Oropouche fever: ಒರೊಪೌಚೆ ವೈರಸ್‌ ಎಂದರೇನು? ಸೊಳ್ಳೆಯಿಂದ ಹರಡುವ ಈ ಸೋಂಕನ್ನು ತಡೆಗಟ್ಟುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 30, 2024 | 6:06 PM

ಹವಾಮಾನ ಬದಲಾವಣೆಯು ಜನರ ಆರೋಗ್ಯವನ್ನು ಹದಗೆಡಿಸಿದ್ದು ಈಗ ಬ್ರೆಜಿಲ್‌ನಲ್ಲಿಯೂ ಹೊಸದೊಂದು ಕಾಯಿಲೆ ಹುಟ್ಟಿಕೊಂಡಿದೆ. ಇಲ್ಲಿನ ಬಹಿಯಾದಲ್ಲಿ ಇಬ್ಬರು ಯುವತಿಯರ ಸಾವಿಗೆ ಕಾರಣವಾಗಿರುವ ಒರೊಪೌಚೆ ವೈರಸ್ ಈಗ ಸುದ್ದಿಯಲ್ಲಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಇದು ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದ್ದು, ಅಲ್ಲಿನ ಬಹಿಯಾ ರಾಜ್ಯದ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ವೈರಸ್‌ನಿಂದ ಸಾವನ್ನಪ್ಪಿದ್ದು ಈ ವೈರಸ್ಗೆ ಕಾರಣವಾದ ಮೊದಲ ಸಾವುನೋವು ಸಂಭವಿಸಿವೆ ಎಂದು ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

Oropouche fever: ಒರೊಪೌಚೆ ವೈರಸ್‌ ಎಂದರೇನು? ಸೊಳ್ಳೆಯಿಂದ ಹರಡುವ ಈ ಸೋಂಕನ್ನು ತಡೆಗಟ್ಟುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಸೊಳ್ಳೆಯಿಂದ ಹರಡುವ ರೋಗಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿವೆ. ಹವಾಮಾನ ಬದಲಾವಣೆಯು ಜನರ ಆರೋಗ್ಯವನ್ನು ಹದಗೆಡಿಸಿದ್ದು ಈಗ ಬ್ರೆಜಿಲ್‌ನಲ್ಲಿಯೂ ಹೊಸದೊಂದು ಕಾಯಿಲೆ ಹುಟ್ಟಿಕೊಂಡಿದೆ. ಇಲ್ಲಿನ ಬಹಿಯಾದಲ್ಲಿ ಇಬ್ಬರು ಯುವತಿಯರ ಸಾವಿಗೆ ಕಾರಣವಾಗಿರುವ ಒರೊಪೌಚೆ ವೈರಸ್ ಈಗ ಸುದ್ದಿಯಲ್ಲಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಇದು ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದ್ದು, ಅಲ್ಲಿನ ಬಹಿಯಾ ರಾಜ್ಯದ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ವೈರಸ್‌ನಿಂದ ಸಾವನ್ನಪ್ಪಿದ್ದು ಈ ವೈರಸ್ಗೆ ಕಾರಣವಾದ ಮೊದಲ ಸಾವುನೋವು ಸಂಭವಿಸಿವೆ ಎಂದು ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಒರೊಪೌಚೆ ವೈರಸ್ ಅಥವಾ ಜ್ವರ ಎಂದರೇನು?

ಈ ವೈರಸ್ ಪ್ರಾಥಮಿಕವಾಗಿ ಮಿಡ್ಜ್ ಗಳ ಕಡಿತದ ಮೂಲಕ ಹರಡುತ್ತದೆ, ಇದು ಒಂದು ರೀತಿಯ ಸಣ್ಣ ನೊಣ, ಜೊತೆಗೆ ಸೊಳ್ಳೆಗಳು ಸಹ ಇದನ್ನು ಹರಡಬಹುದು. ಈ ವೈರಸ್ ಅನ್ನು ಮೊದಲು ಬ್ರೆಜಿಲ್‌ನಲ್ಲಿ 1955 ರಲ್ಲಿ ಗುರುತಿಸಲಾಗಿತ್ತು. ಅಂದಿನಿಂದ, ಇದು ಬ್ರೆಜಿಲ್, ಪೆರು, ಹೈಟಿ, ಕೊಲಂಬಿಯಾ ಮತ್ತು ಫ್ರೆಂಚ್ ಗಯಾನಾದಂತಹ ಉಷ್ಣವಲಯದ ಪ್ರದೇಶಗಳಲ್ಲಿ ಈ ವೈರಸ್ ನಿಂದ ಹರಡಿದ ಪ್ರಕರಣಗಳು ವರದಿಯಾಗಿದೆ. ಒರೊಪೌಚೆ ವೈರಸ್ ಹೆಚ್ಚಿನ ಜ್ವರವನ್ನು ಉಂಟು ಮಾಡುತ್ತದೆ. ಇದು ಕ್ಯುಲಿಕೋಯಿಡ್ಸ್ ಪ್ಯಾರೆನ್ಸ್, ಈಡಿಸ್ ಸೆರಾಟಸ್ ಸೊಳ್ಳೆಯಿಂದ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ, ಇದನ್ನು ಸ್ಥಳೀಯವಾಗಿ ಮಾರುಯಿಮ್ ಎಂದು ಕರೆಯಲಾಗುತ್ತದೆ.

ಒರೊಪೌಚೆ ಜ್ವರದ ಲಕ್ಷಣಗಳು:

ಈ ಜ್ವರದ ಆರಂಭವು ಸಾಮಾನ್ಯವಾಗಿ ಹಠಾತ್ ಆಗಿ ಬರುತ್ತದೆ. ಅಂದರೆ ಸಾಂಕ್ರಾಮಿಕ ಕಚ್ಚಿದ 4- 8 ದಿನಗಳಲ್ಲಿ

ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ರೋಗಲಕ್ಷಣಗಳಲ್ಲಿ ಇವು ಸೇರಿವೆ:

ಜ್ವರ

ತೀವ್ರ ತಲೆನೋವು

ಕೀಲು ಮತ್ತು ಸ್ನಾಯು ನೋವು

ಶೀತ

ವಾಕರಿಕೆ ಮತ್ತು ವಾಂತಿ

ತಲೆ ತಿರುಗುವಿಕೆ

ಫೋಟೋಫೋಬಿಯಾ (ಬೆಳಕಿಗೆ ಸೂಕ್ಷ್ಮತೆ)

ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿರುತ್ತವೆ ಅಲ್ಲದೆ ಒಂದು ವಾರದೊಳಗೆ ಕಡಿಮೆಯಾಗುತ್ತದೆ, ತೀವ್ರವಾದ ಪ್ರಕರಣಗಳಲ್ಲಿ ಮೆನಿಂಜೈಟಿಸ್‌ ನಂತಹ (ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ರಕ್ಷಣಾತ್ಮಕ ಪೊರೆಗಳು ಉರಿಯೂತಕ್ಕೆ ಒಳಗಾಗುತ್ತದೆ.) ಮಾರಣಾಂತಿಕ ತೊಡಕುಗಳಿಗೆ ಕಾರಣವಾಗುತ್ತವೆ.

ಇದನ್ನೂ ಓದಿ: ಶಿವನ ಪೂಜೆಗೆ ಮಾತ್ರವಲ್ಲ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಈ ಎಲೆ

ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:

ಒರೊಪೌಚೆ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಲಸಿಕೆಗಳಿಲ್ಲ. ಪ್ರಾಥಮಿಕವಾಗಿ ಬರುವ ಜ್ವರ, ನೋವು ಮತ್ತು ನಿರ್ಜಲೀಕರಣದಂತಹ ರೋಗಲಕ್ಷಣಗಳಿಗೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಚೇತರಿಕೆಗೆ ವಿಶ್ರಾಂತಿ ಮತ್ತು ಸಾಕಷ್ಟು ದ್ರವ ರೂಪದ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು. ಒರೊಪೌಚ್ ಜ್ವರವನ್ನು ಎದುರಿಸಲು ತಡೆಗಟ್ಟುವಿಕೆ ಪ್ರಮುಖವಾಗಿದೆ. ಅಲ್ಲದೆ ಪೀಡಿತ ಪ್ರದೇಶದಲ್ಲಿ ಸೊಳ್ಳೆಗಳ ಕಚ್ಚುವುದನ್ನು ತಪ್ಪಿಸುವುದು ಉತ್ತಮ ರಕ್ಷಣೆಯಾಗಿದೆ. ಇದು ಪ್ರಾಥಮಿಕವಾಗಿ ಕೀಟಗಳಿಂದ ಹರಡುವುದರಿಂದ, ಡೆಂಗ್ಯೂ ಮತ್ತು ಇತರ ಸೊಳ್ಳೆಯಿಂದ ಹರಡುವ ರೋಗಗಳಿಗೆ ಹೋಲುವ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿ.

ಕೀಟ ನಿವಾರಕವನ್ನು ಬಳಸಿ.

ಉದ್ದ ತೋಳಿನ ಬಟ್ಟೆ ಮತ್ತು ಪ್ಯಾಂಟ್ ಧರಿಸಿ.

ಚೆನ್ನಾಗಿ ತಪಾಸಣೆಗೊಳಗಾದ ಪ್ರದೇಶಗಳಲ್ಲಿ ಇರಿ.

ಸೊಳ್ಳೆ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ