ಎದೆಹಾಲು ಕುಡಿಸುವುದರಿಂದ ತಾಯಂದಿರ ಆರೋಗ್ಯಕ್ಕೂ ಇದೆ ಉಪಯೋಗ!

|

Updated on: Sep 21, 2023 | 4:10 PM

Breastfeeding Benefits: ಸ್ತನ್ಯಪಾನವು ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿದೆ. ಎದೆ ಹಾಲು ಕುಡಿಸುವುದರಿಂದ ಮಹಿಳೆಯರ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬ ಮಾಹಿತಿ ಇಲ್ಲಿದೆ.

ಎದೆಹಾಲು ಕುಡಿಸುವುದರಿಂದ ತಾಯಂದಿರ ಆರೋಗ್ಯಕ್ಕೂ ಇದೆ ಉಪಯೋಗ!
ಎದೆಹಾಲು ಕುಡಿಸುವುದು
Image Credit source: iStock
Follow us on

ಎಷ್ಟೋ ಮಹಿಳೆಯರು ತಮ್ಮ ಮಗುವಿಗೆ ಎದೆ ಹಾಲು ಕುಡಿಸುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ, ದೇಹದ ಶೇಪ್ ಹಾಳಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ, ಎದೆಹಾಲು ಕುಡಿಸುವುದರಿಂದ ಮಗುವಿಗೆ ಮಾತ್ರವಲ್ಲ ತಾಯಂದಿರಿಗೂ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಹಲವರಿಗೆ ಗೊತ್ತಿಲ್ಲ. ಹಾಗಾದರೆ, ಎದೆ ಹಾಲು ಕುಡಿಸುವುದರಿಂದ ಮಹಿಳೆಯರ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬ ಮಾಹಿತಿ ಇಲ್ಲಿದೆ.

ಎದೆ ಹಾಲು ಶಿಶುಗಳಿಗೆ ಸೂಕ್ತವಾದ ಪೋಷಣೆಯನ್ನು ಒದಗಿಸುತ್ತದೆ. ಇದು ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ. ಈ ಹಾಲು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಸ್ತನ್ಯಪಾನವು ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿದೆ. ಎದೆ ಹಾಲು ಕುಡಿಸುವುದರಿಂದ ಮಹಿಳೆಯರ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಇದನ್ನೂ ಓದಿ: ಜ್ವರದಿಂದ ಕ್ಯಾನ್ಸರ್​ವರೆಗೆ; ಪಿಯರ್ ಹಣ್ಣಿನ ಅದ್ಭುತ ಉಪಯೋಗಗಳಿವು

ಮಹಿಳೆಯರು ಮಗುವಿಗೆ ಎದೆಹಾಲು ಉತ್ಪಾದಿಸಲು ದಿನಕ್ಕೆ 500 ಕ್ಯಾಲೋರಿಗಳವರೆಗೆ ಶಕ್ತಿಯನ್ನು ವ್ಯಯಿಸುತ್ತಾರೆ. ಇದು ಹೆರಿಗೆಯ ನಂತರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೆರಿಗೆಯ ನಂತರ ಆರೋಗ್ಯಕರ ದೇಹವನ್ನು ನೀಡುತ್ತದೆ. ಇದಲ್ಲದೆ, ಸ್ತನ್ಯಪಾನದ ಸಮಯದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗಿ, ಇದು ಗರ್ಭಾಶಯ ಕುಗ್ಗಲು ಸಹಾಯ ಮಾಡುತ್ತದೆ. ಇದರಿಂದ ಗರ್ಭ ಧರಿಸುವುದಕ್ಕಿಂತಲೂ ಮೊದಲು ಇದ್ದ ಗಾತ್ರಕ್ಕೆ ಗರ್ಭಾಶಯ ಮರಳಲು ಸಾಧ್ಯವಾಗುತ್ತದೆ.

ಎದೆ ಹಾಲು ಕುಡಿಸುವುದರಿಂದ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ. ಹಾಗೇ, ಇದು ಕ್ಯಾನ್ಸರ್‌ಗೆ ಕಾರಣವಾಗುವ ಅಸಹಜ ಜೀವಕೋಶದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ: Almonds for Weight Loss: ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಬಾದಾಮಿ ತಿನ್ನಿ

ತಾಯ್ತನವೆಂಬುದು ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸೇರಿದಂತೆ ದೈಹಿಕ ಬದಲಾವಣೆಗಳೊಂದಿಗೆ ಇರುತ್ತದೆ. ತಾಯಿ ಹಾಲುಣಿಸುವಾಗ ಆಕೆಯ ದೇಹವು ಹಾಲು ಉತ್ಪಾದಿಸಲು ಹೆಚ್ಚುವರಿ ಶಕ್ತಿ ಮತ್ತು ಕ್ಯಾಲೊರಿಗಳನ್ನು ವ್ಯಯಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಎದೆ ಹಾಲು ಉತ್ಪಾದಿಸಲು ದೇಹವು ಸಂಗ್ರಹಿಸಿದ ಕೊಬ್ಬನ್ನು ಬಳಸುತ್ತದೆ.

ಹಾಲುಣಿಸುವ ತಾಯಂದಿರಿಗೆ ಖಿನ್ನತೆಯ ಅಪಾಯ ಕಡಿಮೆ. 2012ರ ಅಧ್ಯಯನದ ಪ್ರಕಾರ, ಸ್ತನ್ಯಪಾನ ಮಾಡುವ ಮಹಿಳೆಯರು ಪ್ರಸವಾನಂತರದ ಖಿನ್ನತೆಯನ್ನು ಅನುಭವಿಸುವ ಸಾಧ್ಯತೆ ಕಡಿಮೆ. ಸ್ತನ್ಯಪಾನವು ನಿಮಗೆ ಕ್ಯಾನ್ಸರ್ ಮತ್ತು ಹಲವಾರು ರೋಗಗಳ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ಒದಗಿಸುತ್ತದೆ. ಹಾಗೇ, ಸ್ತನ್ಯಪಾನ ಮಾಡುವ ಮಹಿಳೆಯರಿಗೆ ತೀವ್ರ ರಕ್ತದೊತ್ತಡ, ಸಂಧಿವಾತ, ಹೃದಯ ರೋಗ, ಟೈಪ್ 2 ಮಧುಮೇಹದ ತೊಂದರೆಗಳು ಕಡಿಮೆ ಎನ್ನಲಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Thu, 21 September 23