ವಯಸ್ಸು ಹೆಚ್ಚಾದಂತೆ ಅನೇಕ ರೀತಿಯ ಕಾಯಿಲೆಗಳು ಕಂಡು ಬರುವುದು ಸಹಜ. ಆದರೆ ಇತ್ತೀಚಿನ ಹದಗೆಡುತ್ತಿರುವ ಜೀವಶೈಲಿಯಿಂದಾಗಿ ಮಕ್ಕಳಲ್ಲಿಯೂ ಅನೇಕಾನೇಕ ರೋಗಗಳು ಕಂಡು ಬರುತ್ತಿದೆ. ಅದರಲ್ಲಿ ಯಕೃತ್ತು ಅಥವಾ ಪಿತ್ತಜನಕಾಂಗದ ಕಾಯಿಲೆಗಳು ಒಂದು. ನಿಮಗೆ ಗೊತ್ತಾ? ಮಕ್ಕಳಲ್ಲಿಯೂ ಯಕೃತ್ತಿನ ಕಾಯಿಲೆ ಕಂಡು ಬರುತ್ತದೆ. ಇದನ್ನು ಪೀಡಿಯಾಟ್ರಿಕ್ ಲಿವರ್ ಡಿಸೀಸ್ (Pediatric Liver Disease) ಎಂದು ಕರೆಯಲಾಗುತ್ತದೆ. ದಿನದಿಂದ ದಿನಕ್ಕೆ ಚಿಕ್ಕ ಮಕ್ಕಳಲ್ಲಿ ಹೆಪಟೈಟಿಸ್ ರೋಗ ಹೆಚ್ಚಾಗುತ್ತಿದೆ. ಇದು ಗಂಭೀರವಾದ ಯಕೃತ್ತಿನ ಕಾಯಿಲೆಯಾಗಿದ್ದು, ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2023 ರಲ್ಲಿ, ವಿಶ್ವಾದ್ಯಂತ ಮಕ್ಕಳಲ್ಲಿ ಸುಮಾರು 1.5 ಮಿಲಿಯನ್ ಹೆಪಟೈಟಿಸ್ ಪ್ರಕರಣಗಳು ಕಂಡು ಬಂದಿವೆ. ಹಾಗಾದರೆ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆ ಕಂಡು ಬರಲು ಕಾರಣವೇನು? ಹೇಗೆ ಕಂಡು ಬರುತ್ತದೆ? ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಮ್ಸ್ ನ ಮಕ್ಕಳ ವಿಭಾಗದ ಡಾ. ರಾಕೇಶ್ ಕುಮಾರ್ ಅವರು ಹೇಳುವ ಪ್ರಕಾರ, “ಕಲುಷಿತ ನೀರು ಮತ್ತು ಕಲಬೆರಕೆಯ ಆಹಾರದಿಂದಾಗಿ ಮಕ್ಕಳು ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಾರೆ” ಎಂದು ಹೇಳುತ್ತಾರೆ. “ಅದರಲ್ಲಿಯೂ ಹೆಪಟೈಟಿಸ್ ನಲ್ಲಿ ಐದು ವಿಧಗಳಿವೆ (ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ). ಹೆಪಟೈಟಿಸ್ ಎ ಮಕ್ಕಳಿಗೆ ಹೆಚ್ಚು ಅಪಾಯ ತರಬಹುದು. ಈ ರೋಗವು ಯಕೃತ್ತಿನಲ್ಲಿ ಊತವನ್ನು ಉಂಟುಮಾಡುತ್ತದೆ. ಇದರಿಂದಾಗಿ ಯಕೃತ್ತಿನ ಜೀವಕೋಶಗಳು ಹಾನಿಗೊಳಗಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ರೋಗನಿರೋಧಕ ಸಂಬಂಧಿತ ಸಮಸ್ಯೆಗಳು ಮತ್ತು ತಪ್ಪು ರಕ್ತ ವರ್ಗಾವಣೆ ಕೂಡ ಹೆಪಟೈಟಿಸ್ಗೆ ರೋಗಕ್ಕೆ ಕಾರಣವಾಗುತ್ತದೆ” ಎಂದು ಹೇಳುತ್ತಾರೆ.
ಜನನದ ನಂತರ ಹೆಪಟೈಟಿಸ್ ಲಸಿಕೆ ಪಡೆಯದ ಮಕ್ಕಳಲ್ಲಿ ಈ ರೋಗ ಬರುವ ಅಪಾಯವಿದೆ ಎಂದು ಡಾ. ರಾಕೇಶ್ ಹೇಳುತ್ತಾರೆ. ಹೆಪಟೈಟಿಸ್ ಅನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಅದು ಯಕೃತ್ತಿನ ಸೋಂಕಿಗೆ ಕಾರಣವಾಗುತ್ತದೆ. ನಂತರ ಇದು ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ಹಾಗಾಗಿ ಇದರ ರೋಗಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಮುಖ್ಯ.
ಕಣ್ಣುಗಳು ಹಳದಿಯಾಗುವುದು
ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು
ದಣಿವಾಗುವುದು
ವಾಂತಿ
ಅತಿಸಾರ
ಹೊಟ್ಟೆ ನೋವು
ಹಸಿವಾಗದಿರುವುದು
ಇದನ್ನೂ ಓದಿ: ಸಂಧಿವಾತವಿದ್ದರೆ ಈ ತಪ್ಪುಗಳನ್ನು ಮಾಡಬೇಡಿ, ಸಮಸ್ಯೆ ಹೆಚ್ಚಾಗುತ್ತದೆ
ರಕ್ತ ಪರೀಕ್ಷೆ
ಪಿತ್ತಜನಕಾಂಗದ ಕಿಣ್ವ ಪರೀಕ್ಷೆ
ಎಲ್ಎಫ್ಟಿ (LFT)
ಸೆಲ್ಯುಲಾರ್ ರಕ್ತ ಪರೀಕ್ಷೆ
CT ಸ್ಕ್ಯಾನ್
ಅಲ್ಟ್ರಾಸೌಂಡ್
ಪಿತ್ತಜನಕಾಂಗದ ಬಯಾಪ್ಸಿ
ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ
ಮಕ್ಕಳಿಗೆ ಹೊರಗಿನ ಆಹಾರವನ್ನು ನೀಡಬೇಡಿ
ಕುಡಿಯಲು ಶುದ್ಧ ನೀರು ಕೊಡಿ.
ಹೆಪಟೈಟಿಸ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ