
ಇತ್ತೀಚಿನ ದಿನಗಳಲ್ಲಿ ಟಿವಿ. ಮೊಬೈಲ್, ಲ್ಯಾಪ್ ಟಾಪ್ ಹೀಗೆ ಸ್ಕ್ರೀನ್ ನೋಡುವ ಸಮಯ ಹೆಚ್ಚಾಗುತ್ತಿದೆ. ಅದರಲ್ಲಿಯೂ ಯುವ ಜನತೆ ನಿರಂತರವಾಗಿ ಒಂದಿಲ್ಲೊಂದು ಅಪ್ಲಿಕೇಶನ್‌ಗಳನ್ನು ನೋಡುತ್ತಲೇ ಇರುತ್ತಾರೆ. ವೀಡಿಯೊ, ಗೇಮ್, ಫಿಲಂ ಹೀಗೆ ಒಂದರ ನಂತರ ಒಂದನ್ನು ಬದಲಾಯಿಸುತ್ತಲೇ ಇರುತ್ತಾರೆ. ಈ ರೀತಿಯ ಡಿಜಿಟಲ್ ಓವರ್‌ಲೋಡ್ ನಮ್ಮ ಗಮನ, ಸ್ಮರಣೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ನೋಯ್ಡಾದ ಹೆಡ್‌ಸ್ಪೇಸ್ ಹೀಲಿಂಗ್‌ನ ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಸಂಸ್ಥಾಪಕಿ ಡಾ. ಜಯಾ ಸುಕುಲ್ (Dr. Jaya Sukul), ಮುಂದೆ ಹೆಚ್ಚಿನವರಲ್ಲಿ ಕಂಡು ಬರುವ “ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್” ಮತ್ತು ಅದು ಯುವ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಡಾ. ಸುಕುಲ್ ಹೇಳುವ ಪ್ರಕಾರ, ಸಾಮಾನ್ಯವಾಗಿ ಹೇಗೆ ಪಾಪ್‌ಕಾರ್ನ್ ಪುಟಿದು ಪುಟಿದು ಮೇಲಕ್ಕೆ ಬರುತ್ತದೆಯೋ, ಆ ರೀತಿ ನಮ್ಮ ಮೆದುಳು ಪುಟಿಯುವುದಿಲ್ಲ. ಅಂದರೆ ನಮ್ಮ ಮೆದುಳು ಆ ರೀತಿ ಕೆಲಸ ಮಾಡುವುದಿಲ್ಲ. ಇದನ್ನೇ ನಾವು ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಎನ್ನುತ್ತೇವೆ. ಇಲ್ಲಿ ನಮ್ಮ ಬ್ರೈನ್ ಅನ್ನು ಪಾಪ್‌ಕಾರ್ನ್ ಹೋಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದು ನಿರಂತವಾಗಿ ಡಿಜಿಟಲ್ ಇನ್‌ಪುಟ್‌ಗಳಿಂದ ಪ್ರಚೋದಿಸಲ್ಪಡುತ್ತಿರುವ ಸಂವೇದನೆಯಾಗಿದೆ. ನೀವು ಒಂದು ವಿಷಯದಿಂದ ಇನ್ನೊಂದಕ್ಕೆ ವೇಗವಾಗಿ ಗಮನಹರಿಸಲು ಹೆಣಗಾಡುವುದನ್ನು ಮತ್ತು ಸಹಜವಾಗಿ ವಿಶ್ರಾಂತಿ ಪಡೆಯಲು ಆಗದಿರುವುದು ಈ ಸಿಂಡ್ರೋಮ್ ನ ಲಕ್ಷಣಗಳಾಗಿರುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಜೀವನವು ಆನ್‌ಲೈನ್ ಫೀಡ್‌ಗಿಂತ ನಿಧಾನವಾಗುವುದೇ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಆಗಿದೆ.
ಆಧುನಿಕ ಜೀವನಶೈಲಿ, ಸಾಮಾಜಿಕ ಮಾಧ್ಯಮದ ನಿರಂತರ ಬಳಕೆ ಇವೆಲ್ಲವೂ ಮೆದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮೆದುಳು ಹೊಸತನವನ್ನು ಬಯಸುತ್ತದೆ. ಅದೇ ನೀವು ಬಳಸುವಂತಹ ಕೆಲವು ಡಿಜಿಟಲ್ ಸಾಧನಗಳು ಅವುಗಳನ್ನು ಬಳಸಿಕೊಳ್ಳುತ್ತವೆ. ಆದರೆ ಕಾಲಾನಂತರದಲ್ಲಿ, ಇದು ನಿಮ್ಮ ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು, ಒತ್ತಡವನ್ನು ಹೆಚ್ಚಿಸಬಹುದು, ಒಂದು ವಿಷಯದ ಕುರಿತು ಗಮನ ಹರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರಬಹುದು ಎಂದು ಡಾ. ಸುಕುಲ್ ಹೇಳುತ್ತಾರೆ.
ಸಾಮಾನ್ಯವಾಗಿ, ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಾದರೂ, ಇದು 30- 45 ವರ್ಷ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತದೆ. ಇದು ಇಂಟರ್ನೆಟ್ ವ್ಯಸನದಂತಲ್ಲ ಎಂದು ಡಾ. ಸುಕುಲ್ ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಇಂಟರ್ನೆಟ್ ವ್ಯಸನವು ಕೆಲಸ, ಸಂಬಂಧಗಳು ಮತ್ತು ದೈನಂದಿನ ಜೀವನವನ್ನು ಅಡ್ಡಿಪಡಿಸುವ ಕ್ಲಿನಿಕಲ್ ಸಿಂಡ್ರೋಮ್ ಆಗಿದೆ. ಆದರೆ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ನಿಮ್ಮ ಜೀವನದ ಗುಣಮಟ್ಟ, ಗಮನ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ, ಆದರೆ ಅದು ಸಂಬಂಧಗಳನ್ನು ಅಥವಾ ವೃತ್ತಿಜೀವನದ ಕಾರ್ಯಕ್ಷಮತೆಯನ್ನು ಹಾಳುಮಾಡುವುದಿಲ್ಲ.
ಇದನ್ನೂ ಓದಿ: ಚಳಿಗಾಲದಲ್ಲಿಯೇ ಪಾರ್ಶ್ವವಾಯು ಪ್ರಕರಣ ಹೆಚ್ಚಾಗುವುದಕ್ಕೆ ಈ ಅಂಶಗಳೇ ಕಾರಣ! ತಡೆಗಟ್ಟಲು ವೈದ್ಯರು ನೀಡಿದ ಈ ಸಲಹೆಗಳನ್ನು ಪಾಲಿಸಿ
ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ಡಾ. ಸುಕುಲ್ ಹೇಳಿರುವ ಈ ಸಲಹೆಗಳನ್ನು ಪಾಲಿಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ