ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡಲು ಹಿಂದೇಟು ಹಾಕಬೇಡಿ
ಋತುಚಕ್ರದಾದ್ಯಂತ ಮಹಿಳೆಯರ ವ್ಯಾಯಾಮದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಾಗ ಸಂಶೋಧಕರು ಮಹಿಳೆಯ ಮಿತಿ ಅಥವಾ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವನ್ನು ಕಂಡುಕೊಂಡಿಲ್ಲ.
ಯಾವ ರೀತಿ ವ್ಯಾಯಾಮ (Exercise) ಮಾಡುವುದು, ದೇಹವನ್ನು ಹೇಗೆ ಫಿಟ್ ಆಗಿಟ್ಟುಕೊಳ್ಳುವುದು ಎಂಬುದರ ಬಗ್ಗೆ ಸಾಕಷ್ಟು ಲೇಖನಗಳನ್ನು ಓದುತ್ತಿರುತ್ತೀರಿ. ಆದರೆ ಹೆಚ್ಚಿನ ಫಿಟ್ನೆಸ್ (Fitness) ಸಲಹೆಯು ಬಹುತೇಕ ಪುರುಷರನ್ನು ಒಳಗೊಂಡಿರುವ ಸಂಶೋಧನೆಯ ಮೇಲೆ ಆಧಾರಿತವಾಗಿರುತ್ತದೆ. ಏಕೆಂದರೆ ಋತುಚಕ್ರದ (Menstruation) ಹಾರ್ಮೋನ್ ಬದಲಾವಣೆಗಳು ಮಹಿಳೆಯ ವ್ಯಾಯಾಮದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆಯಿದೆ. ಆದರೆ, ಅದು ತಪ್ಪು.
ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಬ್ರಿಗಮ್ ಯಂಗ್ ಯೂನಿವರ್ಸಿಟಿ ಸಂಶೋಧಕರ ಹೊಸ ಅಧ್ಯಯನವು ಆ ನಂಬಿಕೆ ತಪ್ಪು ಎಂದು ಸಾಬೀತುಪಡಿಸಿದೆ. ಋತುಚಕ್ರದಾದ್ಯಂತ ಮಹಿಳೆಯರ ವ್ಯಾಯಾಮದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಾಗ ಸಂಶೋಧಕರು ಮಹಿಳೆಯ ಮಿತಿ ಅಥವಾ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವನ್ನು ಕಂಡುಕೊಂಡಿಲ್ಲ. ವ್ಯಾಯಾಮ ಮಾಡುವಾಗ ಮಹಿಳೆಯರ ಕಾರ್ಯಕ್ಷಮತೆಯು ಪುರುಷರಂತೆಯೇ ಸ್ಥಿರವಾಗಿದೆ.
ಇದನ್ನೂ ಓದಿ: Period Pain: ಋತುಚಕ್ರದ ನೋವನ್ನು ಸಹಿಸೋಕೆ ಆಗುತ್ತಿಲ್ಲವೇ?; ಮುಟ್ಟಿನ ಸಮಯದಲ್ಲಿ ಹೀಗೆ ಮಾಡಿ ನೋಡಿ
ಮಹಿಳೆಯರ ಋತುಚಕ್ರವು ಅವರ ವ್ಯಾಯಾಮದ ಮೇಲೆ ಪರಿಣಾಮ ಬೀರದಿದ್ದರೂ, ಅವರಿಬ್ಬರ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಉದಾಹರಣೆಗೆ, ಸ್ತ್ರೀಯರು ಪುರುಷರಿಗಿಂತ ಸುಮಾರು ಶೇ. 18ರಷ್ಟು ವೇಗವಾಗಿ ಸ್ನಾಯುವಿನ ಆಯಾಸದಿಂದ ಬಳಲಿಕೆಗೆ ಒಳಗಾಗುತ್ತಾರೆ. ಬಹುಶಃ ಮಹಿಳೆಯರ ದೇಹಕ್ಕೆ ನೈಸರ್ಗಿಕವಾಗಿ ಹೆಚ್ಚಿನ ಶಕ್ತಿ ಬೇಕಾಗುವುದು ಇದಕ್ಕೆ ಕಾರಣವಿರಬಹುದು. ಆದರೂ ಋತುಚಕ್ರದ ಅವಧಿಯಲ್ಲಿ ಅವರ ದೇಹದ ಸಾಮರ್ಥ್ಯ ಇನ್ನಷ್ಟು ಬಲವಾಗಿರುತ್ತದೆ.
ಇದನ್ನೂ ಓದಿ: Women Health: ಮಹಿಳೆಯರೇ ಗಮನಿಸಿ! ಋತುಚಕ್ರದಲ್ಲಿ ಈ ಆಹಾರಗಳು ನಿಮ್ಮ ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ
ಈಸ್ಟ್ರೊಜೆನ್‌ನಂತಹ ಹಾರ್ಮೋನುಗಳು ಅಪಧಮನಿಗಳು ಎಷ್ಟು ಚೆನ್ನಾಗಿ ಹಿಗ್ಗುತ್ತವೆ ಮತ್ತು ಸ್ನಾಯುಗಳಿಗೆ ರಕ್ತವು ಹೇಗೆ ಹರಿಯುತ್ತದೆ ಎಂಬುದನ್ನು ಪ್ರಭಾವಿಸುತ್ತದೆ ಎಂದು ತಿಳಿದಿದ್ದರೂ ಒಟ್ಟಾರೆ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುವುದಿಲ್ಲ. ಈ ಅಧ್ಯಯನವು ಸೈಕ್ಲಿಂಗ್‌ನ ಮೇಲೆ ಮಾತ್ರ ಕೇಂದ್ರೀಕರಿಸಿತ್ತು ಮತ್ತು ಮುಟ್ಟಿನ ಅಸ್ವಸ್ಥತೆಗಳಿಲ್ಲದ ಮಹಿಳೆಯರನ್ನು ಮಾತ್ರ ಒಳಗೊಂಡಿತ್ತು ಎಂಬುದನ್ನು ಲಿಂಡೆ ಮತ್ತು ಗಿಫೋರ್ಡ್ ಸ್ಪಷ್ಟಪಡಿಸಿದ್ದಾರೆ. ಅನಿಯಮಿತ ಮುಟ್ಟಿನ ವ್ಯಾಯಾಮದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.