
ಮೂಸಂಬಿ (Mosambi) ಹಣ್ಣು ಯಾವುದೇ ಋತುಮಾನದಲ್ಲಿ ಸೇವನೆ ಮಾಡಬಹುದಾಗಿದ್ದು ಆರೋಗ್ಯಕ್ಕೂ ಒಳ್ಳೆಯದು. ಇವುಗಳನ್ನು ರಸದ ರೂಪದಲ್ಲಿ ಅಥವಾ ನೇರವಾಗಿ ಹಣ್ಣಿನ ರೂಪದಲ್ಲಿ ಸೇವಿಸಬಹುದು. ಇದರಲ್ಲಿ ವಿಟಮಿನ್ ಸಿ, ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿಯೂ ಇದನ್ನು ಸೇವನೆ ಮಾಡಬಹುದು. ಮಾತ್ರವಲ್ಲ ಇದು ಕೆಲವು ಕಾಲೋಚಿತ ಆರೋಗ್ಯ (Health) ಸಮಸ್ಯೆಗಳು ಬರದಂತೆ ತಡೆಯುತ್ತದೆ. ಹಾಗಾಗಿ ಈ ಹಣ್ಣಿನ ರಸವನ್ನು ತಪ್ಪದೆ ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ದೇಹವನ್ನು ಹಾನಿಕಾರಕ ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು ಮಾತ್ರವಲ್ಲ ಇದನ್ನು ಬೆಳಗ್ಗಿನ ಸಮಯದಲ್ಲಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ