AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮುಟ್ಟಿನ ಸಮಯದಲ್ಲಿ ಅಸಿಡಿಟಿಗೆ ಮನೆಯಲ್ಲೇ ಇದೆ ಪರಿಹಾರ

ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಬಯಸಿದರೆ ಕೆಲವು ಮನೆಮದ್ದುಗಳು ಇದಕ್ಕೆ ಸಹಾಯ ಮಾಡಬಹುದು. ಈ ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಹೊಟ್ಟೆ ನೋವಿನಿಂದ ತಕ್ಷಣ ಪರಿಹಾರ ಸಿಗುತ್ತದೆ.

Health Tips: ಮುಟ್ಟಿನ ಸಮಯದಲ್ಲಿ ಅಸಿಡಿಟಿಗೆ ಮನೆಯಲ್ಲೇ ಇದೆ ಪರಿಹಾರ
ಪಿರಿಯಡ್Image Credit source: Hindustan Times
Follow us
ಸುಷ್ಮಾ ಚಕ್ರೆ
|

Updated on:Jan 30, 2023 | 11:24 AM

ಪ್ರತಿ ತಿಂಗಳೂ ಮುಟ್ಟಿನ (Period) ಸಂದರ್ಭದಲ್ಲಿ ಮಹಿಳೆಯರು ದೈಹಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಜರ್ಝರಿತರಾಗಿರುತ್ತಾರೆ. ಕೆಲವರಿಗೆ 3 ದಿನಗಳ ಕಾಲ ಪಿರಿಯಡ್ ದೇಹವನ್ನು ಹಿಂಡಿದರೆ ಇನ್ನು ಕೆಲವರಿಗೆ 5 ದಿನಗಳ ಕಾಲ ಪಿರಿಯಡ್ ನೋವು (Menstrual Pain) ಇರುತ್ತದೆ. ಈ ಪಿರಿಯಡ್ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ಅಸಿಡಿಟಿ (Acidity) ಸಮಸ್ಯೆ ಸಾಮಾನ್ಯ. ಕೆಲವು ಮಹಿಳೆಯರು ತಮ್ಮ ಅವಧಿಯ ಸಮಯದಲ್ಲಿ ಹೊಟ್ಟೆಯಲ್ಲಿ ಅಸಹನೀಯ ನೋವು ಅನುಭವಿಸುತ್ತಾರೆ, ಆದರೆ ಕೆಲವು ಮಹಿಳೆಯರಿಗೆ ಕಡಿಮೆ ನೋವು ಇರುತ್ತದೆ. ಅನೇಕ ಮಹಿಳೆಯರು ಹೊಟ್ಟೆ ನೋವಿನ ಜೊತೆಗೆ ವಾಂತಿ, ತಲೆನೋವು ಮತ್ತು ಜ್ವರವನ್ನು ಸಹ ಅನುಭವಿಸುತ್ತಾರೆ. ಅನೇಕ ಬಾರಿ ಕೆಲವು ಮಹಿಳೆಯರಿಗೆ ಅಸಹನೀಯ ನೋವು ಉಂಟಾಗುತ್ತದೆ. ಅವರು ತಕ್ಷಣವೇ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ಬಯಸಿದರೆ ಕೆಲವು ಮನೆಮದ್ದುಗಳು ಇದಕ್ಕೆ ಸಹಾಯ ಮಾಡಬಹುದು. ಈ ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಹೊಟ್ಟೆ ನೋವಿನ ಸಮಸ್ಯೆಯಿಂದ ತಕ್ಷಣ ಪರಿಹಾರ ಸಿಗುತ್ತದೆ.

ಇಂಗು: ಪಿರಿಯಡ್ ಸಮಯದಲ್ಲಿ ಅಸಿಡಿಟಿಯಿಂದ ಉಂಟಾಗುವ ಹೊಟ್ಟೆ ನೋವಿಗೆ ಇಂಗು ತುಂಬಾ ಪ್ರಯೋಜನಕಾರಿ. ಇಂಗು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಒಂದು ಚಿಟಿಕೆ ಇಂಗು ತೆಗೆದುಕೊಂಡು ಅದಕ್ಕೆ ಒಂದು ಅಥವಾ ಎರಡು ಹನಿ ನೀರನ್ನು ಸೇರಿಸಿ. ಅದನ್ನು ಬೆರೆಸಿ ಹೊಕ್ಕುಳಲ್ಲಿ ತುಂಬಿಸಿ. ಜೊತೆಗೆ ಆ ಮಿಶ್ರಣವನ್ನು ಹೊಕ್ಕುಳ ಸುತ್ತ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ ಹೊಟ್ಟೆ ನೋವಿನಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: Late Periods: ಮುಟ್ಟು ತಡವಾಗುತ್ತಿದೆಯೇ? ಸಮಸ್ಯೆ ದೂರ ಮಾಡಲು ಸುಲಭ ಟಿಪ್ಸ್​ಗಳು ಇಲ್ಲಿವೆ

ತುಳಸಿ ಎಲೆಗಳು: ತುಳಸಿ ಎಲೆಯು ಹೊಟ್ಟೆ ನೋವನ್ನು ನಿವಾರಿಸಲು ಅತ್ಯುತ್ತಮ ಪರಿಹಾರವಾಗಿದೆ. 4-5 ತುಳಸಿ ಎಲೆಗಳನ್ನು ತೆಗೆದುಕೊಂಡು ಚಹಾ ಮಾಡುವಾಗ ಅವುಗಳನ್ನು ಚೆನ್ನಾಗಿ ಕುದಿಸಿ. ಈ ಚಹಾವನ್ನು ಕುಡಿಯುವುದರಿಂದ ಹೊಟ್ಟೆ ನೋವಿನಿಂದ ಕೂಡಲೆ ಪರಿಹಾರ ಸಿಗುತ್ತದೆ.

ಶುಂಠಿ: ಶೀತ ಮತ್ತು ಕೆಮ್ಮಿನ ಹೊರತಾಗಿ ಶುಂಠಿಯು ಹೊಟ್ಟೆ ನೋವು ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಪಾತ್ರೆಯಲ್ಲಿ 1 ಲೋಟ ನೀರನ್ನು ಸುರಿಯಿರಿ. ಈ ನೀರಿನಲ್ಲಿ ಒಂದು ತುಂಡು ಶುಂಠಿಯನ್ನು ಹಾಕಿ ಕುದಿಸಿ. ನೀರು ಅರ್ಧ ಉಳಿದಿರುವಾಗ ಗ್ಯಾಸ್ ಆಫ್ ಮಾಡಿ. ಈ ನೀರನ್ನು ಸ್ವಲ್ಪ ತಣ್ಣಗಾಗಿಸಿ ನಂತರ ಕುಡಿಯಿರಿ. ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ: Workout: ಯಾವುದೇ ಕಾರಣಕ್ಕೂ ಮಹಿಳೆಯರು ಇಂತಹ ಸಂದರ್ಭಗಳಲ್ಲಿ ವರ್ಕ್‌ಔಟ್ ಮಾಡಬಾರದು!

ಸೋಂಪು: ಸೋಂಪು ಸೇವಿಸುವುದರಿಂದ ಹೊಟ್ಟೆ ನೋವಿನಿಂದ ಪರಿಹಾರ ಸಿಗುತ್ತದೆ. ಹೆಚ್ಚಿನ ಮಹಿಳೆಯರು ಹೊಟ್ಟೆ ನೋವಿನಲ್ಲಿ ಆಮ್ಲೀಯತೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸೋಂಪು ತಿಂದರೆ ಅಥವಾ ಸೋಂಪು ಕುದಿಸಿದ ನೀರನ್ನು ಸೇವಿಸಿದರೆ ತಕ್ಷಣ ಪರಿಹಾರ ಸಿಗುತ್ತದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:23 am, Mon, 30 January 23

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​