ಮಧುಮೇಹದಿಂದ ಬಳಲುತ್ತಿರುವ 5ರಲ್ಲಿ ಒಬ್ಬರು 18-30 ವರ್ಷ ವಯಸ್ಸಿನವರು: ಸಂಶೋಧನೆ

|

Updated on: Aug 01, 2023 | 6:58 PM

ಸಂಶೋಧನೆಯೊಂದರ ಪ್ರಕಾರ ಶೇಕಡಾ 30 ರಲ್ಲಿ 22 ರಷ್ಟು ಮಧುಮೇಹಿಗಳು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಯುವ ಪೀಳಿಗೆಯಲ್ಲಿ ಮಧುಮೇಹ ಹರಡುವಿಕೆ ಹೆಚ್ಚುತ್ತಿದೆ ಎಂದು ಬಹಿರಂಗ ಪಡಿಸಿದೆ.

ಮಧುಮೇಹದಿಂದ ಬಳಲುತ್ತಿರುವ 5ರಲ್ಲಿ ಒಬ್ಬರು 18-30 ವರ್ಷ ವಯಸ್ಸಿನವರು: ಸಂಶೋಧನೆ
ಮಧುಮೇಹ
Follow us on

ಫಿಟರ್‌ಫ್ಲೈ, ಡಿಜಿಟಲ್ ಥೆರಪ್ಯೂಟಿಕ್ಸ್‌ನಲ್ಲಿ (DTx) ಪರಿಣತಿ ಹೊಂದಿರುವ ಆರೋಗ್ಯ-ತಂತ್ರಜ್ಞಾನ ಕಂಪನಿಯು, ಮಧುಮೇಹ ಪೂರ್ವ ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡ ಸುಮಾರು 16,000 ಡಿಜಿಟಲ್ ಸಂವಹನಗಳ ವಿಶ್ಲೇಷಣೆಯಿಂದ ಮಧುಮೇಹದಿಂದ ಬಳಲುತ್ತಿರುವವರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಪ್ಲಾಟ್‌ಫಾರ್ಮ್‌ನ ಮಧುಮೇಹ ರಿವರ್ಸಲ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಒಂದು ವರ್ಷದಲ್ಲಿ ನಡೆಸಿದ ವಿಶ್ಲೇಷಣೆಯು ಮೌಲ್ಯಯುತವಾದ ಸಂಶೋಧನೆಗಳನ್ನು ಒದಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 101 ಮಿಲಿಯನ್ ಮೀರಿದೆ ಎಂದು ಇತ್ತೀಚಿನ ವರದಿಯು ತೋರಿಸಿದ ಸಮಯದಲ್ಲಿ ಈ ಒಳನೋಟಗಳು ಬಂದಿವೆ, ಹೆಚ್ಚುವರಿಯಾಗಿ 136 ಮಿಲಿಯನ್ ಅನ್ನು ಪ್ರಿ-ಡಯಾಬಿಟಿಕ್ ಎಂದು ವರ್ಗೀಕರಿಸಲಾಗಿದೆ.

ಪ್ರಮುಖವಾಗಿ ಸಂಶೋಧನೆಯಲ್ಲಿ, ವಿಶ್ಲೇಷಿಸಿದ ದತ್ತಾಂಶದ ಪ್ರಕಾರ ಈ ಉನ್ನತ ಮಟ್ಟದ ಶೇಕಡಾ 30 ರಲ್ಲಿ 22 ರಷ್ಟು ರೋಗಿಗಳು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಯುವ ಪೀಳಿಗೆಯಲ್ಲಿ ಮಧುಮೇಹ ಹರಡುವಿಕೆ ಹೆಚ್ಚುತ್ತಿದೆ ಎಂದು ಬಹಿರಂಗ ಪಡಿಸಿದೆ. ಮಧುಮೇಹ ಹೊಂದಿರುವ ಐದು ವ್ಯಕ್ತಿಗಳಲ್ಲಿ ಒಬ್ಬರು (20%) 18 ರಿಂದ 30 ವರ್ಷ ವಯಸ್ಸಿನೊಳಗಿನವರು ಹಾಗೂ ಶೇಕಡಾ 60ರಷ್ಟು ಜನರು 18-45 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿದುಬಂದಿದೆ. ಕಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮಧುಮೇಹವು ಜನಸಂಖ್ಯಾ ಲಾಭಾಂಶ ಮತ್ತು ಆರ್ಥಿಕ ಬೆಳವಣಿಗೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೀಲು ನೋವು, ಮೊಣಕಾಲುಗಳ ಊತ: ಮಕ್ಕಳಲ್ಲೂ ಕಂಡು ಬರುತ್ತಿದೆ ಈ ಸಮಸ್ಯೆ, ಅಧ್ಯಯನದ ವರದಿ ಇಲ್ಲಿದೆ

ದತ್ತಾಂಶದಲ್ಲಿ ಮುಖ್ಯವಾಗಿ ತಿಳಿಸಲಾದ ಮತ್ತೊಂದು ಅಂಶವೆಂದರೆ ರೋಗನಿರ್ಣಯವನ್ನು ಲೆಕ್ಕಿಸದೆ ಮಧುಮೇಹವನ್ನು ನಿರ್ಲಕ್ಷ್ಯಿಸುವುದು. ಶೇಕಡಾ 70 ರಷ್ಟು ವ್ಯಕ್ತಿಗಳು ಮಧುಮೇಹದ ಕುಟುಂಬದ ಇತಿಹಾಸವನ್ನು ಹೊಂದಿದ್ದರೂ, ಸಮಸ್ಯೆಯನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: