ಕ್ಯಾನ್ಸರ್ (Cancer) ವಿಶ್ವದ ಅತ್ಯಂತ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಅಸಹಜ ಜೀವಕೋಶದ ಬೆಳವಣಿಗೆಯು ದೇಹದ ಇತರೆ ಭಾಗಗಳನ್ನು ಆಕ್ರಮಿಸುವ ಮತ್ತು ಹರಡುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ.
ಕ್ಯಾನ್ಸರ್ ರೋಗವೆಂದರೇನು, ತಡೆಗಟ್ಟುವುದು ಹೇಗೆ? ಚಿಕಿತ್ಸೆ ಏನಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾನ್ಸರ್ ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ.
2022ರಲ್ಲಿ ಸುಮಾರು 10 ಮಿಲಿಯನ್ ಸಾವುಗಳು ಸಂಭವಿಸಿವೆ. ಆರು ಮಂದಿಯಲ್ಲಿ ಒಬ್ಬರು ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ.
ಕೆಲವು ಸಾಮಾನ್ಯ ಕ್ಯಾನ್ಸರ್ಗಳೆಂದರೆ ಸ್ತನ, ರಕ್ತ, ಶ್ವಾಸಕೋಶ, ಪ್ರಾಸ್ಟೇಟ್ ಕ್ಯಾನ್ಸರ್, ಸರಿಸುಮಾರು ಮೂರನೇ ಒಂದು ಭಾಗದಷ್ಟು ಸಾವುಗಳು ತಂಬಾಕು, ಮದ್ಯಪಾನದಿಂದ ಸಂಭವಿಸುತ್ತದೆ.
ನವೆಂಬರ್ 7 ರಂದು ಕ್ಯಾನ್ಸರ್ ಜಾಗೃತಿ ಅಭಿಯಾನ ಏಕೆ?
ಏಕೆ ನವೆಂಬರ್ 7?
ನವೆಂಬರ್ 7 ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವ ರೇಡಿಯೊಥೆರಪಿ ಚಿಕಿತ್ಸೆಗೆ ಅಗತ್ಯವಾದ ರೇಡಿಯಂ ಮತ್ತು ಪೊಲೊನಿಯಂ ಅನ್ನು ಅನ್ವೇಷಣೆ ಮಾಡಿದ Madame Curie ಅವರ ಜನ್ಮ ದಿನವಾಗಿದೆ. ಹೀಗಾಗಿ, ಈ ದಿನದಂದೇ ಕ್ಯಾನ್ಸರ್ ಜಾಗೃತಿ ದಿನ ಆಚರಿಸಲಾಗುತ್ತದೆ. Madame Curie ಅವರ ಸಂಶೋಧನೆಗಾಗಿ 1911ರಲ್ಲಿ ಎರಡು ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
ನವೆಂಬರ್ ಏಳರಂದು ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದ ಆಚರಿಸಲಾಗುತ್ತದೆ. ಮೊದಲ ಬಾರಿಗೆ ಸೆಪ್ಟೆಂಬರ್ 2014ರಂದು ಆಗಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವರಾದ ಡಾ. ಹರ್ಷ ವರ್ಧನ್ ಅವರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಕ್ಕೆ ಚಾಲನೆ ನೀಡಲಾಗಿತ್ತು.
ಭಾರತದಲ್ಲಿ 2021 ರಲ್ಲಿ 26.7 ದಶಲಕ್ಷ ಇದ್ದ ಕ್ಯಾನ್ಸರ್ ರೋಗಿಗಳ ಸಂಖ್ಯೆಯು 2025 ರಲ್ಲಿ 29.8 ದಶಲಕ್ಷಕ್ಕೆ ಏರಿಕೆ ಕಾಣಲಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‌ನ ಮಾಹಿತಿ ನೀಡಿದೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಮಹತ್ವ: ಭಾರತದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಕ್ಯಾನ್ಸರ್ ಅನ್ನು ಆರಂಭಿಕ ಪತ್ತೆ ಮತ್ತು ಗುಣಪಡಿಸುವ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಸೆಪ್ಟೆಂಬರ್ 2014ರಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಘೋಷಿಸಿದರು. ಈ ದಿನವು ಸರ್ಕಾರಿ ಆಸ್ಪತ್ರೆಗಳು ಮತ್ತು ಪುರಸಭೆಯ ಚಿಕಿತ್ಸಾಲಯಗಳನ್ನು ಜನರಿಗೆ ಉಷಿತ ಸ್ಕ್ರೀನಿಂಗ್ ನೀಡಲು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಭಾರತದಲ್ಲಿ ಕ್ಯಾನ್ಸರ್ ಸೌಲಭ್ಯವನ್ನು ಸುಲಭಗೊಳಿಸಲು 1975ರಲ್ಲಿ ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕ್ಯಾನ್ಸರ್ಗೆ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ಹಲವಾರು ಆಯ್ಕೆಗಳಿವೆ, ನೀವು ಹೊಂದಿರುವ ಕ್ಯಾನ್ಸರ್ ಮತ್ತು ಅದರ ಹಂತವು ನೀವು ಯಾವ ರೀತಿಯ ಚಿಕಿತ್ಸೆಯನ್ನು ಪಡೆಯುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ, ರೋಗಿಯು ರೋಗನಿರ್ಣಯ ಮಾಡುವ ಕ್ಯಾನ್ಸರ್ ಪ್ರಕಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆಗಾಗಿ ಬಯೋಮಾರ್ಕರ್ ಪರೀಕ್ಷೆ, ಕೀಮೋಥೆರಪಿ, ಹಾರ್ಮೋನ್ ಥೆರಪಿ, ಇಮ್ಯುನೋಥೆರಪಿ, ಫೋಟೋಡೈನಾಮಿಕ್ ಥೆರಪಿ, ರೇಡಿಯೇಷನ್ ಥೆರಪಿ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ಗಳು ಪ್ರಪಂಚದಾದ್ಯಂತ ಇರುವ ಚಿಕಿತ್ಸೆಗಳಾಗಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ