣದಿಂದ ಈ ರೀತಿ ಮಾಡುತ್ತಾರೆ. ಇದು ಆಹಾರ ಬೇಗ ಹಾಳಾಗದಂತೆ ತಡೆಯುತ್ತದೆ. ಆದರೆ ಫ್ರಿಡ್ಜ್ ನಲ್ಲಿ ಇರುವ ಎಲ್ಲಾ ವಸ್ತುಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ. ಕೆಲವು ಬೇಗನೆ ಹಾಳಾಗಬಹುದು. ಇನ್ನು ಕೆಲವು ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಫ್ರಿಡ್ಜ್ ನಲ್ಲಿ ಇರಿಸಲಾದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಎಷ್ಟು ಸಮಯದವರೆಗೆ ಸೇವನೆ ಮಾಡಬೇಕು? ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಫ್ರಿಡ್ಜ್ ನಲ್ಲಿ ಅನ್ನವನ್ನು ಬೇಯಿಸಿ ಇಡಬಾರದು ಇಟ್ಟರೆ 1 ದಿನದೊಳಗೆ ತಿನ್ನಬೇಕು. ಬೇಯಿಸಿದ ಯಾವುದೇ ಆಹಾರವನ್ನು ಇಟ್ಟರೆ ಅದು ಅಲ್ಪಾವಧಿಯಲ್ಲಿ ಅದರ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಇನ್ನು ಆಯುರ್ವೇದದ ಪ್ರಕಾರ, ಎಲ್ಲಾ ಬೇಯಿಸಿದ ಆಹಾರವು ಕೇವಲ 6 ಗಂಟೆಗಳವರೆಗೆ ಮಾತ್ರ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಅದರ ನಂತರ, ಅದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ನೀವು ಗೋಧಿ ರೊಟ್ಟಿಯನ್ನು ಮಾಡಿ 12 ರಿಂದ 14 ಗಂಟೆಗಳ ಒಳಗೆ ಅದನ್ನು ತಿನ್ನಬೇಕು. ಇಲ್ಲದಿದ್ದರೆ, ಅದರಲ್ಲಿ ಪೋಷಕಾಂಶ ಮೌಲ್ಯಗಳು ಇರುವುದಿಲ್ಲ. ಅದಲ್ಲದೆ ಫ್ರಿಡ್ಜ್ ನಲ್ಲಿ ಹೆಚ್ಚು ಹೊತ್ತು ಇಟ್ಟಿರುವ ಬ್ರೆಡ್ ತಿನ್ನುವುದರಿಂದಲೂ ಹೊಟ್ಟೆ ನೋವು ಉಂಟಾಗಬಹುದು. ಉಳಿದಿರುವ ಬೇಳೆಕಾಳುಗಳು ಹಾಳಾಗುವುದನ್ನು ತಡೆಯಲು ಫ್ರಿಡ್ಜ್ ನಲ್ಲಿ ಅದನ್ನು 2 ದಿನಗಳವರೆಗೆ ಇಡಬಹುದು ಇದಕ್ಕಿಂತ ಹೆಚ್ಚು ದಿನ ಇಟ್ಟು ಅದನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. 2 ದಿನಗಳ ನಂತರ ಸೇವಿಸಿದರೆ, ಹೊಟ್ಟೆಯಲ್ಲಿ ಗ್ಯಾಸ್ ಆಗಬಹುದು.

ಇದನ್ನೂ ಓದಿ: ಊಟದಲ್ಲಿ ಕೈ ಮದ್ದು ಹಾಕುವುದು ನಿಜವೇ? ಇದಕ್ಕೆ ಪರಿಹಾರವೇನು?

ತರಕಾರಿ, ಹಣ್ಣುಗಳ ಆಯಸ್ಸು ಎಷ್ಟು?

ಅನೇಕ ಬಾರಿ ನಾವು ಹಣ್ಣುಗಳು ಮತ್ತು ತರಕಾರಿಗಳನ್ನು ಒಂದು ವಾರದ ವರೆಗೆ ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತೇವೆ. ಆದರೆ ದೀರ್ಘಕಾಲದವರೆಗೆ ಫ್ರಿಡ್ಜ್ ನಲ್ಲಿಟ್ಟ ತರಕಾರಿಗಳು ಮತ್ತು ಹಣ್ಣುಗಳು ತಮ್ಮ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಅವುಗಳನ್ನು ತಿನ್ನುವುದು ನಿಮಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯೇ ಇರುತ್ತದೆ. ತರಕಾರಿಗಳು ಮತ್ತು ಹಣ್ಣುಗಳನ್ನು ಕತ್ತರಿಸದೆಯೇ ಇಟ್ಟರೆ, ಅವುಗಳನ್ನು 3 ರಿಂದ 4 ದಿನಗಳ ವರೆಗೆ ಇಡಬಹುದು. ಅದಕ್ಕಿಂತ ಹೆಚ್ಚು ಕಾಲ ಅದನ್ನು ಇಟ್ಟುಕೊಳ್ಳಬೇಡಿ ಎಂದು ತಜ್ಞರು ಹೇಳುತ್ತಾರೆ. ಆದರೆ ಕತ್ತರಿಸಿದ ಹಣ್ಣನ್ನು 6 ಗಂಟೆಗಳ ಒಳಗೆ ತಿನ್ನಬೇಕು. ಇಲ್ಲದಿದ್ದರೆ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ರೊಟ್ಟಿ ಅಥವಾ ರೊಟ್ಟಿ ಹಿಟ್ಟಿನಂತಹ ಏನನ್ನಾದರೂ ಫ್ರಿಡ್ಜ್ ನಲ್ಲಿ ಇಡುವುದಾದರೆ ಬೇರೊಂದು ಪಾತ್ರೆಯ ಸಹಾಯದಿಂದ ಸಂಪೂರ್ಣವಾಗಿ ಮುಚ್ಚಿಡಿ ಅಲ್ಲದೆ ಬೇಯಿಸಿದ ಆಹಾರವನ್ನು 24 ಗಂಟೆಗಳ ಒಳಗೆ ಸೇವಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:26 am, Sat, 17 August 24