Arthritis Pain: ಸಂಧಿವಾತವಿದ್ದರೆ ಈ ತಪ್ಪುಗಳನ್ನು ಮಾಡಬೇಡಿ, ಸಮಸ್ಯೆ ಹೆಚ್ಚಾಗುತ್ತದೆ
ಬರುಬರುತ್ತಾ ಸಂಧಿವಾತದ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವರಿಗೆ ಮೊಣಕಾಲು ಸಮಸ್ಯೆ, ಕೆಲವರಿಗೆ ಬೆನ್ನು ನೋವು, ಇನ್ನು ಹಲವರಲ್ಲಿ ಸೊಂಟ ನೋವು. ಹೀಗೆ ಯಾರಿಗೆ ಬರುತ್ತದೆ ಎಂಬುದು ಕೂಡ ತಿಳಿಯುವುದಿಲ್ಲ. ಅದರಲ್ಲಿಯೂ ಮಳೆ ಮತ್ತು ಚಳಿಗಾಲದ ದಿನಗಳಲ್ಲಿ ತೇವಾಂಶದಿಂದಾಗಿ ವಾತ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಕೆಲವೊಮ್ಮೆ ಇದು ಕಾಲು ಮತ್ತು ತೋಳುಗಳನ್ನು ಬಗ್ಗಿಸಲು ಸಹ ಕಷ್ಟಕರವಾದ ಹಂತಕ್ಕೆ ತಲುಪುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಈ ನೋವಿನಿಂದ ಪರಿಹಾರ ಪಡೆದುಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಸಂಧಿವಾತದ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವರಿಗೆ ಮೊಣಕಾಲು ಸಮಸ್ಯೆ, ಕೆಲವರಿಗೆ ಬೆನ್ನು ನೋವು, ಇನ್ನು ಹಲವರಲ್ಲಿ ಸೊಂಟ ನೋವು. ಹೀಗೆ ಯಾರಿಗೆ ಬರುತ್ತದೆ ಎಂಬುದು ಕೂಡ ತಿಳಿಯುವುದಿಲ್ಲ. ಅದರಲ್ಲಿಯೂ ಮಳೆ ಮತ್ತು ಚಳಿಗಾಲದ ದಿನಗಳಲ್ಲಿ ತೇವಾಂಶದಿಂದಾಗಿ ವಾತ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಕೆಲವೊಮ್ಮೆ ಇದು ಕಾಲು ಮತ್ತು ತೋಳುಗಳನ್ನು ಬಗ್ಗಿಸಲು ಸಹ ಕಷ್ಟಕರವಾದ ಹಂತಕ್ಕೆ ತಲುಪುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಈ ನೋವಿನಿಂದ ಪರಿಹಾರ ಪಡೆದುಕೊಳ್ಳಬಹುದು.
ನಿಯಮಿತ ವಾಕಿಂಗ್ ಅತ್ಯಗತ್ಯ:
ಅನೇಕ ಜನರು ದೇಹದಲ್ಲಿ ಸಂಧಿವಾತದ ಲಕ್ಷಣಗಳು ಆರಂಭವಾದರೆ ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತಾರೆ. ಸರಳವಾಗಿ ಮಾಡಬಹುದಾದ ಕೆಲಸಗಳನ್ನು ಸಹ ಮಾಡುವುದಿಲ್ಲ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಸಂಧಿವಾತವನ್ನು ನಿವಾರಿಸಲು ನಿಯಮಿತ ವಾಕಿಂಗ್ ಅತ್ಯಗತ್ಯ. ಜೊತೆಗೆ ಯೋಗ ಮಾಡಿ. ಆಗ ಮಾತ್ರ ನೀವು ಸಮಸ್ಯೆಯಿಂದ ಹೊರಬರಬಹುದು. ದೊಡ್ಡ ದೊಡ್ಡ ಗಾಯಗಳು ಹೆಚ್ಚಾಗಿ ಕೀಲು ನೋವಿಗೆ ಕಾರಣವಾಗುತ್ತವೆ. ಹಾಗಾಗಿ ಆದಷ್ಟು ಆರೋಗ್ಯದ ಕಡೆ ಗಮನ ಕೊಡಿ. ಒಂದು ವೇಳೆ ನೀವು ಸಂಧಿವಾತದಿಂದ ಬಳಲುತ್ತಿದ್ದರೆ ಆದಷ್ಟು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದನ್ನು ಮರೆಯಬೇಡಿ.
ದ್ರವ ರೂಪದ ಆಹಾರ ಸೇವನೆ ಮಾಡಿ:
ಹೆಚ್ಚು ನೀರು ಕುಡಿಯಿರಿ. ಜೊತೆಗೆ ದ್ರವ ರೂಪದ ಆಹಾರವನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳಿ. ಏಕೆಂದರೆ ದೇಹದೊಳಗಿನ ತೇವಾಂಶವು ಸೈನೋವಿಯಲ್ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಈ ದ್ರವ ಒಣಗಿದರೆ, ನೋವು ಹೆಚ್ಚಾಗುತ್ತದೆ. ಹಾಗಾಗಿ ನಿಯಮಿತವಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಒಮೆಗಾ 3 ಕೊಬ್ಬಿನಾಮ್ಲಗಳು, ಬೀಜಗಳು, ಮೀನು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ. ಜೊತೆಗೆ ಉತ್ತಮ ಆರೋಗ್ಯಕ್ಕೆ ಪೋಷಕಾಂಶ ಭರಿತ ಆಹಾರಗಳು ಅತ್ಯಗತ್ಯ.
ಇದನ್ನೂ ಓದಿ: ಮೊಬೈಲ್ ಫೋನ್ ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದೇ? ಅಧ್ಯಯನ ಹೇಳುವುದೇನು?
ಅಧಿಕ ತೂಕ ದೇಹಕ್ಕೆ ಒಳ್ಳೆಯದಲ್ಲ. ದೇಹದ ಬೊಜ್ಜು ಮೊಣಕಾಲುಗಳು ಮತ್ತು ಇತರ ಕೀಲುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದು ಮೂಳೆ ಸವೆತದ ಜೊತೆಗೆ ನೋವಿಗೆ ಕಾರಣವಾಗುತ್ತದೆ. ಹಾಗಾಗಿ ಇದು ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಸರಿಯಾದ ಸಮಯದಲ್ಲಿ ಉತ್ತಮ ಔಷಧಿಗಳ ಸೇವನೆ ಮಾಡಿದರೆ ಈ ಸಮಸ್ಯೆಯನ್ನು ಗುಣಪಡಿಸಬಹುದು. ವ್ಯಾಯಾಮದ ಜೊತೆಗೆ, ಔಷಧಿಗಳನ್ನು ಸಹ ಸರಿಯಾದ ಸಮಯದಲ್ಲಿ ನಿಯಮಿತವಾಗಿ ತೆಗೆದುಕೊಳ್ಳಬೇಕು. ಇದರಿಂದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ