Painkillers: ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 23, 2024 | 5:40 PM

ದೇಹದ ಯಾವುದೇ ಭಾಗದಲ್ಲಿ ಒಂದು ಸಣ್ಣ ನೋವಿದ್ದರೂ ಅದನ್ನು ಕಡಿಮೆ ಮಾಡುವಲ್ಲಿ ನೋವು ನಿವಾರಕಗಳು ಪರಿಣಾಮಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನೀವು ಎಲ್ಲಾ ರೀತಿಯ ನೋವಿಗೂ, ಮಾತ್ರೆಗಳನ್ನು ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಇದು ಹಲವಾರು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹ್ಯಾಗಾಗಿ ವೈದ್ಯರನ್ನು ಸಂಪರ್ಕಿಸದೆ ಯಾವ ಮಾತ್ರೆಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳು ಯಾವುದು? ಇಲ್ಲಿದೆ ಮಾಹಿತಿ.

Painkillers: ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಿದೆ
ಸಾಂದರ್ಭಿಕ ಚಿತ್ರ
Follow us on

ತಲೆನೋವು ಮೈ- ಕೈ ನೋವು ಬಂದರೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುತ್ತೀರಾ? ಯಾವಾಗಲಾದರೂ ಒಮ್ಮೆ ನೋವು ಬಂದಾಗ ಮಾತ್ರೆ ಸೇವನೆ ಮಾಡುವುದು ಸಹಜ. ಆದರೆ ಪದೇ ಪದೇ, ಚಿಕ್ಕ ಚಿಕ್ಕ ನೋವಿಗೂ ನೀವು ಮಾತ್ರೆಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ದೇಹದ ಯಾವುದೇ ಭಾಗದಲ್ಲಿ ಒಂದು ಸಣ್ಣ ನೋವಿದ್ದರೂ ಅದನ್ನು ಕಡಿಮೆ ಮಾಡುವಲ್ಲಿ ನೋವು ನಿವಾರಕಗಳು ಪರಿಣಾಮಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನೀವು ಎಲ್ಲಾ ರೀತಿಯ ನೋವಿಗೂ, ಮಾತ್ರೆಗಳನ್ನು ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಇದು ಹಲವಾರು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹ್ಯಾಗಾಗಿ ವೈದ್ಯರನ್ನು ಸಂಪರ್ಕಿಸದೆ ಯಾವ ಮಾತ್ರೆಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳು ಯಾವುದು? ಇಲ್ಲಿದೆ ಮಾಹಿತಿ.

ನೋವು ನಿವಾರಕಗಳು ಅತಿಯಾದರೆ ಈ ಸಮಸ್ಯೆಗಳು ಬರುತ್ತೆ ಹುಷಾರ್!

ಜಠರಗರುಳಿನ ಸಮಸ್ಯೆಗಳು: ಆಸ್ಪಿರಿನ್ ಮತ್ತು ಇಬುಪ್ರೊಫೇನ್ ನಂತಹ ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಿಗಳ (ಎನ್ ಎಸ್ ಎಐಡಿ) ದೀರ್ಘಕಾಲದ ಸೇವನೆಯು ಹೊಟ್ಟೆಯಲ್ಲಿ ಕಿರಿಕಿರಿ, ಹುಣ್ಣು ಮತ್ತು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಮೂತ್ರಪಿಂಡ ಹಾನಿಯಾಗುವ ಸಾಧ್ಯತೆ: ದೀರ್ಘಕಾಲದ ವರೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು. ಇದರಿಂದ ರಕ್ತ ಪರಿಚಲನೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ದೀರ್ಘಕಾಲದ ಕಾಯಿಲೆಗಳು ಅಥವಾ ಮೂತ್ರಪಿಂಡ ವೈಫಲ್ಯದ ಅಪಾಯ ಹೆಚ್ಚಾಗುತ್ತದೆ.

ಲಿವರ್ ಗೆ ಹಾನಿ: ನೀವು ಅಸೆಟಾಮಿನೋಫೆನ್ (ಪ್ಯಾರಸಿಟಮಾಲ್) ಅನ್ನು ಹೆಚ್ಚು ತೆಗೆದುಕೊಂಡರೆ, ಅದು ಯಕೃತ್ತಿನ ಅಥವಾ ಲಿವರ್ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಪರೀತವಾಗಿ ಮಾತ್ರೆಗಳನ್ನು ಸೇವನೆ ಮಾಡಿದರೆ ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು.

ತಲೆನೋವು: ನೋವು ನಿವಾರಕಗಳ ಅತಿಯಾದ ಬಳಕೆಯು ಕೆಲವರಿಗೆ ತಲೆನೋವಿಗೆ ಕಾರಣವಾಗಬಹುದು. ಈ ರೀತಿ ಬರುವ ತಲೆನೋವು ಬಹಳ ತೀವ್ರವಾಗಿ ಕಂಡುಬರುತ್ತದೆ.

ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ;

ನೋವು ನಿವಾರಕಗಳನ್ನು ನಾಲ್ಕರಿಂದ ಐದು ಗಂಟೆಗಳ ಅಂತರದಲ್ಲಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಇದಲ್ಲದೆ, ಇದನ್ನು ವಾರಕ್ಕೆ 2- 3 ಬಾರಿಗಿಂತ ಹೆಚ್ಚು ತೆಗೆದುಕೊಳ್ಳಬಾರದು.

ನೋವು ದೀರ್ಘಕಾಲದ ವರೆಗೆ ಮುಂದುವರಿದರೆ ಅಥವಾ ಆಗಾಗ ನೋವು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಈ ನೋವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:39 pm, Mon, 23 September 24