ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರಬಹುದು, ಅಮ್ಮ ಹಾಸಿಗೆ ಬಳಿಯೇ ಚಹಾ ಕಪ್ ಅನ್ನು ತಂದಿಟ್ಟ ಬಳಿಕವೂ ಸ್ವಲ್ಪ ನಿದ್ದೆ ಮಾಡಿ ಬಳಿಕ ಚಹಾ ತಣ್ಣಗಾಗಿದೆ ಎಂದು ಕೂಗುವುದುಂಟು, ಬಳಿಕ ಮತ್ತೆ ಅದನ್ನು ಬಿಸಿ ಮಾಡಿ ಕುಡಿಯುತ್ತೀರಿ. ಇಲ್ಲವಾದರೆ ನೀವು ಚಹಾ ಮಾಡಬೇಕಿದ್ದರೆ ಸ್ವಲ್ಪ ಚಹಾ ಮಿಕ್ಕಿದ್ದರೆ ಸ್ವಲ್ಪ ಸಮಯದ ಬಳಿಕ ಆ ಚಹಾವನ್ನು ಬಿಸಿಮಾಡುತ್ತೀರಿ, ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ನೀವು ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾದ ದಾಳಿ ಇರುತ್ತದೆ. ನಿಜವಾಗಿ ಟೀ ಮಾಡಿದಾಗ ಚೆನ್ನಾಗಿರುತ್ತೆ ಆದರೆ ಅದು ತಣ್ಣಗಾಗುತ್ತಿದ್ದಂತೆ ಬ್ಯಾಕ್ಟೀರಿಯಾಗಳು ಒಳಸೇರುತ್ತಲೇ ಇರುತ್ತವೆ ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಬಿಸಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಕ್ರಿಯಾಶೀಲವಾಗಿ ಟೀಯಲ್ಲಿ ಕರಗುತ್ತವೆ ಮತ್ತು ಟೀ ಮೂಲಕ ನಮ್ಮ ಹೊಟ್ಟೆಯ ಮೇಲೆ ದಾಳಿ ಮಾಡಬಹುದು.
ಮತ್ತಷ್ಟು ಓದಿ: Immunity Boosting Foods: ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 5 ಆಹಾರ ಪದಾರ್ಥಗಳಿವು
ತಣ್ಣನೆಯ ಚಹಾವನ್ನು ಮತ್ತೆ ಬಿಸಿಮಾಡಿದಾಗ, ಚಹಾದ ಎಲ್ಲಾ ಉತ್ತಮ ಕಿಣ್ವಗಳು ನಾಶವಾಗುತ್ತವೆ ಮತ್ತು ಚಹಾದ ಕೆಟ್ಟ ಕಿಣ್ವಗಳು ಹೊಟ್ಟೆಯ ಮೇಲೆ ದಾಳಿ ಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಆ್ಯಸಿಡಿಟಿ ಸಮಸ್ಯೆ, ಹೊಟ್ಟೆಯಲ್ಲಿ ಉರಿ, ಅಜೀರ್ಣ, ವಾಂತಿ ಅಥವಾ ಭೇದಿ ಉಂಟಾಗುತ್ತದೆ.
ಟ್ಯಾನಿನ್ ಚಹಾದಲ್ಲಿನ ಸಂಯುಕ್ತವಾಗಿದ್ದು, ಪುನಃ ಬಿಸಿಮಾಡಿದಾಗ, ಈ ಟ್ಯಾನಿನ್ ಚಹಾದಿಂದ ನಾಶವಾಗುತ್ತದೆ ಮತ್ತು ಚಹಾದ ರುಚಿ ಬದಲಾಗುತ್ತದೆ, ಅಂದರೆ ಅದು ಕಹಿಯಾಗುತ್ತದೆ. ಅಂತಹ ಚಹಾವು ಹೊಟ್ಟೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ದೇಹದ ಉಳಿದ ಭಾಗಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ.
ಚಹಾವನ್ನು ಮಾಡಿ 15 ನಿಮಿಷಗಳಾದರೆ ಅದನ್ನು ಬಿಸಿ ಮಾಡಬೇಡಿ, ಹೊಟ್ಟೆಗೆ ಹಾನಿ ಮಾಡುವ ಚಹಾದಲ್ಲಿ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುತ್ತವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ