AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumps Symptoms: ಮಂಗನಬಾವು ಸೋಂಕಿಗೆ ಕಾರಣವೇನು?; ಇದಕ್ಕೆ ಚಿಕಿತ್ಸೆ ಇದೆಯೇ?

ಮಂಗನಬಾವು ವೈರಸ್‌ಗೆ ಒಡ್ಡಿಕೊಂಡ ಸುಮಾರು 2 ರಿಂದ 3 ವಾರಗಳ ನಂತರ ಮಂಪ್ಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕೆಲವೊಮ್ಮೆ ಮಂಗನಬಾವು ನಿಮ್ಮ ಮೆದುಳು, ಮೇದೋಜ್ಜೀರಕ ಗ್ರಂಥಿ, ವೃಷಣಗಳು ಅಥವಾ ಅಂಡಾಶಯಗಳು ಸೇರಿದಂತೆ ನಿಮ್ಮ ಅಂಗಗಳ ಮೇಲೆ ಪರಿಣಾಮ ಬೀರಬಹುದು.

Mumps Symptoms: ಮಂಗನಬಾವು ಸೋಂಕಿಗೆ ಕಾರಣವೇನು?; ಇದಕ್ಕೆ ಚಿಕಿತ್ಸೆ ಇದೆಯೇ?
ಮಂಗನಬಾವುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 29, 2024 | 1:06 PM

ಮಂಗನಬಾವು ಸಾಂಕ್ರಾಮಿಕ ರೋಗವಾಗಿದ್ದು, ಇದು ಸೋಂಕಿತರು ಸೀನುವುದರಿಂದ, ಕೆಮ್ಮುವುದರಿಂದ, ಶೀತವಾದಾಗ ಅವರ ಕೈಯನ್ನು ಮುಟ್ಟುವುದರಿಂದ, ಎಂಜಲು ತಾಗಿಸಿಕೊಳ್ಳುವುದರಿಂದ ಸುಲಭವಾಗಿ ಬೇರೊಬ್ಬರಿಗೆ ಹರಡುತ್ತದೆ. ಮಂಗನಬಾವು ಸೋಂಕಿಗೆ ಲಸಿಕೆಯನ್ನು ಸ್ವೀಕರಿಸದ 2ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಈ ರೋಗ ಬಹಳ ಹೆಚ್ಚು ಪರಿಣಾಮ ಬೀರುತ್ತದೆ. ಈ ಮಂಗನಬಾವಿನ ಲಕ್ಷಣಗಳೇನು? ಇದಕ್ಕೆ ಯಾವ ಚಿಕಿತ್ಸೆ ಪಡೆಯಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಂಗನಬಾವು ರೋಗದ ಲಕ್ಷಣಗಳು:

ಮಂಗನಬಾವು ವೈರಸ್‌ಗೆ ಒಡ್ಡಿಕೊಂಡ ಸುಮಾರು 2 ರಿಂದ 3 ವಾರಗಳ ನಂತರ ಮಂಪ್ಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರಬಹುದು. ಕೆಲವೊಮ್ಮೆ ಮಂಗನಬಾವು ನಿಮ್ಮ ಮೆದುಳು, ಮೇದೋಜ್ಜೀರಕ ಗ್ರಂಥಿ, ವೃಷಣಗಳು ಅಥವಾ ಅಂಡಾಶಯಗಳು ಸೇರಿದಂತೆ ನಿಮ್ಮ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಇದು ಸಾಮಾನ್ಯವಾಗಿ ಹದಿಹರೆಯದವರು ಮತ್ತು ವಯಸ್ಕರಲ್ಲಿ ಮಾತ್ರ ಸಂಭವಿಸುತ್ತದೆ.

ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ

– ಮುಖದ ಕೆಳಗಿನ ಭಾಗ ಊದಿಕೊಳ್ಳುವುದು.

-ತಲೆನೋವು

– ಸ್ನಾಯು ನೋವು

– ಹಸಿವಾಗದಿರುವುದು

– ಜ್ವರ

– ಆಯಾಸ

ಒಂದುವೇಳೆ ನಿಮ್ಮ ಮಗುವಿಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ 103 F (39 C) ಅಥವಾ ಹೆಚ್ಚಿನ ಜ್ವರ ಇದ್ದರೆ, ತಿನ್ನಲು ಅಥವಾ ಕುಡಿಯಲು ತೊಂದರೆ ಅನುಭವಿಸುತ್ತಿದ್ದರೆ, ಹೊಟ್ಟೆ ನೋವು ಹೆಚ್ಚಾಗಿದ್ದರೆ, ವೃಷಣಗಳಲ್ಲಿ ನೋವು ಮತ್ತು ಊತ ಇದ್ದರೆ ವೈದ್ಯರ ಬಳಿ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸಿ.

ಮಂಗನಬಾವು ಸೋಂಕಿಗೆ ಚಿಕಿತ್ಸೆಯೇನು?:

ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯನ್ನು ಕೊಡಿಸುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಊದಿಕೊಂಡ ಲಾಲಾರಸ ಗ್ರಂಥಿಗಳ ಮೇಲೆ ತಂಪಾದ ಅಥವಾ ಬೆಚ್ಚಗಿನ ಬಟ್ಟೆಯನ್ನು ಹಾಕಿ.

ಇದನ್ನೂ ಓದಿ: ಬೆಂಗಳೂರು: ಪೋಷಕರೇ ಎಚ್ಚರ, ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಂಗನ ಬಾವು ಕಾಯಿಲೆ

ಮಂಗನಬಾವು ಲಸಿಕೆ ಸಾಮಾನ್ಯವಾಗಿ ನೀಡಲಾಗುವ ಬಾಲ್ಯದ ವ್ಯಾಕ್ಸಿನೇಷನ್‌ಗಳ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಸಂಯೋಜಿತ ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯಾಗಿ ನೀಡಲಾಗುತ್ತದೆ. 12 ಮತ್ತು 15 ತಿಂಗಳ ವಯಸ್ಸಿನ ನಡುವಿನ ಮೊದಲ ಡೋಸ್ ಹಾಗೂ ಶಾಲೆಗೆ ಪ್ರವೇಶಿಸುವ ಮೊದಲು 4 ಮತ್ತು 6 ವರ್ಷಗಳ ನಡುವಿನ ಎರಡನೇ ಡೋಸ್ ನೀಡಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ