ಎಚ್ಐವಿ , ಟಿಬಿ ರೋಗಿಗಳಿಗೆ ಗುಡ್​​​ ನ್ಯೂಸ್: ಸ್ಮಾರ್ಟ್ ಮಾತ್ರೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

MIT ಸಂಶೋಧಕರು ಸ್ಮಾರ್ಟ್ ಮಾತ್ರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಚಿಪ್ ಅಳವಡಿಸಿದ ಮಾತ್ರೆಗಳು ಹೊಟ್ಟೆಯಲ್ಲಿ ಕರಗಿದೆಯೇ ಎಂಬುದನ್ನು ತಿಳಿಸುತ್ತವೆ. ಜೈವಿಕ ವಿಘಟನೀಯ ಈ ಚಿಪ್, ದೀರ್ಘಕಾಲಿಕ ಔಷಧಿ ಸೇವಿಸುವ HIV, TB ರೋಗಿಗಳಿಗೆ ಅನುಕೂಲ. ಇದು ಔಷಧ ಸೇವನೆಯನ್ನು ಖಚಿತಪಡಿಸಿ, ವೈದ್ಯರಿಗೆ ಮಾಹಿತಿ ನೀಡುತ್ತದೆ. ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೂ ಸಂವಹನಕ್ಕೆ ಸಹಾಯಕವಾಗಲಿದೆ.

ಎಚ್ಐವಿ , ಟಿಬಿ ರೋಗಿಗಳಿಗೆ ಗುಡ್​​​ ನ್ಯೂಸ್: ಸ್ಮಾರ್ಟ್ ಮಾತ್ರೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು
ಸಾಂದರ್ಭಿಕ ಚಿತ್ರ

Updated on: Jan 11, 2026 | 4:40 PM

ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದೆ ಎಂದರೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಗ್ಯಾಜೆಟ್‌ಗಳಲ್ಲಿ ಚಿಪ್‌ಗಳನ್ನು ಅಳವಡಿಸುವ ರೀತಿ ಮಾತ್ರೆಗಳಿಗೂ ಚಿಪ್‌ ಅಳವಡಿಸುವ ಹೊಸ ತಂತ್ರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಮಾತ್ರೆ ಹೊಟ್ಟೆಗೆ ಹೋದ ತಕ್ಷಣ ದೀರ್ಘಕಾಲದವರೆಗೆ ಮಾತನಾಡ ವ್ಯಕ್ತಿ ಮಾತನಾಡುತ್ತಾನೆ ಎಂದು ಹೇಳಲಾಗಿದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಶೋಧಕರು ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವರದಿಯ ಪ್ರಕಾರ, ಹೊಟ್ಟೆಗೆ ಪ್ರವೇಶಿಸಿದ ನಂತರ, ಮಾತ್ರೆ ಕರಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಅನಾರೋಗ್ಯದಿಂದಾಗಿ ದೀರ್ಘಕಾಲದವರೆಗೆ ಔಷಧಿ ತೆಗೆದುಕೊಳ್ಳಬೇಕಾದ ರೋಗಿಗಳಿಗೆ ಈ ತಂತ್ರಜ್ಞಾನ ಸಹಾಯಕವಾಗಬಹುದು ಎಂದು ಹೇಳಲಾಗಿದೆ. MIT ನ್ಯೂಸ್ ವರದಿಯ ಪ್ರಕಾರ, ಈ ಮಾತ್ರೆಯು ಚಿಪ್ ತರಹದ ರೇಡಿಯೋ ಫ್ರೀಕ್ವೆನ್ಸಿ ಆಂಟೆನಾವನ್ನು ಹೊಂದಿದೆ. ಇದು ಜೈವಿಕ ವಿಘಟನೀಯವಾಗಿದೆ.

ಈ ಮಾತ್ರೆ ಹೊಟ್ಟೆಯಲ್ಲಿ ಹೋದ ತಕ್ಷಣ ವೈದ್ಯರು ನೀಡಿದ ಮಾತ್ರೆಗಳು ಕರಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ತನ್ನ ಕೆಲಸವನ್ನು ಮಾಡಿದ ನಂತರ, ಆಂಟೆನಾ ಅಥವಾ ಚಿಪ್ ದೇಹದಿಂದ ನಿರ್ಗಮಿಸುತ್ತದೆ. ಈ ರೀತಿಯ ಮಾತ್ರೆ ಕಸಿ ಮಾಡಿಸಿಕೊಂಡವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ವರದಿ ಹೇಳುತ್ತದೆ. ಅಂತಹ ರೋಗಿಗಳು ದೀರ್ಘಕಾಲದವರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಈ ಮಾತ್ರೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಲಾಗಿದೆ. ಈ ಮಾತ್ರೆಯನ್ನು ಕೆಲವೊಂದು ಕ್ಯಾಪ್ಸುಲ್‌ಗೆ ಸೇರಿಸಿದ ನಂತರ ಇದನ್ನು ನುಂಗಲು ನೀಡಲಾಗುತ್ತದೆ. ಇದು ಔಷಧಿಯೊಂದಿಗೆ ಕೆಲಸ ಮಾಡುತ್ತದೆ ಮತ್ತು ಹೊಟ್ಟೆಯೊಳಗೆ ಒಮ್ಮೆ ಅದರ ಆಂಟೆನಾ ರೋಗಿಯೊಂದಿಗೆ ಸಂವಹನ ನಡೆಸಲು ಸಕ್ರಿಯಗೊಳ್ಳುತ್ತದೆ.

ಇದನ್ನೂ ಓದಿ: ಹೃದಯ ಚೆನ್ನಾಗಿರಬೇಕು ಅಂದ್ರೆ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ 3 ಆಹಾರಗಳನ್ನು ಸೇವಿಸಬೇಡಿ

ಜನರು ತಮ್ಮ ಆರೋಗ್ಯವನ್ನು ಸುಧಾರಿಸಲು ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯುವುದು ಈ ಸಂಶೋಧನೆಯ ಮುಖ್ಯ ಗುರಿಯಾಗಿದೆ ಎಂದು MIT ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಜಿಯೋವಾನಿ ಟ್ರಾವೆರ್ಸೊ ಹೇಳಿದ್ದಾರೆ. ಸಂಶೋಧಕರು ಕೆಲವು ಸತುವನ್ನು ಬಳಸಿ ಮಾತ್ರೆ ರಚಿಸಿದ್ದಾರೆ. ಹೊಟ್ಟೆಗೆ ಹೋದ ನಂತರ ಮಾತ್ರೆಯ ಹೊರ ಭಾಗ ಕರಗುತ್ತದೆ ಮತ್ತು ಚಿಪ್ ಹೊಟ್ಟೆಯಲ್ಲಿ ಇರುತ್ತದೆ. ಇದರಿಂದ ದಿರ್ಘಾಕಾಲದವರೆಗೆ ಮಾತನಾಡದ ರೋಗಿಯೊಂದಿಗೆ ಸಂವಹನ ನಡೆಸಲು ಪ್ರಾರಂಭಿಸುತ್ತದೆ. ನುಂಗಿದ 10 ನಿಮಿಷಗಳ ನಂತರ ರೋಗಿ ಮತ್ತು ಮಾತ್ರೆ ನಡುವಿನ ಕೆಲಸ ಮಾಡಲು ಶುರು ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ