ಮುಖದಲ್ಲಿ ಚರ್ಮದ ಬಣ್ಣ ಕಳೆದು ಬಿಳಿಯಾಗುವುದನ್ನು ವಿಟಿಲಿಗೋ (Vitiligo) ಎಂದು ಕರೆಯುತ್ತಾರೆ. ಇದು ದೀರ್ಘಕಾಲದ ರೋಗವಾಗಿದ್ದರೂ ಸಾಂಕ್ರಮಿಕಲ್ಲ. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ರೀತಿಯ ಬಣ್ಣದ ಚರ್ಮವನ್ನು ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ 30 ವರ್ಷದ ನಂತರ ಈ ಚರ್ಮ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ಜನರ ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಬಿಳಿ ಚುಕ್ಕೆಗಳನ್ನು ಹೊಂದಿರುವುದನ್ನು ನೋಡಿರಬಹುದು. ಸಣ್ಣ ಚುಕ್ಕೆಗಳಿಂದ ಪ್ರಾರಂಭವಾಗುವ ಈ ಚರ್ಮ ರೋಗ ಕ್ರಮೇಣ ದೇಹದಾದ್ಯಂತ ಹರಡುತ್ತದೆ. ಈ ಸಮಸ್ಯೆ ಇರುವವರು ಕೆಲವೊಂದು ಆಹಾರ ಸೇವನೆಯನ್ನು ತಪ್ಪಿಸಬೇಕು. ಆ ಆಹಾರಗಳು ಯಾವುವು ಎಂದು ತಿಳಿಯೋಣ.
ವಿಟಲಿಗೋದಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯಕೀಯವಾಗಿ ಗುರುತಿಸಲ್ಪಟ್ಟ ಆಹಾರವಿಲ್ಲ. ಅದಾಗ್ಯೂ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುವುದರಿಂದ ಕೆಲವು ಆಹಾರಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು. ಸಾಮಾನ್ಯವಾಗಿ ಈ ಸಮಸ್ಯೆ ಕೈಗಳು, ತೋಳುಗಳು, ಕಾಲುಗಳು ಮತ್ತು ಮುಖದ ಮೇಲೆ ಪ್ರಾರಂಭವಾಗುತ್ತದೆ. ಆದರೆ ಲೋಳೆಯ ಪೊರೆಗಳು (ಬಾಯಿ, ಮೂಗು, ಜನನಾಂಗ ಮತ್ತು ಗುದನಾಳದ ತೇವಾಂಶದ ಒಳಪದರ), ಕಣ್ಣುಗಳು ಮತ್ತು ಒಳ ಕಿವಿ ಸೇರಿದಂತೆ ದೇಹದ ಯಾವುದೇ ಭಾಗಗಳಲ್ಲಿ ಕಾಣಬಹುದು.
ಬಿಳಿ ಚುಕ್ಕೆಗಳಿರುವವರು ಸೇವನೆ ಮಾಡಬಾರದ ಆಹಾರಗಳಿವು:
ವೈನ್, ಬ್ಲೂಬೆರ್ರಿಸ್, ಸಿಟ್ರಸ್, ಕಾಫಿ, ಮೊಸರು, ಮೀನು, ಹಣ್ಣಿನ ರಸ, ಆಮ್ಲಾ, ದ್ರಾಕ್ಷಿ, ಉಪ್ಪಿನಕಾಯಿ, ದಾಳಿಂಬೆ, ಪೇರಳೆ, ಕೆಂಪು ಮಾಂಸ, ಟೊಮೆಟೊ, ಗೋಧಿ ಉತ್ಪನ್ನಗಳು, ಹುಳಿ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ.
(ಸೂಚನೆ: ಲೇಖನದಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಸಲಹೆಗಳನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ