ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ (Sleep) ಬಹಳ ಮುಖ್ಯ. ಮಲಗುವಾಗ ನಾವು ಬಳಸುವ ಬೆಡ್ಶೀಟ್ ಮತ್ತು ದಿಂಬಿನ ಕವರ್ (Pillow Cover) ಎಷ್ಟು ಸ್ವಚ್ಛವಾಗಿರುತ್ತದೋ ನಮ್ಮ ಆರೋಗ್ಯ ಕೂಡ ಅಷ್ಟು ಚೆನ್ನಾಗಿರುತ್ತದೆ. ಪ್ರತಿ ವಾರ ದಿಂಬಿನ ಕವರ್‌ಗಳನ್ನು ಬದಲಾಯಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬಗ್ಗೆ ಗೀತಿಕಾ ಮಿತ್ತಲ್ (Geetika Mittal) ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ (Instagram Post) ತಿಳಿಸಿದ್ದಾರೆ.
ನೀವು ಪ್ರತಿ ವಾರ ದಿಂಬಿನ ಕವರ್ ಬದಲಾಯಿಸಲು ಪ್ರಾರಂಭಿಸಿದಾಗ ನಿಮ್ಮ ಚರ್ಮದಲ್ಲಿ ಹಲವು ಬದಲಾವಣೆಯನ್ನು ನೋಡಬಹುದು ಎಂದು ಅವರು ಹೇಳಿದ್ದಾರೆ. ನೀವು ಪ್ರತಿದಿನ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಮಲಗುವ ಸಾಧ್ಯತೆಗಳಿವೆ. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು ಎನ್ನುತ್ತಾರೆ ಸ್ಕಿನ್ ಕೇರ್ ತಜ್ಞರು.
ಇದನ್ನೂ ಓದಿ: Beauty Tips: ನಿಮಗೆ ಎಣ್ಣೆ ಚರ್ಮವಿದ್ದರೆ ಈ 9 ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ದಿಂಬಿನ ಹೊದಿಕೆಯು ಧೂಳಿನ ಕಣಗಳು, ಕೊಳಕು, ಎಣ್ಣೆ, ಸಾಕುಪ್ರಾಣಿಗಳ ಕೂದಲು, ಸತ್ತ ಚರ್ಮ ಮತ್ತು ಬ್ಯಾಕ್ಟೀರಿಯಾದಂತಹ ಅನೇಕ ಹಾನಿಕಾರಕ ವಸ್ತುಗಳನ್ನು ಹೇಗೆ ಒಳಗೊಂಡಿರುತ್ತದೆ. ನೀವು ತ್ವಚೆಯನ್ನು ದಿನವೂ ಸ್ವಚ್ಛಗೊಳಿಸಿಕೊಂಡರೂ ಸಹ ಇವೆಲ್ಲವೂ ತ್ವಚೆ ಒಡೆಯುವಿಕೆಗೆ ಕಾರಣವಾಗಬಹುದು. ರೇಷ್ಮೆ ದಿಂಬಿನ ಹೊದಿಕೆಗಳನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಬಳಕೆ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Aloe Vera Benefits: ಕೂದಲು ಹಾಗೂ ಚರ್ಮಕ್ಕೆ ಅಲೋವೆರಾದಿಂದಾಗುವ ಪ್ರಯೋಜನಗಳ ತಿಳಿಯಿರಿ
ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಅಮೆರಿಕಾದಲ್ಲಿ ನಡೆಸಿದ ವೈದ್ಯಕೀಯ ಅಧ್ಯಯನವು ಹತ್ತಿ ಬೆಡ್‌ಶೀಟ್‌ಗಳನ್ನು ಬಳಸುವವರಿಗೆ ಹೋಲಿಸಿದರೆ ರೇಷ್ಮೆ ಬೆಡ್‌ಶೀಟ್‌ಗಳನ್ನು ಬಳಸುವವರಲ್ಲಿ ಮೊಡವೆಗಳ ಸಮಸ್ಯೆ ಕಡಿಮೆ ಕಂಡುಬಂದಿದೆ ಎಂದು ತಿಳಿಸಿದೆ. ಇತರ ಬಟ್ಟೆಗಳಿಗೆ ಹೋಲಿಸಿದರೆ ರೇಷ್ಮೆ ಮೃದು ಮತ್ತು ತ್ವಚೆಗೆ ನಯವಾಗಿರುವುದರಿಂದ ಇದು ಕೂಡ ಮೊಡವೆ ಕಡಿಮೆಯಾಗಲು ಕಾರಣ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.