Parenting tips: ಒಂದು ಮಗು ಪಡೆದ ಬಳಿಕ ಮತ್ತೊಮ್ಮೆ ಗರ್ಭಧರಿಸಲು ಎಷ್ಟು ಸಮಯ ಕೊಡುವುದು ಒಳ್ಳೆಯದು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 01, 2024 | 6:17 PM

ಮೊದಲ ಹಾಗೂ ಎರಡನೇ ಮಗುವಿನ ಮಧ್ಯೆ ಎಷ್ಟು ಅಂತರವಿರಬೇಕು ಎನ್ನುವ ಪ್ರಶ್ನೆ ಕಾಡುವುದು ಸಹಜ. ಕೆಲವೊಮ್ಮೆ ಇಬ್ಬರೂ ಮಕ್ಕಳು ತುಂಬಾ ಕಡಿಮೆ ಅಂತರದಲ್ಲಿ ಜನಿಸುವುದರಿಂದ ತಂದೆ -ತಾಯಿಗೆ ಸಮಸ್ಯೆಗಳು ಹೆಚ್ಚಾಗಬಹುದು. ಈ ದೃಷ್ಟಿಯಿಂದ ಕೆಲವು ದಂಪತಿ ಒಂದು ಮಗು ಸಾಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಎರಡನೇ ಮಗು ಬೇಕು ಎನ್ನುವವರು ಕೆಲವು ಸಮಸ್ಯೆಗಳನ್ನು ತಡೆಯಲು ವೈದ್ಯರು ತಿಳಿಸುವ ನಿಯಮ ಪಾಲಿಸುವುದು ಒಳಿತು? ಹಾಗಾದರೆ ಮೊದಲ ಹಾಗೂ ಎರಡನೇ ಮಗುವಿನ ನಡುವಿನ ಅಂತರ ಎಷ್ಟಿರಬೇಕು? ಇಲ್ಲಿದೆ ಮಾಹಿತಿ.

Parenting tips: ಒಂದು ಮಗು ಪಡೆದ ಬಳಿಕ ಮತ್ತೊಮ್ಮೆ ಗರ್ಭಧರಿಸಲು ಎಷ್ಟು ಸಮಯ ಕೊಡುವುದು ಒಳ್ಳೆಯದು
ಸಾಂದರ್ಭಿಕ ಚಿತ್ರ
Follow us on

ಒಂದು ಮಗು ಹುಟ್ಟಿದ ನಂತರ ಮತ್ತೊಂದು ಮಗು ಬೇಕು ಎಂಬುದು ಅನೇಕ ದಂಪತಿಗಳ ಆಸೆಯಾಗಿರುತ್ತದೆ. ಆದರೆ, ಕೆಲವರು ಸರಿಯಾಗಿ ಪ್ಲ್ಯಾನ್ ಮಾಡದೆಯೇ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಏಕೆಂದರೆ ಇನ್ನೊಂದು ಮಗುವಾದರೆ ಎರಡು ಮಕ್ಕಳ ಲಾಲನೆ ಪಾಲನೆ ಮಾಡುವ ಜವಾಬ್ದಾರಿ ಹೆಗಲೇರುತ್ತದೆ. ಅದರಲ್ಲಿಯೂ ತಾಯಿಗೆ ಇಬ್ಬರು ಮಕ್ಕಳನ್ನು ಸಂಬಾಳಿಸುವುದು ಕ್ಲಿಷ್ಟಕರವಾಗುತ್ತದೆ. ಹಾಗಾಗಿ ಮನೆಯ ಮಹಿಳೆ ಮಕ್ಕಳ ಯೋಗಕ್ಷೇಮಕ್ಕಾಗಿ ಉದ್ಯೋಗ ಬಿಡುತ್ತಾಳೆ. ಈ ರೀತಿಯ ಸಮಸ್ಯೆಗಳು ಬರಬಹುದು ಎಂಬ ದೃಷ್ಟಿಯಿಂದ ಕೆಲವು ದಂಪತಿ ಒಂದು ಮಗು ಸಾಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಎರಡನೇ ಮಗು ಬೇಕು ಎನ್ನುವವರು ಕೆಲವು ಸಮಸ್ಯೆಗಳನ್ನು ತಡೆಯಲು ವೈದ್ಯರು ತಿಳಿಸುವ ನಿಯಮ ಪಾಲಿಸುವುದು ಒಳಿತು? ಹಾಗಾದರೆ ಮೊದಲ ಹಾಗೂ ಎರಡನೇ ಮಗುವಿನ ನಡುವಿನ ಅಂತರ ಎಷ್ಟಿರಬೇಕು? ಇಲ್ಲಿದೆ ಮಾಹಿತಿ.

ಒಂದು ಮಗು ಆದ ನಂತರ ತಾಯಿಗೆ ಚೇತರಿಕೆಯ ಅವಶ್ಯಕತೆ ಇರುತ್ತದೆ ಹಾಗಾಗಿ ಆ ಸಮಯದಲ್ಲಿ ಆಕೆಗೆ ಸಮಯಾವಕಾಶ ಬೇಕಾಗುತ್ತದೆ. ಇಲ್ಲವಾದಲ್ಲಿ ತಾಯಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ತಾಯಿ ಆರೋಗ್ಯ ದೃಷ್ಟಿಯಿಂದ ಮೊದಲ ಮಗು ಜನಿಸಿದ ನಂತರ ಎರಡನೇ ಮಗುವಿಗೆ 18 ತಿಂಗಳು ಅಂದರೆ ಕನಿಷ್ಠ ಒಂದುವರೆ ವರ್ಷದ ಅಂತರ ಇದ್ದರೆ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆಗ ತಾಯಿ ಮೊದಲ ಗರ್ಭಧಾರಣೆಯಿಂದ ಚೇತರಿಸಿಕೊಳ್ಳಬಹುದು ಜೊತೆಗೆ ಮಗು ಕೂಡ ಸ್ವಲ್ಪ ಬೆಳೆದಿರುವುದರಿಂದ ಇನ್ನೊಂದು ಮಗುವಿನ ಜನನದ ಸಮಯದಲ್ಲಿ ಕಂಡು ಬರುವ ಕೆಲವು ಸಮಸ್ಯೆಗಳನ್ನು ತಡೆಯಬಹುದು.

ಮೊದಲ ಮಗುವಿಗೆ ಹಾಗೂ ಎರಡನೇ ಮಗುವಿಗೆ 18 ತಿಂಗಳು ಅಂತರ ಇದ್ದರೆ ಎರಡು ಮಕ್ಕಳ ಸಂಬಂಧ ಉತ್ತಮವಾಗಿರುತ್ತದೆ. ಎರಡು ಮಕ್ಕಳು ಅನ್ಯೋನ್ಯವಾಗಿ ಬೆಳೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಮೊದಲ ಮಗು ಹುಟ್ಟಿ ಮತ್ತೊಂದು ವರ್ಷದೊಳಗೆ ಎರಡನೇ ಮಗು ಮಾಡಿಕೊಳ್ಳಲು ಹೋದರೆ ಹುಟ್ಟುವ ಕಂದಮ್ಮನಿಗೂ ತೊಂದರೆ ಉಂಟಾಗಬಹುದು. ಮಗು ಅವಧಿಗೂ ಮುನ್ನವೇ ಹುಟ್ಟಬಹುದು. ಇಲ್ಲವೇ, ಎರಡನೇ ಮಗುವಿನ ತೂಕ ಕಡಿಮೆ ಇರಬಹುದು. ಹಾಗಾಗಿ ಈ ಬಗ್ಗೆ ಸ್ವಲ್ಪ ಜಾಗೃತವಾಗಿರಬೇಕು.

ಇದನ್ನೂ ಓದಿ: ಲೈಂಗಿಕ ಶಕ್ತಿ ಕಡಿಮೆಯಾಗಿದ್ದರೆ ಈ ಮಸಾಲೆಯನ್ನು ಪ್ರತಿದಿನ ಸೇವನೆ ಮಾಡಿ

ಎಷ್ಟು ವರ್ಷದ ಅಂತರವಿರಬೇಕು?

ಮೊದಲ ಮಗುವಿಗೂ ಮತ್ತು ಎರಡನೇ ಮಗುವಿಗೂ ಒಂದು ವರೆ ವರ್ಷದಿಂದ ಎರಡು ವರ್ಷಗಳ ಅಂತರವಿದ್ದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮಗುವು ಸ್ವಲ್ಪ ದೊಡ್ಡದಾಗಿರುತ್ತದೆ ಮತ್ತು ತಾಯಿ ಕೂಡ ಚೇತರಿಸಿಕೊಂಡಿರುತ್ತಾಳೆ. ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು.

ಮೊದಲ ಮಗುವಾದ ಮೇಲೆ ಸ್ವಲ್ಪ ಸಮಯದ ತನಕ ಲೈಂಗಿಕ ಕ್ರಿಯೆ ನಡೆಸದೆ ಇರುವುದು ಒಳ್ಳೆಯದು. ಇಲ್ಲವಾದಲ್ಲಿ ಐಯುಡಿ, ಇಂಪ್ಲಾಂಟ್ ಹೆಚ್ಚು ಪರಿಣಾಮಕಾರಿ. ಐಯುಡಿ ಅಥವಾ ಇಂಪ್ಲಾಂಟ್ ಮಾಡಿದರೆ ಆಗ ಇದನ್ನು ತೆಗೆಯುವ ತನಕ ನಿಮಗೆ ಗರ್ಭಧರಿಸುವ ಚಿಂತೆ ಇರುವುದಿಲ್ಲ. ಒಂದು ಮಗುವಾದ ಬಳಿಕ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಪರೀಕ್ಷಿಸಿ ವೈದ್ಯರ ಸಲಹೆ ಪಡೆದು ಮುಂದಿನ ಪ್ಲಾನ್ ಮಾಡಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ