Relationship Tips : ಪತ್ನಿ ಸದಾ ಸಂತೋಷವಾಗಿರಲು ಪತಿ ಚಾಣಕ್ಯ ಹೇಳುವ ಈ ಕೆಲಸ ಮಾಡಿದ್ರೆ ಸಾಕು
ಸಂಗಾತಿಯೊಂದಿಗೆ ಬಲವಾದ ಸಂಬಂಧವನ್ನು ಹೊಂದುವುದು ಹಾಗೂ ಅನ್ಯೋನತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಪತಿಯ ನಡವಳಿಕೆಯು ಪತ್ನಿಗೆ ಬೇಸರವನ್ನುಂಟು ಮಾಡುತ್ತದೆ. ಹೀಗಾಗಿ ಚಾಣಕ್ಯನು ಗಂಡನು ತನ್ನ ಪತ್ನಿಯನ್ನು ಸದಾ ಸಂತೋಷವಾಗಿಟ್ಟುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ನೀತಿಯಲ್ಲಿ ತಿಳಿಸಿದ್ದಾನೆ. ಹಾಗಾದ್ರೆ ಆ ನೀತಿಯಲ್ಲಿ ಏನೆಲ್ಲಾ ಇದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸದಾಗಿ ಮದುವೆಯಾದ ಗಂಡ ಹೆಂಡಿರು ಪ್ರಾರಂಭದ ದಿನಗಳಲ್ಲಿ ಖುಷಿಯಿಂದಲೇ ಇರುತ್ತಾರೆ. ಆದರೆ ವರ್ಷಗಳು ಕಳೆಯುತ್ತ ಬರುತ್ತಿದ್ದಂತೆ ಇಬ್ಬರಿಗಿ ದಾಂಪತ್ಯ ಜೀವನ ಬೋರ್ ಆಗಲು ಶುರುವಾಗುತ್ತದೆ. ಎಷ್ಟೋ ಸಲ ಹೆಣ್ಣು ಮಕ್ಕಳು ಯಾಕಾದ್ರೂ ಈ ವ್ಯಕ್ತಿನಾ ಮದುವೆಯಾದೆ ಎಂದು ಬಾಯಿಬಿಟ್ಟು ಹೇಳಿಬಿಡುತ್ತಾರೆ. ಹೀಗಾಗಿ ಪತಿಯಾದವನು ತನ್ನದೇ ನಂಬಿ ಬಂದ ಹೆಂಡತಿಯನ್ನು ಖುಷಿಯಿಂದ ನೋಡಿಕೊಳ್ಳುವುದು ಮುಖ್ಯ. ಆದರೆ ಚಾಣಕ್ಯ ಹೆಂಡತಿಯನ್ನು ಸಂತೋಷವಾಗಿಟ್ಟುಕೊಳ್ಳುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾನೆ.
* ಸದಾ ಗೌರವದಿಂದ ಕಾಣುವುದು : ಚಾಣಕ್ಯನು ತನ್ನ ನೀತಿಯಲ್ಲಿ ತಿಳಿಸುವಂತೆ ಯಾವ ವ್ಯಕ್ತಿಯು ತನ್ನ ಪತ್ನಿಯನ್ನು ಗೌರವದಿಂದ ಕಾಣುತ್ತಾನೋ ಆ ಸಂಬಂಧಗಳು ತುಂಬಾ ಗಟ್ಟಿಯಾಗುತ್ತವೆ. ಅಂತಹ ವ್ಯಕ್ತಿಯು ಹೆಂಡತಿಯಿಂದ ಗೌರವವನ್ನು ಮರಳಿ ಪಡೆಯುತ್ತಾನೆ. ತನ್ನ ಗಂಡನು ತನ್ನನ್ನು ಗೌರವದಿಂದ ಕಾಣುತ್ತಾನೆ ಎನ್ನುವುದು ಆಕೆಯ ಮನಸ್ಸಿನಲ್ಲಿ ಸಂತೋಷವನ್ನುಂಟು ಮಾಡುತ್ತದೆ.
* ಸ್ನೇಹಿತೆಯಂತೆ ನೋಡಿಕೊಳ್ಳುವುದು : ಗಂಡ-ಹೆಂಡತಿಯರು ಸ್ನೇಹಿತರಂತೆ ಜೀವನ ನಡೆಸುವುದರಿಂದ ಸಂಸಾರವು ಆನಂದದಿಂದ ಕೂಡಿರುತ್ತದೆ. ಚಾಣಕ್ಯನ ಪ್ರಕಾರ ಸಂಗಾತಿಗಳಿಬ್ಬರೂ ಸ್ನೇಹಿತರಾಗಿಯೂ ಬದುಕಬೇಕು. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಬೇಕು. ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಪತಿ ಪತ್ನಿಯರ ಸಂಬಂಧ ಗಟ್ಟಿಯಾಗುತ್ತದೆ. ಈ ರೀತಿಯ ಗಂಡನು ಇದ್ದರೆ ಪತ್ನಿಯು ಸಂಸಾರಿಕ ಜೀವನದಲ್ಲಿ ಖುಷಿಯಾಗಿರುತ್ತಾಳೆ.
* ಇಬ್ಬರೂ ಸರಿಸಮಾನರು : ಸಂಸಾರದಲ್ಲಿ ಇಬ್ಬರು ಸಮಾನರಾಗಿರಬೇಕು. ಪತ್ನಿಯನ್ನು ಸಮಾನಳಂತೆ ಕಾಣುವ ಪತಿಯು ಆಕೆಯನ್ನು ಸಂತೋಷವಾಗಿಟ್ಟುಕೊಳ್ಳಲು ಸಾಧ್ಯ. ಪತ್ನಿಯ ವಿರುದ್ಧ ಗಂಡ ಸ್ಪರ್ಧೆಗೆ ಇಳಿಯಬಾರದು. ಸಂಗಾತಿಗಳ ಮಧ್ಯೆ ನಾನು ಹೆಚ್ಚು, ನೀನು ಕಡಿಮೆ ಎನ್ನುವ ಮಾತುಬರಬಾರದು. ಇಬ್ಬರೂ ಚರ್ಚಿಸಿ ನಿರ್ಧಾರಗಳನ್ನು ಕೈ ಗೊಳ್ಳಬೇಕು.
* ಭದ್ರತೆ ಭಾವನೆಯನ್ನು ಒದಗಿಸುವುದು : ಪುರುಷನು ತನ್ನ ಹೆಂಡತಿಯು ಸುರಕ್ಷಿತವಾಗಿರಿಸಿದರೆ ಅವನ ಜೀವನವು ತುಂಬಾ ಚೆನ್ನಾಗಿರುತ್ತದೆ ಎನ್ನುವುದು ಚಾಣಕ್ಯ ನೀತಿಯಲ್ಲಿದೆ. ಹೆಂಡತಿ ಯಾವಾಗಲೂ ತನ್ನ ಗಂಡನಲ್ಲಿ ತಂದೆಯನ್ನು ನೋಡುತ್ತಾಳೆ. ತನ್ನ ಪತಿಯು ತನ್ನ ಎಲ್ಲಾ ಸಮಯದಲ್ಲಿ ಜೊತೆಯಿರುತ್ತಾನೆ ಹಾಗೂ ತನ್ನನ್ನು ರಕ್ಷಿಸುತ್ತಾನೆ ಎಂದು ನಂಬಿರುತ್ತಾಳೆ. ಹೀಗಾಗಿ ನಿಮ್ಮ ಹೆಂಡತಿಗೆ ಆರ್ಥಿಕ, ಸಾಮಾಜಿಕ ಮತ್ತು ದೈಹಿಕ ಸುರಕ್ಷತೆಯ ಭಾವನೆಯನ್ನು ಉಂಟು ಮಾಡಿದರೆ ಆಕೆಯು ನಿಮ್ಮೊಂದಿಗೆ ಸಂತೋಷದಿಂದ ಜೀವನ ನಡೆಸಲು ಸಾಧ್ಯ.
ಇದನ್ನೂ ಓದಿ: ದಂಪತಿಗಳಿಬ್ಬರೂ ಮಗು ಪಡೆಯುವ ಮುನ್ನ ಈ ಬಗ್ಗೆ ಯೋಚಿಸಿ
* ಪತ್ನಿಯೊಂದಿಗೆ ಪ್ರಾಮಾಣಿಕವಾಗಿರುವುದು : ಚಾಣಕ್ಯ ನೀತಿಯ ಪ್ರಕಾರ, ಸಂಬಂಧದಲ್ಲಿ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಪ್ರಾಮಾಣಿಕತೆಯಿದ್ದಲ್ಲಿ ಸಂಬಂಧವು ಮುರಿದು ಹೋಗುವುದಿಲ್ಲ. ವೈವಾಹಿಕ ಜೀವನ ಸುಖಮಯವಾಗಿರಲು ಬಯಸಿದರೆ, ನಿಮ್ಮ ಹೆಂಡತಿಯೊಂದಿಗೆ ಯಾವಾಗಲೂ ಪ್ರಾಮಾಣಿಕವಾಗಿರಬೇಕಂತೆ.
* ದೈಹಿಕವಾಗಿ ಸಂತೋಷ ನೀಡುವುದು : ಚಾಣಕ್ಯ ನೀತಿಯಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ದೈಹಿಕ ತೃಪ್ತಿಯೂ ಮುಖ್ಯವಾಗುತ್ತದೆ ಎನ್ನುವುದಿದೆ. ಹೀಗಾಗಿ ಪತಿಯಾದವನು ತನ್ನ ಸಂಗಾತಿಯ ಭಾವನಾತ್ಮಕ ಮತ್ತು ದೈಹಿಕ ಸಂತೋಷದ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. ದೈಹಿಕವಾಗಿ ಕೂಡುವ ಮುನ್ನ ಗಂಡನು ತನ್ನ ಮಡದಿಯ ಒಪ್ಪಿಗೆಯನ್ನು ಪಡೆಯಬೇಕು.ದೈಹಿಕ ಸಂಪರ್ಕದಿಂದ ಅಂತರ ಕಾಯ್ದುಕೊಂಡರೆ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ದೈಹಿಕವಾಗಿ ಸಂತೋಷವನ್ನು ನೀಡುವುದು ಗಂಡನ ಕರ್ತವ್ಯವಾಗಿದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ