Health Tips: ಪುರುಷರಲ್ಲಿ ಕೆಟ್ಟ ಆಲೋಚನೆ ಬರದಂತೆ ತಡೆಯುವುದು ಹೇಗೆ? ಇಲ್ಲಿದೆ ಸರಳ ಆರೋಗ್ಯ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 11, 2024 | 5:33 PM

ಕೆಲವೊಮ್ಮೆ ಮನಸ್ಸಿಗೆ ನಕಾರಾತ್ಮಕ ಆಲೋಚನೆಗಳು ಬರುವುದು ಸಹಜ, ಆದರೆ ಇದು ಆಗಾಗ ಕಂಡು ಬರುತ್ತಿದ್ದರೆ ಅದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಇಲ್ಲದಿದ್ದರೆ ಇದರಿಂದ ಮತ್ತಷ್ಟು ಒತ್ತಡ ಹೆಚ್ಚುತ್ತದೆ ಇದು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳ ಬಗ್ಗೆ ನಿರಂತರವಾಗಿ ಯೋಚಿಸುವುದು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ನಕಾರಾತ್ಮಕ ಆಲೋಚನೆಗಳನ್ನು ಯಾವ ರೀತಿಯಲ್ಲಿ ನಿವಾರಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಅದರಲ್ಲಿಯೂ ಪುರುಷರು ಇಂತಹ ವಿಷಯಗಳಿಂದ ಹೊರಬರಲು ಕಷ್ಟ ಪಡುತ್ತಾರೆ. ಅಂತವರು ಈ ಸಲಹೆಯನ್ನು ಪಾಲಿಸಬಹುದು.

Health Tips: ಪುರುಷರಲ್ಲಿ ಕೆಟ್ಟ ಆಲೋಚನೆ ಬರದಂತೆ ತಡೆಯುವುದು ಹೇಗೆ? ಇಲ್ಲಿದೆ ಸರಳ ಆರೋಗ್ಯ ಸಲಹೆ
Follow us on

ಸಾಮಾನ್ಯವಾಗಿ ಯೋಚಿಸುವುದು ಅಥವಾ ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಮುಖ್ಯ. ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿಯದಿದ್ದರೆ ಆ ಬಗ್ಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವ ಯಾವುದೇ ವಿಷಯ ಅಥವಾ ಅನುಭವಗಳ ಬಗ್ಗೆ ನೀವು ಆಲೋಚನೆ ಮಾಡುತ್ತಿದ್ದರೆ, ಅದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು, ಆದರೆ ಒಬ್ಬ ವ್ಯಕ್ತಿಯು ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚು ಹೆಚ್ಚು ಮಾಡಲು ಆರಂಭ ಮಾಡಿದಲ್ಲಿ ಇದರಿಂದ ಬಹುಬೇಗ ಹೊರಬರುವುದು ಬಹಳ ಮುಖ್ಯ, ಇಲ್ಲದಿದ್ದರೆ ಇದು ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ದೈಹಿಕ ಆರೋಗ್ಯವೂ ಹದಗೆಡಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕೆಲವೊಮ್ಮೆ ಮನಸ್ಸಿಗೆ ನಕಾರಾತ್ಮಕ ಆಲೋಚನೆಗಳು ಬರುವುದು ಸಹಜ, ಆದರೆ ಇದು ಆಗಾಗ ಕಂಡು ಬರುತ್ತಿದ್ದರೆ ಅದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಇಲ್ಲದಿದ್ದರೆ ಇದರಿಂದ ಮತ್ತಷ್ಟು ಒತ್ತಡ ಹೆಚ್ಚುತ್ತದೆ ಇದು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳ ಬಗ್ಗೆ ನಿರಂತರವಾಗಿ ಯೋಚಿಸುವುದು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ನಕಾರಾತ್ಮಕ ಆಲೋಚನೆಗಳನ್ನು ಯಾವ ರೀತಿಯಲ್ಲಿ ನಿವಾರಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಅದರಲ್ಲಿಯೂ ಪುರುಷರು ಇಂತಹ ವಿಷಯಗಳಿಂದ ಹೊರಬರಲು ಕಷ್ಟ ಪಡುತ್ತಾರೆ. ಅಂತವರು ಈ ಸಲಹೆಯನ್ನು ಪಾಲಿಸಬಹುದು.

ವಿರಾಮ ತೆಗೆದುಕೊಳ್ಳಿ;

ನೀವು ಕೆಟ್ಟ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದು, ಅದೇ ಕಾರಣದಿಂದ ಆಗಾಗ ನಕಾರಾತ್ಮಕ ಆಲೋಚನೆ ನಿಮ್ಮನ್ನು ಸುತ್ತುತ್ತಿದ್ದರೆ ಒಂದು ಸಣ್ಣ ವಿರಾಮ ತೆಗೆದುಕೊಳ್ಳಿ. ಕೆಲಸ ಮತ್ತು ವೈಯಕ್ತಿಕ ಜೀವನದಿಂದ ನಿಮ್ಮನ್ನು ದೂರವಿಡಿ. ಬಳಿಕ ಸ್ವಲ್ಪ ಸಮಯದವರೆಗೆ ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸಿ. ಅದು ಯಾವ ರೀತಿಯೂ ಆಗಿರಬಹುದು. ಅಂದರೆ ನಿಮ್ಮ ಸ್ನೇಹಿತರೊಂದಿಗೆ ಸುತ್ತಾಡಲು ಯೋಜನೆ ಹಾಕುವುದು ಅಥವಾ ನಿಮಗಿಷ್ಟವಾದ ಆಹಾರವನ್ನು ಸವಿಯುವುದು ಅಥವಾ ಆಧ್ಯಾತ್ಮಿಕ ಸ್ಥಳದಲ್ಲಿ ಸ್ವಲ್ಪ ಸಮಯದ ವರೆಗೆ ಏಕಾಂಗಿಯಾಗಿ ಕಳೆಯುವುದು. ಹೀಗೆ ಯಾವುದರಲ್ಲಿ ನಿಮಗೆ ಸಂತೋಷ ಸಿಗುತ್ತದೆಯೋ ಅದನ್ನೇ ಆಯ್ಕೆ ಮಾಡಿ.

ನಕಾರಾತ್ಮಕ ಆಲೋಚನೆಗಳು ಬಂದಾಗ ಏನು ಮಾಡಬೇಕು?

ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ನಕಾರಾತ್ಮಕ ಆಲೋಚನೆಗಳು ಬರುವಾಗ, ಶಾಂತವಾಗಿ ಕುಳಿತುಕೊಳ್ಳಿ, ಆಳವಾದ ಉಸಿರನ್ನು ತೆಗೆದುಕೊಳ್ಳಿ, ಎರಡು ಗುಟುಕು ನೀರನ್ನು ಕುಡಿಯಿರಿ. ಈ ಸಮಯದಲ್ಲಿ ನೀವು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬಹುದು ಮತ್ತು ಆಳವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರನ್ನು ಹೊರಹಾಕಬೇಕು. ಈ ಪ್ರಕ್ರಿಯೆಯನ್ನು ಕನಿಷ್ಠ ಒಂದು ನಿಮಿಷ ಪುನರಾವರ್ತಿಸುವುದರಿಂದ ನಿಮ್ಮ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಇದರ ಜೊತೆಗೆ, ನಿಮ್ಮೊಳಗಿನ ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ‘ನಾನು ಅತ್ಯುತ್ತಮ, ನಾನು ಯಶಸ್ವಿಯಾಗಿದ್ದೇನೆ, ನಾನು ಈ ಕೆಲಸವನ್ನು ಚೆನ್ನಾಗಿ ಮಾಡಬಹುದು, ಯಾರ ಕೆಟ್ಟ ಮಾತುಗಳ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ.’ ಎಂಬಂತಹ ಕೆಲವು ಸಕಾರಾತ್ಮಕ ಪದಗಳು ನಿಮನ್ನು ನಕಾರಾತ್ಮಕ ಚಿಂತನೆಯಿಂದ ದೂರ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೂತ್ರದಲ್ಲಿ 2 ಲಕ್ಷಣಗಳು ಕಂಡು ಬಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ

ಯಾವ ರೀತಿಯ ಸಲಹೆಯನ್ನು ಪಾಲನೆ ಮಾಡಬೇಕು?

ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆರೋಗ್ಯವಾಗಿರುವುದು ಬಹಳ ಮುಖ್ಯ, ನಿಮ್ಮ ಆರೋಗ್ಯ ಚೆನ್ನಾಗಿ ಇದ್ದಾಗ ಮಾತ್ರ, ಮಾನಸಿಕವಾಗಿ ಸಕ್ರಿಯರಾಗುತ್ತೀರಿ. ಆದ್ದರಿಂದ ಧ್ಯಾನ, ಜಾಗಿಂಗ್ ಮತ್ತು ನಿಮ್ಮ ದಿನಚರಿಯಲ್ಲಿ ಬೆಳಿಗ್ಗೆ ಸ್ವಲ್ಪ ಸಮಯ ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಜೊತೆಗೆ ಹುಲ್ಲಿನ ಮೇಲೆ ನಡೆಯುವುದು, ರಾತ್ರಿಯ ನಿದ್ರೆಯನ್ನು ಚೆನ್ನಾಗಿ ಮಾಡುವುದು ಹೀಗೆ ಕೆಲವು ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ. ಸರಿಯಾದ ಸಮಯಕ್ಕೆ ಮಲಗಿ, ಬೆಳಿಗ್ಗೆ ಸರಿಯಾದ ಸಮಯದಲ್ಲಿ ಎದ್ದೇಳುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರವಿರುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಿ. ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡದಿದ್ದಾಗ ಅಥವಾ ಕೆಲಸ ನಮ್ಮ ಆಯ್ಕೆಯಲ್ಲದಿದ್ದಾಗ ಹೆಚ್ಚಿನ ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ಆದ್ದರಿಂದ ನಿಮ್ಮ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಿರಿ. ತೋಟಗಾರಿಕೆಗೆ ಮಾಡುವುದು ಅಥವಾ ಸಂಗೀತ ಕೇಳುವುದು ಅಥವಾ ಕಲಿಯುವುದು, ಚಿತ್ರ ಬಿಡಿಸುವುದು, ನೃತ್ಯ ಮಾಡುವುದು, ಇವೆಲ್ಲವೂ ನಿಮ್ಮ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೂತ್ರದಲ್ಲಿ 2 ಲಕ್ಷಣಗಳು ಕಂಡು ಬಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ