ಊಟದಲ್ಲಿ ಕೈ ಮದ್ದು ಹಾಕುವುದು ನಿಜವೇ? ಇದಕ್ಕೆ ಪರಿಹಾರವೇನು?
ಕೈ ಮದ್ದು ಅಥವಾ ಕೈ ಮಸಕು ಎಂಬುದರ ಬಗ್ಗೆ ಕೇಳಿದ್ದೀರಾ? ಸಾಮಾನ್ಯವಾಗಿ ಇದರ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಗೊತ್ತಿರುತ್ತದೆ. ಇದು ಹಳ್ಳಿ ಕಡೆ ಬಳಸುವಂತ ಒಂದು ವಿಧಾನವಾಗಿದೆ. ಈ ರೀತಿಯ ರೂಢಿ ಕೆಲವು ಮನೆಗಳಲ್ಲಿ ಇರುತ್ತದೆ. ಇದು ಇತ್ತೀಚಿಗೆ ಕಡಿಮೆಯಾಗುತ್ತಿದ್ದರೂ ಕೆಲವು ಹಳ್ಳಿಗಳಲ್ಲಿ ಇನ್ನು ರೂಢಿಯಲ್ಲಿದೆ. ಆದರೆ ಕೈ ಮದ್ದು ಎಂದರೇನು? ಯಾವುದರಲ್ಲಿ ಹಾಕುತ್ತಾರೆ ಹಾಗೂ ಈ ಕೈ ಮದ್ದು ಹಾಕಿದ್ದಾರಾ ಅನ್ನುವುದನ್ನು ಹೇಗೆ ತಿಳಿಯಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಅನ್ನ ಅಥವಾ ಇನ್ನಿತರ ಆಹಾರದಲ್ಲಿ ಮದ್ದು ಹಾಕುವ ಪದ್ದತಿಯನ್ನು ಹಳ್ಳಿಗಳಲ್ಲಿ ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಇದು ವೈಜ್ಞಾನಿಕ ಪದ್ದತಿಯಲ್ಲ. ಕೆಲವು ಕಡೆಗಳಲ್ಲಿ ಅದರಲ್ಲಿಯೂ ಕೆಲವು ಮನೆಗಳಲ್ಲಿ ಇದನ್ನು ಸಂಪ್ರದಾಯದಂತೆ ಪಾಲಿಸುತ್ತಿದ್ದಾರೆ. ಈ ಮದ್ದನ್ನು ಅಮವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಊಟ ಮಾಡುವಾಗ ಹಾಕುತ್ತಾರೆ. ಹಾಗಾಗಿ ಈ ದಿನಗಳಂದು ಹೊರಗಡೆ ಊಟ ಮಾಡಬಾರದು ಎಂದು ಹೇಳಲಾಗುತ್ತದೆ.
ಲಕ್ಷಣಗಳೇನು?
ಮದ್ದು ಹಾಕಿದ ಊಟ ಮಾಡಿದ ತಕ್ಷಣ ಯಾವುದೇ ರೀತಿಯ ಪರಿಣಾಮ ತಿಳಿಯುವುದಿಲ್ಲ. 3 ತಿಂಗಳ ನಂತರ ಹಸಿವಾಗದಿರುವುದು, ಊಟ ಮಾಡಿದ ನಂತರ ವಾಂತಿಯಾಗುವುದು, ಅಡುಗೆ ಮಾಡುವಾಗ ಬರುವ ಪರಿಮಳ ವಾಕರಿಕೆ ತರಿಸುವುದು ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಕೈ ಮದ್ದು ಊಟದಲ್ಲಿ ಹಾಕಿದ್ದರೆ ಆ ವ್ಯಕ್ತಿ ಸರಿಯಾಗಿ ಊಟ ಸೇವನೆ ಮಾಡುವುದಿಲ್ಲ ಜೊತೆಗೆ ಊಟದ ಕಡೆ ಹೆಚ್ಚು ಗಮನವನ್ನು ನೀಡುವುದಿಲ್ಲ. ಅದಲ್ಲದೆ ಇದರ ಜೊತೆಗೆ ದೈಹಿಕ ಸಮಸ್ಯೆಗಳು ಕಾಡುತ್ತದೆ.
ಇದನ್ನೂ ಓದಿ; ಆಲ್ಕೋಹಾಲ್ ಜತೆ ಸೋಡಾ, ತಂಪು ಪಾನೀಯ ಬೆರೆಸಿ ಕುಡಿಯುತ್ತೀರಾ? ಈ ಅಪಾಯ ತಪ್ಪಿದ್ದಲ್ಲ
ಇದಕ್ಕೆ ಪರಿಹಾರವೇನು?
ಮದ್ದು ಹಾಕಿರುವುದು ತಿಳಿದುಕೊಳ್ಳಬೇಕಾದರೆ ಮನೆಯ ಇತರೆ ಸದಸ್ಯರಿಂದ ನುಗ್ಗೆ ಸೊಪ್ಪನ್ನು ತರಿಸಿ ಅದರ ರಸ ತೆಗೆದು ನಂತರ ಅದನ್ನು ಎಡಗೈಗೆ ಹಚ್ಚಿಕೊಳ್ಳಬೇಕು. ಇದರಿಂದ ನೊರೆ ಬಂದರೆ ಅಥವಾ ಬಣ್ಣ ಬದಲಾದರೆ ಮದ್ದು ಹಾಕಿದ್ದಾರೆ ಎಂದರ್ಥ. ಅದು ನೀರಾಗಿಯೇ ಕೈ ಮೇಲೆ ಇದ್ದರೆ ಮದ್ದು ಹಾಕಿಲ್ಲ ಎಂದರ್ಥ. ಅದಲ್ಲದೆ ನಿಮಗೆ ಯಾವುದಾದರೂ ಲಕ್ಷಣ ಕಂಡು ಬಂದರೆ ಮದ್ದನ್ನು ತೆಗೆಯಲು ಔಷಧಿ ಕೊಡುವವರಿದ್ದಾರೆ ಅವರು ಕೊಡುವ ಔಷಧ ಸೇವನೆ ಮಾಡುವುದರಿಂದ ಮದ್ದು ಅಥವಾ ದೇಹದಲ್ಲಿರುವ ವಿಷಕಾರಿ ಅಂಶ ವಾಂತಿಯಾಗಿ ಹೋಗುತ್ತದೆ. ಒಂದು ವರ್ಷದವರೆಗೂ ಮದ್ದನ್ನು ತೆಗೆಯದಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತದೆ. ಹೀಗಾಗಿ ಇಂತಹ ವಿಷಯಗಳಲ್ಲಿ ಹಿರಿಯರ ಮಾತನ್ನು ಕೇಳುವುದು ಉತ್ತಮ. ಇದಕ್ಕೆ ನೀಡುವ ಔಷಧಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗುವುದಿಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ