Pregnancy Skin Care: ಚರ್ಮದ ಆರೈಕೆಯಲ್ಲಿ ಗರ್ಭಿಣಿಯರು ತಿಳಿದುಕೊಳ್ಳಬೇಕಾದ ಅಂಶಗಳು

|

Updated on: Jul 22, 2023 | 2:54 PM

ಗರ್ಭಾವಸ್ಥೆಯಲ್ಲಿ ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಯಾವ ರೀತಿ ಎಚ್ಚರಿಕೆಯಿಂದಿರಬೇಕು ಎಂದು ದೆಹಲಿಯ ಚರ್ಮರೋಗ ತಜ್ಞರಾದ ಡಾ ಜ್ಯೋತಿ ಗುಪ್ತಾ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

Pregnancy Skin Care: ಚರ್ಮದ ಆರೈಕೆಯಲ್ಲಿ ಗರ್ಭಿಣಿಯರು ತಿಳಿದುಕೊಳ್ಳಬೇಕಾದ ಅಂಶಗಳು
Pregnancy Skin Care Tips
Follow us on

ಗರ್ಭಾವಸ್ಥೆಯಲ್ಲಿ ಹಾರ್ಮೋನ್​​ ಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ. ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾಳಜಿ ವಹಿಸುವುದು ತುಂಬಾ ಅಗತ್ಯ. ಅದರಲ್ಲೂ ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಯಾವ ರೀತಿ ಎಚ್ಚರಿಕೆಯಿಂದಿರಬೇಕು. ಚರ್ಮದ ಆರೈಕೆಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಲೆ ಬಾಳುವ ಉತ್ಪನ್ನಗಳು ಲಭ್ಯವಿದೆ. ಆದರೆ ಗರ್ಭಾವಸ್ಥೆಯಲ್ಲಿ ಯಾವುದೇ ಕ್ರೀಮ್‌ಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯ  ಎಂದು ದೆಹಲಿಯ ಚರ್ಮರೋಗ ತಜ್ಞರಾದ ಡಾ ಜ್ಯೋತಿ ಗುಪ್ತಾ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಪೌಷ್ಟಿಕಾಂಶದ ಮೌಲ್ಯಗಳು:

ಥೈರಾಯ್ಡ್, ಹಿಮೋಗ್ಲೋಬಿನ್, ಬಿ 12 ಮತ್ತು ವಿಟಮಿನ್ ಡಿ 3 ಹೆಚ್ಚಿನ ಕಾಳಜಿಯನ್ನು ನೀಡಬೇಕು.ಇಲ್ಲದಿದ್ದರೆ, ಇದು ದೀರ್ಘಕಾಲದವರೆಗೆ ಗರ್ಭಾವಸ್ಥೆಯ ನಂತರ ಪಿಗ್ಮೆಂಟೇಶನ್ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ತ್ವಚೆಯ ಉತ್ಪನ್ನಗಳ ಬಳಕೆಯಲ್ಲಿ ಎಚ್ಚರ:

ಚರ್ಮದ ಆರೈಕೆಗೆ ಸಂಬಂಧಿಸಿದಂತೆ ಇತ್ತೀಚೆನ ದಿನಗಳಲ್ಲಿ ಸಾಕಷ್ಟು ಬೆಲೆ ಬಾಳುವ ಉತ್ಪನ್ನಗಳು ಲಭ್ಯವಿದೆ. ಆದರೆ ಗರ್ಭಾವಸ್ಥೆಯಲ್ಲಿ ಯಾವುದೇ ಕ್ರೀಮ್‌ಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಬಹಳಷ್ಟು ಟೋನರ್‌ಗಳು ಮತ್ತು ಫೇಸ್ ವಾಶ್‌ಗಳಲ್ಲಿ ಇರುವ ರಾಸಾಯನಿಕಗಳು ಅಂಗವೈಕಲ್ಯ ಮತ್ತು ಅನೇಕ ತೊಡಕುಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: ಆರೋಗ್ಯಕರ ಜೀವನಶೈಲಿಯೊಂದಿಗೆ ಮೆದುಳಿನ ಆರೋಗ್ಯ ಕಾಪಾಡಿ

ಸಾಕಷ್ಟು ನೀರು, ಹಣ್ಣಿನ ರಸ ಕುಡಿಯಿರಿ:

ಸರಿಯಾದ ದ್ರವ ಸೇವನೆಯಿಂದ ಗರ್ಭಿಣಿಯರಲ್ಲಿ ತೇವಾಂಶದಿಂದಿರಲು ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಯಾವುದೇ ದದ್ದುಗಳು ಮತ್ತು ತುರಿಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ತೂಕದ ಮೇಲೆ ನಿಗಾ ಇರಿಸಿ:

ಗರ್ಭಾವಸ್ಥೆಯಲ್ಲಿ ಆರೋಗ್ಯಕರ ತೂಕದ ಬಗ್ಗೆ ಹೆಚ್ಚಿನ ಗಮನಹರಿಸುವುದು ತುಂಬಾ ಮುಖ್ಯ. ತೂಕ ಹೆಚ್ಚಾದಂತೆ ಚರ್ಮದ ಮೇಲೆ ಗುರುತುಗಳು ಹುಟ್ಟಿಕೊಳ್ಳುತ್ತದೆ. ಜೊತೆಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಹಾರ್ಮೋನ್ ಅಸಮತೋಲನಕ್ಕೂ ಕಾರಣವಾಗುತ್ತದೆ.

ಕೂದಲಿನ ಚಿಕಿತ್ಸೆ:

ಗರ್ಭಾವಸ್ಥೆಯಲ್ಲಿ ರಾಸಾಯನಿಕ ಕೂದಲಿನ ಬಣ್ಣಗಳು, ಕೆರಾಟಿನ್, ಮೃದುಗೊಳಿಸುವಿಕೆ ಮತ್ತು ಬ್ಲೀಚ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: