AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಬೆಹಣ್ಣಿನ ತಿರುಳು ಉಪಯೋಗಿಸಿ ಬಿಸಾಡುವ ಮುನ್ನ ಒಮ್ಮೆ ಯೋಚಿಸಿ, ಅದು ಬಹುಪಯೋಗಿ ವಸ್ತು!

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿದೆ, ಇದು ವಿಟಮಿನ್ ಸಿ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ಸಾಮಾನ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬಾಯಿಯ ಕಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.

ನಿಂಬೆಹಣ್ಣಿನ ತಿರುಳು ಉಪಯೋಗಿಸಿ ಬಿಸಾಡುವ ಮುನ್ನ ಒಮ್ಮೆ ಯೋಚಿಸಿ, ಅದು ಬಹುಪಯೋಗಿ ವಸ್ತು!
ನಿಂಬೆ ಹಣ್ಣಿನ ಸಿಪ್ಪೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2022 | 8:03 AM

ನಮ್ಮ ಅಡುಗೆಮನೆ (kitchen) ಮತ್ತು ಫ್ರಿಜ್​ಗಳ (refrigerator) ಪ್ರಮುಖ ಭಾಗವಾಗಿರುವ ನಿಂಬೆಹಣ್ಣಿನಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಅನೇಕ ಅಂಶಗಳಿವೆ. ನಿಂಬೆಹಣ್ಣಿಲ್ಲದ ಲೆಮೋನೇಡ್ (lemonade) ಮತ್ತು ತಾಜಾ ಸಲಾಡ್​ಗಳನ್ನು ಊಹಿಸುವುದು ಸಾಧ್ಯವೇ? ನಿಂಬೆ ನಾವು ಸೇವಿಸುವ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಹಲವು ಪೌಷ್ಟಿಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ.

ಅದು ಸರಿ, ನಾವು ನಿಂಬೆಹಣ್ಣನ್ನು ಹಲವಾರು ವಿಧ ಮತ್ತು ರೂಪಗಳಲ್ಲಿ ಉಪಯೋಗಿಸಿ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಅದನ್ನು ಬಿಸಾಡುವ ಮೊದಲು ಒಮ್ಮೆ ಯೋಚಿಸಿ.

ನಿಂಬೆಹಣ್ಣು ನಿಸ್ಸಂದೇಹವಾಗಿ ಬಹುಪಯೋಗಿ ಹಣ್ಣು. ಅದು ತನ್ನ ರಸದಿಂದ ಸಿಪ್ಪೆಯವರೆಗೆ ಪೌಷ್ಟಿಕಾಂಶಗಳಿಂದ ಕೂಡಿದೆ-ಇದರಲ್ಲಿ ಹೇರಳವಾಗಿ ಆಂಟಿ ಆಕ್ಸಿಡಂಟ್ ಗಳಿವೆ ಮತ್ತು ಗರಿಷ್ಟ ಪ್ರಮಾಣದಲ್ಲಿ ವಿಟಮಿನ್ ಸಿ ಇದೆ.

ನಮ್ಮ ತ್ವಚೆಗೆ ನಿಂಬೆ ಬಹಳ ಉಪಯೋಗಕಾರಿ, ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ, ಬೇಕರಿಗಳಲ್ಲಿ, ತಂಪು ಪಾನೀಯಗಳನ್ನು ತಯಾರಿಸುವಲ್ಲಿ ಬಳಸಲ್ಪಡುತ್ತದೆ ಮತ್ತು ಮನೆಗಳಲ್ಲೂ ಸ್ವಚ್ಛತೆಯ ಏಜೆಂಟಾಗಿ ಮತ್ತು ತಾಜಾ ಪರಿಮಳಕ್ಕಾಗಿ ಉಪಯೋಗಿಸಲಾಗುತ್ತದೆ.

ತಜ್ಞರ ವೈದ್ಯರ ಪ್ರಕಾರ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ, ವಿಟಮಿನ್, ಲವಣಾಂಶ, ನಾರು ಮೊದಲಾದವುಗಳಿದ್ದು ಇವೆಲ್ಲ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿವೆ. ಹಾಗೆ ನೋಡಿದರೆ ನಿಂಬೆ ಹಣ್ಣಿನ ತಿರುಳಿಗಿಂತ ಅದರ ಸಿಪ್ಪೆ ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿದೆ.

ನಿಂಬೆ ಹಣ್ಣಿನಿಂದ ಏನೆಲ್ಲ ಪ್ರಯೋಜನಗಳಿವೆ ಅಂತ ತಿಳಿಯೋಣ

ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಅಂಶವಿರುವುದರಿಂದ ಇದು ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

ಬಾಯಿಯ ಸಾಮಾನ್ಯ ಸಮಸ್ಯೆಗಳು

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿದೆ, ಇದು ವಿಟಮಿನ್ ಸಿ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ಸಾಮಾನ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬಾಯಿಯ ಕಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.

ಹೃದಯ ಮತ್ತು ಸಂಬಂಧಿತ ರೋಗಗಳು

ನಿಂಬೆ ಹಣ್ಣಿನ ಸಿಪ್ಪೆಯು ಫ್ಲೇವನಾಯ್ಡ್‌ಗಳು, ವಿಟಮಿನ್ ಸಿ ಮತ್ತು ಪೆಕ್ಟಿನ್ ಅನ್ನು ಹೊಂದಿದೆ. ಇವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಇತರ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಡಿ-ಲಿಮೋನೆನ್ ಮತ್ತು ವಿಟಮಿನ್ ಸಿ ನಂತಹ ಆಂಟಿ ಆಕ್ಸಿಡಂಟ್ ಗಳಿರುತ್ತವೆ, ಇದು ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ನಿಂಬೆ ಹಣ್ಣಿನ ಸಿಪ್ಪೆ, ಇತರ ಸಿಟ್ರಸ್ ಹಣ್ಣುಗಳಂತೆ, ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ನಿರೋಧಕ ಶಕ್ತಿ ನಿಂಬೆ ಹಣ್ಣಿನ ಸಿಪ್ಪೆಗಿದೆ

ಯುಎಸ್ ಅರಿಜೋನಾ ಯೂನಿವರ್ಸಿಟಿಯ ಒಂದು ಅಧ್ಯಯನದ ಪ್ರಕಾರ ಬ್ಲ್ಯಾಕ್ ಟೀಯಲ್ಲಿ ನಿಂಬೆ ಹಣ್ಣಿನ ಸಿಪ್ಪೆಯನ್ನು ಬೆರೆಸಿ ಸೇವುಸಿದರೆ ಅದು ಕ್ಯಾನ್ಸರ್ ಸಾಧ್ಯತೆಯನ್ನು ಶೇಕಡಾ 70ರಷ್ಟು ಕಡಿಮೆ ಮಾಡುತ್ತದೆ. ಸಿಪ್ಪೆಯಲ್ಲಿ ಸಾಲ್ವಸ್ಟ್ರಾಲ್ Q40 ಲಿಮೋನೀನ್ ಇದ್ದು ಅವು ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ವಿರುದ್ಧ ಹೋರಾಡುತ್ತವೆ.

ನಿಂಬೆ ಹಣ್ಣಿನ ಸಿಪ್ಪೆ ಸಾವಯವ ಆಗಿರುವುದರಿಂದ ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿಡಬೇಕು. ತಜ್ಞರು ಅದನ್ನು ಮನೆಯಲ್ಲಿ ಸುಲಭವಾಗಿ ಸಂರಕ್ಷಿಸಿಡುವ ವಿಧಾನ ತಿಳಿಸಿದ್ದಾರೆ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಇಲ್ಲವೇ ಚಟ್ನಿ ಮಾಡಿಕೊಳ್ಳಬೇಕು. ಪುಡಿಯನ್ನು ಮೇಲ್ಭಾಗದಲ್ಲಿ ಜಿಪ್ ಇರುವ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಡೀಪ್ ಫ್ರೀಜ್ನಲ್ಲಿಡಬೇಕು, ಇಲ್ಲವೇ ಸಿಪ್ಪೆಯನ್ನು ಒಣಗಿಸಿ ಸ್ಟೋರ್ ಮಾಡಬಹುದು. ಸಿಪ್ಪೆಯನ್ನು ನೀವು ಓವನ್ ನಲ್ಲೂ ಒಣಗಿಸಬಹುದು.

ಪುಡಿ ಮಾಡಿದ ಸಿಪ್ಪೆಯನ್ನು ಹಲವಾರು ವಿಧಗಳಲ್ಲಿ ಉಪಯೋಗಿಸಬಹುದು: ಅದರಿಂದ ಲೆಮನ್ ಟೀ ತಯಾರಿಸಿ ಕುಡಿಯಬಹುದು ಅಥವಾ ಬೇರೆ ಪೇಯಗಳನ್ನು ಮಾಡಿಕೊಂಡು ಕುಡಿಯಬಹುದು.

ಬೇಕರಿ ಪದಾರ್ಥಗಳಲ್ಲಿ ಅಲಂಕಾರಿಕ ವಸ್ತುವಾಗಿ ಬಳಸಬಹುದು ಇಲ್ಲವೇ ಲೆಮನ್ ಕೇಕ್ ತಯಾರಿಸಬಹುದು.

ಗ್ರೇವಿಯಲ್ಲಿ ಹುಳಿಯ ಅಂಶ ತರಲು ಅದನ್ನು ಸೇರಿಸಬಹುದು

ಸೂಪ್ ಗಳಲ್ಲಿ ಬಳಸಬಹುದು ಇಲ್ಲವೇ ಸಿಟ್ರಿಕ್ ಫ್ಲೇವರ್ ನ ಸೂಪ್ ತಯಾರಿಸಬಹುದು.

ಫ್ರಿಜ್ನಲ್ಲಿ ಡಿಒಡೊರೈಜರ್ ಆಗಿ ಉಪಯೋಗಿಸಬಹುದು.

ಹೊಳೆಯುವ ತ್ವಚೆಗಾಗಿ ಅದನ್ನು ಫೇಸ್ ಪ್ಯಾಕ್ ಆಗಿ ಬಳಸಬಹುದು

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ