AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮಸಾಲಾ ಮಜ್ಜಿಗೆಯ ಸಿಂಪಲ್​ ರೆಸಿಪಿ ಇಲ್ಲಿದೆ

ಮಜ್ಜಿಗೆಯಲ್ಲಿನ ಕ್ಯಾಲ್ಸಿಯಂ, ಪೊಟ್ಯಾಸಿಯಂ ಅಂಶಗಳು ರಕ್ತದೊತ್ತಡವನ್ನೂ ಕಡಿಮೆ ಮಾಡಿ,  ಕೊಲೆಸ್ಟ್ರಾಲ್​ ಅನ್ನು ನಿಯಂತ್ರಿಸುತ್ತದೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮಸಾಲಾ ಮಜ್ಜಿಗೆಯ ಸಿಂಪಲ್​ ರೆಸಿಪಿ ಇಲ್ಲಿದೆ
ಮಜ್ಜಿಗೆ
TV9 Web
| Edited By: |

Updated on:Feb 19, 2022 | 1:09 PM

Share

ಭಾರತೀಯ ಆಹಾರ(Food) ಪದ್ಧತಿಗಳಲ್ಲಿ ಎಲ್ಲವೂ ಆರೋಗ್ಯವನ್ನೂ ಸುಧಾರಿಸುವಂತಹವುಗಳೇ ಆಗಿವೆ. ಅನಾದಿ ಕಾಲದಿಂದಲೂ ಮನೆಮದ್ದು, ಮನೆಯಲ್ಲಿ ಬಳಸುವ ಪದಾರ್ಥಗಳಿಂದಲೇ ಹಲವು ಅನಾರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತದೆ. ಅಂತಹವುಗಳಲ್ಲಿ ಮಜ್ಜಿಗೆ (Buttermilk) ಕೂಡ ಒಂದು. ಧೇಹದಲ್ಲಿನ ಅಧಿಕ ಕೊಬ್ಬನ್ನು ಕರಗಿಸಿ ಜೀರ್ಣ ಶಕ್ತಿಯನ್ನು (Digestion) ಹಚ್ಚಿಸುವಲ್ಲಿ ಮಜ್ಜಿಗೆ ಪ್ರಮುಖ ಪಾತ್ರ ವಹಿಸುತ್ತದೆ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಾಯಮಾಡುವ ಮಜ್ಜಿಗೆ ಹಲವು ರೋಗಗಳನ್ನು ನಿಯಂತ್ರಿಸುತ್ತದೆ.

ಮಜ್ಜಿಗೆಯಲ್ಲಿನ ಕ್ಯಾಲ್ಸಿಯಂ, ಪೊಟ್ಯಾಸಿಯಂ ಅಂಶಗಳು ರಕ್ತದೊತ್ತಡವನ್ನೂ ಕಡಿಮೆ ಮಾಡಿ,  ಕೊಲೆಸ್ಟ್ರಾಲ್​ ಅನ್ನು ನಿಯಂತ್ರಿಸುತ್ತದೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಮಜ್ಜಿಗೆ ಇನ್ನೊಂದು ಗುಣವೆಂದರೆ ಇದು ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಕಫ ಮತ್ತು ವಾತದ ಸಮಸ್ಯೆಯನ್ನು ಬಗೆಹರಿಸುತ್ತದೆ. ಹೀಗಾಗಿ ಮಜ್ಜಿಗೆಯ ಸೇವನೆ ದೇಹಕ್ಕೆ ಉತ್ತಮವಾಗಿದೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಬೇಸಿಗೆ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಮಧ್ಯಾಹ್ನದ ವೇಳೆ ಊಟದ ಜತೆಗೆ ಮಸಾಲೆ ಭರಿತ ಮಜ್ಜಿಗೆಯನ್ನು ಸೇವಿಸಿದರೆ ನಾಲಿಗೆಗೂ ರುಚಿ ಹೊಟ್ಟೆಗೂ ಹಿತ.

ಇಲ್ಲಿದೆ ನೋಡಿ ಮಸಾಲಾ ಮಜ್ಜಿಗೆಯ ರೆಸಿಪಿ

1/4 ಕಪ್​ ಮೊಸರು 1 ಕಪ್​ ನೀರು 1 ಚಮಚ ಜೀರಿಗೆ ಪುಡಿ ಕೊತ್ತಂಬರಿ ಸೊಪ್ಪು ಶುಂಠಿ ಪುದೀನಾ ಎಲೆ ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಮೊಸರಿಗೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಹ್ಯಾಂಡ್​ ಬ್ಲೆಂಡರ್​ನಿಂದ ಮಾಡಿದರೆ ಉತ್ತಮ. ನಂತರ ಅದಕ್ಕೆ ಜೀರಿಗೆ ಪುಡಿ, ಉಪ್ಪು, ಶುಂಠಿಯನ್ನು ಸೇರಿಸಿ. ಬಳಿಕ ಪುದೀನಾ ಎಲೆ ಮತ್ತು ಕೊತ್ತಂಬರಿ ಎಲೆಯನ್ನು ಕತ್ತರಿಸಿ ಹಾಕಿದರೆ ಅಜೀರ್ಣ ಸಮಸ್ಯೆಯನ್ನು ತಡೆಯುವ, ಚಯಾಪಯ ಕ್ರಿಯೆಯನ್ನು ಉತ್ತಮಗೊಳಿಸುವ ಮಸಾಲಾ ಮಜ್ಜಿಗೆ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ:

Grapes disadvantages: ದ್ರಾಕ್ಷಿ ಸೇವನೆಯಿಂದಾಗುವ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ

Published On - 1:06 pm, Sat, 19 February 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು