AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stomach Bloating: ಹೊಟ್ಟೆ ಉಬ್ಬರ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಕಾರಣಗಳೇನು? ಪರಿಹಾರ ಇಲ್ಲಿದೆ

ಜೀರ್ಣಕ್ರಿಯೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು ಹೊಟ್ಟೆ ಉಬ್ಬರದ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಸದಾ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ.

Stomach Bloating: ಹೊಟ್ಟೆ ಉಬ್ಬರ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಕಾರಣಗಳೇನು? ಪರಿಹಾರ ಇಲ್ಲಿದೆ
Bloating Stomach
TV9 Web
| Updated By: ನಯನಾ ರಾಜೀವ್

Updated on: Jul 22, 2022 | 12:02 PM

Share

ಜೀರ್ಣಕ್ರಿಯೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು ಹೊಟ್ಟೆ ಉಬ್ಬರದ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಸದಾ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಮಲಬದ್ಧತೆಯಿಂದಲೂ ಹೊಟ್ಟೆ ಉಬ್ಬರ ಸಂಭವಿಸಬಹುದು, ಸಣ್ಣ ಕರುಳಿನಲಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಿ, ಆಮ್ಲ ಉತ್ಪತ್ತಿಯಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಹಲವು ಬಾರಿ ಆಹಾರ ಜೀರ್ಣವಾಗದಿದ್ದಾಗ ಹೊಟ್ಟೆ ಉಬ್ಬರದಂತಹ ಸಮಸ್ಯೆ ಕಾಡುತ್ತದೆ.

ಜಠರಗರುಳಿನ ಪ್ರದೇಶದಲ್ಲಿನ ಅನಿಲ ರಚನೆಯ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗಬಹುದು. ಹೊಟ್ಟೆ ಉಬ್ಬುವಿಕೆಯಿಂದಾಗಿ, ಹೊಟ್ಟೆಯು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುತ್ತದೆ ಮತ್ತು ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಸ್ವಲ್ಪ ಅಥವಾ ತೀವ್ರವಾದ ನೋವು ಅನುಭವಿಸಬಹುದು. ದೇಹದಲ್ಲಿ ನೀರಿನ ಕೊರತೆಯೂ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.

ಅಜೀರ್ಣ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಹೀಗೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಪರಿಹಾರ ಪಡೆಯಲು ಹಲವರು ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಳ್ಳುತ್ತಾರೆ.

ಹೊಟ್ಟೆ ಊದಿಕೊಳ್ಳಲು ಕೆಲವು ಕಾರಣಗಳು ಹಾಗೂ ಪರಿಹಾರ ಮಲಬದ್ಧತೆ: ಮಲ ಬದ್ಧತೆಯುಂಟಾದಾಗ ಆಹಾರವು ದೊಡ್ಡ ಕರುಳಿನಲ್ಲಿ ಕುಳಿತು ಕೊಳೆಯುತ್ತದೆ ಮತ್ತು ಅನಿಲಗಳನ್ನು ಉಂಟು ಮಾಡುತ್ತದೆ. ಇದು ಮತ್ತಷ್ಟು ಉಬ್ಬುವುದು, ಭಾರವಾದ ಭಾವನೆ, ಹೊಟ್ಟೆಯಲ್ಲಿ ಬಿಗಿತ, ಮತ್ತು ಗ್ಯಾಸ್‌ನಿಂದ ಉಂಟಾಗುವ ಒತ್ತಡದಿಂದಾಗಿ ತಲೆನೋವು ಕೂಡ ಉಂಟಾಗುತ್ತದೆ.

ಕಡಿಮೆ ಆಮ್ಲ: ಅನ್ನನಾಳದಲ್ಲಿ ಆಮ್ಲ ಹಿಮ್ಮುಖ ಹರಿವಿನ ಲಕ್ಷಣಗಳಿಗೆ ಕಾರಣವಾಗುವ ಆಹಾರವನ್ನು ಹೀರಿಕೊಳ್ಳುವ ಕಾರಣ ಗಂಟಲಿನಲ್ಲಿ ಉರಿ ಮತ್ತು ವಿಶೇಷವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬುವುದು. ಹೊಕ್ಕುಳ ಬಳಿ ನೋವುಂಟಾಗುತ್ತದೆ.

ಆಹಾರವನ್ನು ಸಂಪೂರ್ಣವಾಗಿ ಅಗಿಯಿರಿ: ಆಹಾರವನ್ನು ಅರ್ಜೆಂಟ್​ನಲ್ಲಿ ತಿನ್ನಬೇಡಿ, ಸಂಪೂರ್ಣವಾಗಿ ಅಗಿದು ನುಂಗಬೇಕು. ಆಹಾರಗಳು ದೊಡ್ಡ ಕಣಗಳಿಂದ ಸಣ್ಣ ಕಣಗಳಾಗಿ ವಿಭಜಿಸುತ್ತದೆ, ಅದು ಸುಲಭವಾಗಿ ಜೀರ್ಣವಾಗುತ್ತದೆ, ಕರುಳುಗಳು ಆಹಾರದ ಕಣಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಇದು ಸರಿಯಾಗಿ ಜೀರ್ಣವಾಗದ ಆಹಾರವು ನಮ್ಮ ರಕ್ತವನ್ನು ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ನಿಮ್ಮ ಆರೋಗ್ಯದ ಮೇಲೆ ವ್ಯಾಪಕವಾದ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ.

ವ್ಯಾಯಾಮ: ವ್ಯಾಯಾಮವು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೈಹಿಕ ಚಟುವಟಿಕೆಯು ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುವುದು ಸೇರಿದಂತೆ ಹಲವು ದೈಹಿಕ ಚಟುವಟಿಕೆಯು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಊಟದ ಸಮಯದಲ್ಲಿ ಹೆಚ್ಚು ನೀರನ್ನು ತಪ್ಪಿಸಿ: ಊಟದ ಸಮಯದಲ್ಲಿ ಹೆಚ್ಚು ದ್ರವಗಳು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸಬಹುದು, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು, ಹಾಗಾಗಿ ನೀರು ಕುಡಿಯಲೇಬೇಕೆನಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಕುಡಿಯಿರಿ, ಊಟದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ.

ಸ್ಟ್ರಾಗಳು ಮತ್ತು ಕಿರಿದಾದ ಬಾಯಿಯ ಬಾಟಲಿಗಳನ್ನು ಬಳಸಿ ಕುಡಿಯುವುದನ್ನು ತಪ್ಪಿಸಿ: ನೀವು ನೀರನ್ನು ಕುಡಿಯುವಾಗ ಸ್ಟ್ರಾಗಳನ್ನು ಬಳಸಿದರೆ ಅಥವಾ ಬಾಟಲಿ ಬಾಯಿ ಕಿರಿದಾಗಿದ್ದರೆ ಕುಡಿಯುವಾಗ ಹೆಚ್ಚುವರಿ ಗಾಳಿಯ ಸೇವನೆ ಮಾಡಿದಾಗ ಹೊಟ್ಟೆ ಉಬ್ಬುವಿಕೆ ಉಂಟಾಗುತ್ತದೆ.

ಸೋಂಪು: ಹಲವರು ಚಹಾದೊಂದಿಗೆ ಸೋಂಪನ್ನು ಸೇವಿಸುತ್ತಾರೆ. ಇದರಿಂದ ಆಮ್ಲೀಯತೆ ಉಂಟಾಗುವುದಿಲ್ಲ. ಅದೇ ರೀತಿ ಹಬ್ಬ-ಹರಿದಿನಗಳಲ್ಲಿ ಅಥವಾ ವಿಶೇಷ ಊಟದ ನಂತರ ಸೋಂಪನ್ನು ತಿನ್ನುವುದರಿಂದ ಅಸಿಡಿಟಿ ಬರುವುದಿಲ್ಲ. ಗ್ಯಾಸ್ ಪ್ರಾಬ್ಲಮ್ ಇರುವವರು ಊಟದ ನಂತರ ಸೋಂಪನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ದೂರವಿರಬಹುದು.

ಧೂಮಪಾನ ಮತ್ತು ಹುಕ್ಕಾ ಬೇಡವೇಬೇಡ: ಧೂಮಪಾನ ಮಾಡುವವರು ಅಥವಾ ಹುಕ್ಕಾ ಬಳಕೆ ಮಾಡುವವರು ಧೂಮಪಾನಿಗಳಲ್ಲದವರಿಗಿಂತ ಹೆಚ್ಚುವರಿ ಗಾಳಿಯನ್ನು ಉಸಿರಾಡುತ್ತಾರೆ.

ಈ ತರಕಾರಿಗಳನ್ನು ಆ ಸಮಯದಲ್ಲಿ ಬಳಸಬೇಡಿ: ಬೀನ್ಸ್, ಎಲೆಕೋಸು, ಈರುಳ್ಳಿ, ಮೂಲಂಗಿ, ಕಲ್ಲಂಗಡಿಗಳು, ಕೋಸುಗಡ್ಡೆಯಂತಹ ತರಕಾರಿಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಅನಿಲವನ್ನು ಉಂಟುಮಾಡುತ್ತವೆ.

ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ