Health Tips: ಮೂತ್ರದಲ್ಲಿ 2 ಲಕ್ಷಣಗಳು ಕಂಡು ಬಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ

ಕೊಲೆಸ್ಟ್ರಾಲ್ ಹೆಚ್ಚಾಗುವುದು ವಿವಿಧ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಹೆಚ್ಚಾಗುವ ಮೊದಲು ದೇಹವು ಕೆಲವು ಎಚ್ಚರಿಕೆಗಳನ್ನು ನೀಡುತ್ತದೆ, ಅದರ ಜೊತೆಗೆ ನಾನಾ ರೀತಿಯ ಲಕ್ಷಣಗಳು ಕೂಡ ಕಂಡು ಬರುತ್ತದೆ. ಇದನ್ನು ಜನರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಕೊಲೆಸ್ಟ್ರಾಲ್ ಹೆಚ್ಚಾದಾಗ, ಎದೆ ನೋವು, ಒತ್ತಡ, ತಲೆತಿರುಗುವಿಕೆ, ಕಾಲು ನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಇದಲ್ಲದೆ, ಮೂತ್ರ ವಿಸರ್ಜಿಸುವಾಗ ಹೆಚ್ಚಿನ ಕೊಲೆಸ್ಟ್ರಾಲ್ ನ ಲಕ್ಷಣಗಳು ಸಹ ಕಂಡುಬರುತ್ತವೆ. ಅವುಗಳನ್ನು ನಿರ್ಲಕ್ಷಿಸಬಾರದು. ಮೂತ್ರದಲ್ಲಿ ಕಂಡುಬರುವ ಅಧಿಕ ಕೊಲೆಸ್ಟ್ರಾಲ್ ನ ರೋಗಲಕ್ಷಣಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ಮೂತ್ರದಲ್ಲಿ 2 ಲಕ್ಷಣಗಳು ಕಂಡು ಬಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 11, 2024 | 2:47 PM

ಸಾಮಾನ್ಯವಾಗಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಒಂದು ಜಿಗುಟು ವಸ್ತುವಾಗಿದ್ದು, ಅದು ಹಳದಿ ಬಣ್ಣದ್ದಾಗಿದೆ. ಈ ಕೊಲೆಸ್ಟ್ರಾಲ್ ಪಿತ್ತಜನಕಾಂಗದಲ್ಲಿ ಸಂಗ್ರಹವಾದಾಗ, ಅದು ರಕ್ತದಲ್ಲಿ ಸೇರಿಕೊಳ್ಳಲು ಪ್ರಾರಂಭಿಸುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದು ವಿವಿಧ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಹೆಚ್ಚಾಗುವ ಮೊದಲು ದೇಹವು ಕೆಲವು ಎಚ್ಚರಿಕೆಗಳನ್ನು ನೀಡುತ್ತದೆ, ಅದರ ಜೊತೆಗೆ ನಾನಾ ರೀತಿಯ ಲಕ್ಷಣಗಳು ಕೂಡ ಕಂಡು ಬರುತ್ತದೆ. ಇದನ್ನು ಜನರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಕೊಲೆಸ್ಟ್ರಾಲ್ ಹೆಚ್ಚಾದಾಗ, ಎದೆ ನೋವು, ಒತ್ತಡ, ತಲೆತಿರುಗುವಿಕೆ, ಕಾಲು ನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಇದಲ್ಲದೆ, ಮೂತ್ರ ವಿಸರ್ಜಿಸುವಾಗ ಹೆಚ್ಚಿನ ಕೊಲೆಸ್ಟ್ರಾಲ್ ನ ಲಕ್ಷಣಗಳು ಸಹ ಕಂಡುಬರುತ್ತವೆ. ಅವುಗಳನ್ನು ನಿರ್ಲಕ್ಷಿಸಬಾರದು. ಮೂತ್ರದಲ್ಲಿ ಕಂಡುಬರುವ ಅಧಿಕ ಕೊಲೆಸ್ಟ್ರಾಲ್ ನ ರೋಗಲಕ್ಷಣಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೂತ್ರದಲ್ಲಿ ಹರಳುಗಳು: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ಅವು ಹರಳುಗಳ ಮೂಲಕ ಮೂತ್ರದಲ್ಲಿ ಹೊರಬರಲು ಪ್ರಾರಂಭಿಸುತ್ತವೆ. ಕೊಲೆಸ್ಟ್ರಾಲ್ ಹರಳುಗಳು ಸಣ್ಣ ಪ್ರಮಾಣದಲ್ಲಿದ್ದರೆ ಮೂತ್ರದ ಮೂಲಕ ಹಾದು ಹೋಗುವುದು ಸಾಮಾನ್ಯ. ಆದರೆ ಅದರ ಪ್ರಮಾಣ ಹೆಚ್ಚಾದಂತೆ, ಮೂತ್ರಪಿಂಡದ ಹಾನಿಯ ಅಪಾಯವೂ ಹೆಚ್ಚಾಗುತ್ತದೆ. ಇದನ್ನು ನೆಫ್ರೋಟಿಕ್ ಸಿಂಡ್ರೋಮ್ ಲಕ್ಷಣ ಎಂದೂ ಕರೆಯಬಹುದು. ನಿಮಗೂ ಇದೇ ರೀತಿಯ ಅನುಭವಾಗಿದ್ದರೆ, ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

ಮೂತ್ರದಲ್ಲಿ ನೊರೆ- ಕೊಲೆಸ್ಟ್ರಾಲ್ ಅಧಿಕವಾದಾಗ, ಮೂತ್ರದಲ್ಲಿ ಸಾಕಷ್ಟು ನೊರೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದಲ್ಲದೆ, ಮೂತ್ರದ ಬಣ್ಣವು ಸ್ವಲ್ಪ ಗಾಢವಾಗುತ್ತದೆ. ಈ ಎರಡೂ ರೀತಿಯ ಅನುಭವ ನಿಮಗೆ ಆಗಿದ್ದರೆ ವಿಳಂಬ ಮಾಡದೆಯೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಅಕ್ಟೋಬರ್ 11 ರಂದೇ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಏಕೆ ಆಚರಿಸಲಾಗುತ್ತದೆ?

ಇನ್ನಿತರ ಲಕ್ಷಣಗಳು;

ಕೊಲೆಸ್ಟ್ರಾಲ್ ಹೆಚ್ಚಾದಾಗ ದಣಿವು ಹೆಚ್ಚಾಗುತ್ತದೆ. ಚರ್ಮದ ತುರಿಕೆ ಮತ್ತು ತುಂಬಾ ಒಣ ಚರ್ಮ ಇದರ ಲಕ್ಷಣಗಳಾಗಿವೆ. ಇದಲ್ಲದೆ, ಅಧಿಕ ರಕ್ತದೊತ್ತಡವು ಕೂಡ ಇದರ ಲಕ್ಷಣವಾಗಿದೆ. ಕಣ್ಣುಗಳ ಮೇಲೆ ಹಳದಿ ಗುರುತುಗಳು ಕಂಡು ಬರುವುದು ಕೂಡ ಅಧಿಕ ಕೊಲೆಸ್ಟ್ರಾಲ್ ನ ಲಕ್ಷಣವಾಗಿದೆ. ಹಾಗಾಗಿಯೇ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಲು ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳು, ಹೆಚ್ಚಿನ- ಸಾಂದ್ರತೆಯ ಲಿಪೊಪ್ರೋಟೀನ್ (ಎಚ್ಡಿಎಲ್) ಮತ್ತು ಕಡಿಮೆ- ಸಾಂದ್ರತೆಯ ಲಿಪೊಪ್ರೋಟೀನ್ (ಎಲ್ಡಿಎಲ್) ಪ್ರಮಾಣವನ್ನು ಪರಿಶೀಲಿಸುವ ರಕ್ತ ಪರೀಕ್ಷೆಯಾಗಿದೆ.

ಸೂಚನೆ: ಈ ಲೇಖನದಲ್ಲಿ ನೀಡಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೂ, ತಜ್ಞರನ್ನು ಸಂಪರ್ಕಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ