ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನನಾಳವನ್ನು ಹಾನಿಗೊಳಿಸಬಹುದೇ? ತಜ್ಞರು ಹೇಳುವುದೇನು?
ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಹೊಟ್ಟೆಯಿಂದ ಬಿಡುಗಡೆಯಾಗುವ ಆಮ್ಲವು ಅನ್ನನಾಳದ ಸವೆತ ಮತ್ತು ಉರಿಯೂತ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಡಾ. ಅಮಿತ್ ಮೇಡಿಯೊ ಎಚ್ಚರಿಸುತ್ತಾರೆ.
ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್(Gastroesophageal Reflux) ಸಮಸ್ಯೆಯಿಂದಾಗಿ ಹೊಟ್ಟೆಯಿಂದ ಆಮ್ಲವು ಅನ್ನನಾಳವನ್ನು ಪ್ರವೇಶಿಸಬಹುದು. ಇದು ಅನ್ನನಾಳದ ಒಳಪದರಕ್ಕೆ ಹಾನಿಯನ್ನುಂಟು ಮಾಡಿ ಸುಡುವ ಸಂವೇದನೆ(Burning Sensation), ವಾಂತಿ ಮುಂತಾದ ಲಕ್ಷಣಗಳಿಗೆ ಕಾರಣವಾಗುತ್ತದೆ. ಅಹಿತಕರ ಲಕ್ಷಣಗಳು ಕೆಲವು ನಿಮಿಷಗಳಿಂದ ಹಲವಾರು ಗಂಟೆಗಳವರೆಗೆ ಇರುತ್ತದೆ. ಜೊತೆಗೆ ದೀರ್ಘಕಾಲದ ಕೆಮ್ಮನ್ನು ಒಳಗೊಂಡಿರಬಹುದು.
ಮುಂಬೈನ ಆರೋಗ್ಯ ತಜ್ಞರಾದ ಡಾ. ಅಮಿತ್ ಮೇಡಿಯೊ ಅವರ ಪ್ರಕಾರ ಅನ್ನನಾಳವು ಸೇವಿಸುವ ಆಹಾರವನ್ನು ಬಾಯಿಯಿಂದ ಹೊಟ್ಟೆಗೆ ತಲುಪಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಹೊಟ್ಟೆಯಿಂದ ಬಿಡುಗಡೆಯಿಂದ ಆಮ್ಲವು ಅನ್ನನಾಳದ ಸವೆತ ಮತ್ತು ಉರಿಯೂತ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆಯು ಧೂಮಪಾನ, ಮದ್ಯಪಾನ, ಸ್ಥೂಲಕಾಯತೆ ಮತ್ತು ಆಹಾರದ ಅಂಶಗಳನ್ನು ಒಳಗೊಂಡಿದೆ.
ಈ ಸಮಸ್ಯೆಗಳಿಗೆ ಪ್ರಾರಂಭದಲ್ಲಿ ಆರೋಗ್ಯ ತಜ್ಞರು ಜೀವನಶೈಲಿ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತಾರೆ. ನೀವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೊಂದಿದ್ದರೆ ರಾತ್ರಿ ಮಲಗುವಾಗ ತಲೆದಿಂಬು 15-20 ಸೆಂ.ಮೀ ಎತ್ತರದಲ್ಲಿ ಮತ್ತು ಎಡಭಾಗಕ್ಕೆ ತಿರುಗಿ ಮಲಗಿ ಎಂದು ಸಲಹೆ ನೀಡಲಾಗುತ್ತದೆ. ಜೊತೆಗೆ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದಾದ ಕಾರ್ಬೊನೇಟೆಡ್ ಪಾನೀಯಗಳು, ಸಂಸ್ಕರಿಸಿದ ಆಹಾರ, ಸಿಟ್ರಸ್ ಹಣ್ಣುಗಳು, ಕೊಬ್ಬಿನ ಮತ್ತು ಮಸಾಲೆಯುಕ್ತ ಊಟಗಳನ್ನು ತಪ್ಪಿಸುವುದು ಉತ್ತಮ. ರಾತ್ರಿ ಊಟದ ನಂತರ ಮಲಗುವ ಮುನ್ನ ಕನಿಷ್ಠ 2 ಗಂಟೆಗಳ ಕಾಲ ಕಾಯುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:03 pm, Sat, 22 July 23