ಕೇರಳದಲ್ಲಿ 15 ಸಾವಿರಕ್ಕೂ ಹೆಚ್ಚು ಮಂಗನಬಾವು ಪ್ರಕರಣ ಪತ್ತೆ; ಇದರ ನಿಯಂತ್ರಣ ಹೇಗೆ?

|

Updated on: Mar 28, 2024 | 12:35 PM

Mumps Symptoms: ಕೇರಳದಲ್ಲಿ ಮಂಗನ ಬಾವು ಪ್ರಕರಣಗಳು ವಿಪರೀತ ಜಾಸ್ತಿಯಾಗುತ್ತಿವೆ. ಸೋಂಕಿತ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದ ಉಸಿರಾಟದ ಹನಿಗಳ ಮೂಲಕ ಅಥವಾ ಕಲುಷಿತ ಮೇಲ್ಮೈಗಳ ನೇರ ಸಂಪರ್ಕದ ಮೂಲಕ ಮಂಗನಬಾವು ವೈರಸ್ ಹರಡುತ್ತದೆ. ಮಂಪ್ಸ್ ಅಥವಾ ಮಂಗನಬಾವು ಲಕ್ಷಣಗಳು ಯಾವುವು? ಇದನ್ನು ತಡೆಗಟ್ಟುವುದು ಹೇಗೆ? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕೇರಳದಲ್ಲಿ 15 ಸಾವಿರಕ್ಕೂ ಹೆಚ್ಚು ಮಂಗನಬಾವು ಪ್ರಕರಣ ಪತ್ತೆ; ಇದರ ನಿಯಂತ್ರಣ ಹೇಗೆ?
ಮಂಗನಬಾವು
Image Credit source: iStock
Follow us on

ಕಳೆದ 2 ತಿಂಗಳಲ್ಲಿ ಅಂದರೆ ಮಾರ್ಚ್ 22ರ ಹೊತ್ತಿಗೆ ಕೇರಳದಲ್ಲಿ ಒಟ್ಟು 15,637 ಮಂಗನಬಾವು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲವು ತಿಂಗಳುಗಳಿಂದ ಕೇರಳ ಮಂಗನಬಾವು (Mumps Cases) ಪ್ರಕರಣಗಳ ಹಾವಳಿಯಿಂದ ನಲುಗುತ್ತಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿ ಮಂಪ್ಸ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳು ಹೇಳುತ್ತವೆ. ಆದರೆ, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂನಲ್ಲಿ ಬಳಸಲಾಗುವ ಪ್ರಸ್ತುತ MR ಲಸಿಕೆಯನ್ನು MMR ಲಸಿಕೆಯೊಂದಿಗೆ ಬದಲಾಯಿಸಲು ರಾಜ್ಯ ಅಧಿಕಾರಿಗಳು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಕೇರಳ ರಾಜ್ಯದಲ್ಲಿನ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಈ ಸಮಸ್ಯೆಯ ಬಗ್ಗೆ ಎಚ್ಚರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳ ಹೊರತುಪಡಿಸಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿಯೂ ಮಂಗನಬಾವು ಪ್ರಕರಣಗಳು ವರದಿಯಾಗಿವೆ.

ಮಂಪ್ಸ್ ಎಂದರೇನು?:

ಮಂಗನಬಾವು ಅಥವಾ ಮಂಪ್ಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಮಂಪ್ಸ್ ವೈರಸ್‌ನಿಂದ ಉಂಟಾಗುತ್ತದೆ. ಈ ವೈರಸ್ ಪ್ಯಾರಾಮಿಕ್ಸೊವೈರಸ್ ಎಂದು ಕರೆಯಲ್ಪಡುವ ವೈರಸ್‌ಗಳ ಗುಂಪಿಗೆ ಸೇರಿದೆ. ಮಂಪ್ಸ್ ಸಾಮಾನ್ಯವಾಗಿ ತಲೆನೋವು, ಜ್ವರ ಮತ್ತು ಆಯಾಸದಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಇದು ಮುಂದುವರಿದ ಹಂತಗಳನ್ನು ತಲುಪಿದಾಗ ಇದು ಕೆಲವು ಲಾಲಾರಸ ಗ್ರಂಥಿಗಳಲ್ಲಿ ತೀವ್ರವಾದ ಊತಕ್ಕೆ ಕಾರಣವಾಗುತ್ತದೆ. ಇದು ಊದಿಕೊಂಡ ಕೆನ್ನೆ ಮತ್ತು ಊದಿಕೊಂಡ ದವಡೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಬೆಂಗಳೂರು: ಪೋಷಕರೇ ಎಚ್ಚರ, ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಂಗನ ಬಾವು ಕಾಯಿಲೆ

ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, “ಮಂಪ್ಸ್ ಬಾಲ್ಯದ ಸಾಮಾನ್ಯ ಕಾಯಿಲೆಯಾಗಿದೆ. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಆದರೆ, ಈಗ ಮಂಪ್ಸ್ ಏಕಾಏಕಿ ಹೆಚ್ಚಾಗುತ್ತಿದೆ.

ಮಂಗನಬಾವು ಲಕ್ಷಣಗಳು:

ಮಂಪ್ಸ್‌ನ ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ, ಹೆಚ್ಚಿನ ಜನರಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಮಂಪ್ಸ್​ನ ಮುಖ್ಯ ಲಕ್ಷಣಗಳೆಂದರೆ,

  • ತಲೆನೋವು
  • ಸ್ನಾಯು ನೋವು
  • ಜ್ವರ
  • ಆಯಾಸ
  • ಹಸಿವಿನ ಕೊರತೆ

1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯನ್ನು ಕೊಡಿಸುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಮಂಗನಬಾವು ಲಸಿಕೆ ಸಾಮಾನ್ಯವಾಗಿ ನೀಡಲಾಗುವ ಬಾಲ್ಯದ ವ್ಯಾಕ್ಸಿನೇಷನ್‌ಗಳ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಸಂಯೋಜಿತ ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯಾಗಿ ನೀಡಲಾಗುತ್ತದೆ. 12 ಮತ್ತು 15 ತಿಂಗಳ ವಯಸ್ಸಿನ ನಡುವಿನ ಮೊದಲ ಡೋಸ್ ಹಾಗೂ ಶಾಲೆಗೆ ಪ್ರವೇಶಿಸುವ ಮೊದಲು 4 ಮತ್ತು 6 ವರ್ಷಗಳ ನಡುವಿನ ಎರಡನೇ ಡೋಸ್ ನೀಡಲಾಗುತ್ತದೆ.

ಇದನ್ನೂ ಓದಿ: Measles Symptoms: ಮಕ್ಕಳಲ್ಲಿ ದಡಾರದ 7 ಲಕ್ಷಣಗಳಿವು

ಮಂಗನಬಾವು ನಿಮ್ಮ ಮೆದುಳು, ಅಂಡಾಶಯಗಳು, ವೃಷಣಗಳು ಅಥವಾ ಮೇದೋಜ್ಜೀರಕ ಗ್ರಂಥಿಯಂತಹ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಕಂಡುಬರುವ ಮಂಪ್ಸ್​ನ ಕೆಲವು ಲಕ್ಷಣಗಳು ಹೀಗಿವೆ…

  • ವಿಪರೀತ ಜ್ವರ
  • ಗಟ್ಟಿಯಾದ ಕುತ್ತಿಗೆ
  • ತೀವ್ರ ತಲೆನೋವು
  • ಗೊಂದಲ
  • ಹೊಟ್ಟೆ ನೋವು
  • ವಾಂತಿ

ಮಂಪ್ಸ್ ಲಸಿಕೆಯನ್ನು ಸ್ವೀಕರಿಸದ 2ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಸಾಮಾನ್ಯವಾಗಿ ದಡಾರ ಪರಿಣಾಮ ಬೀರುತ್ತದೆ. ಹದಿಹರೆಯದವರು ಮತ್ತು ವಯಸ್ಕರು ಮಂಗನಬಾವಿನ ವ್ಯಾಕ್ಸಿನೇಷನ್ ಹಾಕಿಸಿಕೊಂಡರೂ ಸಹ ಮಂಪ್ಸ್ ಬರಬಹುದು. ಹಲವಾರು ವರ್ಷಗಳ ನಂತರ ಲಸಿಕೆಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.

ಮಂಗನ ಬಾವನ್ನು ನಿಯಂತ್ರಿಸಲು ಸಾಧ್ಯವಿದೆ. ಇದು ಮಾರಣಾಂತಿಕ ರೋಗವಲ್ಲ. ಏಕೆಂದರೆ ಮಂಪ್ಸ್ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಲಸಿಕೆಯನ್ನು ಸಾಮಾನ್ಯವಾಗಿ ಮಂಪ್ಸ್ ಮತ್ತು ರುಬೆಲ್ಲಾ ವಿರುದ್ಧ ರಕ್ಷಿಸುವ ಸಂಯೋಜನೆಯ ಲಸಿಕೆಯ ಭಾಗವಾಗಿ ನೀಡಲಾಗುತ್ತದೆ.

ಮಂಗನಬಾವು ಸಾಂಕ್ರಾಮಿಕ ರೋಗವಾಗಿದ್ದು, ಇದು ಸೋಂಕಿತರು ಸೀನುವುದರಿಂದ, ಕೆಮ್ಮುವುದರಿಂದ, ಶೀತವಾದಾಗ ಅವರ ಕೈಯನ್ನು ಮುಟ್ಟುವುದರಿಂದ, ಎಂಜಲು ತಾಗಿಸಿಕೊಳ್ಳುವುದರಿಂದ ಸುಲಭವಾಗಿ ಬೇರೊಬ್ಬರಿಗೆ ಹರಡುತ್ತದೆ. ಮಂಗನಬಾವು ಸೋಂಕಿಗೆ ಲಸಿಕೆಯನ್ನು ಸ್ವೀಕರಿಸದ 2ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಈ ರೋಗ ಬಹಳ ಹೆಚ್ಚು ಪರಿಣಾಮ ಬೀರುತ್ತದೆ. ಮಂಗನಬಾವು ವೈರಸ್‌ಗೆ ಒಡ್ಡಿಕೊಂಡ ಸುಮಾರು 2 ರಿಂದ 3 ವಾರಗಳ ನಂತರ ಮಂಪ್ಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರಬಹುದು.

ಒಂದುವೇಳೆ ನಿಮ್ಮ ಮಗುವಿಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ 103 F (39 C) ಅಥವಾ ಹೆಚ್ಚಿನ ಜ್ವರ ಇದ್ದರೆ, ತಿನ್ನಲು ಅಥವಾ ಕುಡಿಯಲು ತೊಂದರೆ ಅನುಭವಿಸುತ್ತಿದ್ದರೆ, ಹೊಟ್ಟೆ ನೋವು ಹೆಚ್ಚಾಗಿದ್ದರೆ, ವೃಷಣಗಳಲ್ಲಿ ನೋವು ಮತ್ತು ಊತ ಇದ್ದರೆ ವೈದ್ಯರ ಬಳಿ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ