ಮಾರ್ಚ್​ ತಿಂಗಳಿನಲ್ಲಿ ಹೋಗಲು ಟ್ರಿಪ್​ ಪ್ಲಾನ್​ ಮಾಡುತ್ತಿದ್ದೀರಾ?: ಈ ಸ್ಥಳಗಳಿಗೆ ಭೇಟಿ ನೀಡಿ

ಉತ್ತರಾಖಾಂಡ್​​ಗೆ ಹೋಗಲು ಡೆಹ್ರಾಡೂನ್​ ಮೊದಲ ಹೆಜ್ಜೆಯಾಗಿದೆ. ಗುಡ್ಡ ಬೆಟ್ಟಗಳ ನಡುವೆ ಸಾಗುವ ಡೆಹ್ರಾಡೂನ್​ ಹಾದಿ ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅಲ್ಲಲ್ಲಿ ಕಾಣಸಿಗುವ ಕೆರೆ, ನದಿಗಳು ಪ್ರವಾಸಿಗರನ್ನು ಸೆಳೆಯುತ್ತದೆ.

ಮಾರ್ಚ್​ ತಿಂಗಳಿನಲ್ಲಿ ಹೋಗಲು ಟ್ರಿಪ್​ ಪ್ಲಾನ್​ ಮಾಡುತ್ತಿದ್ದೀರಾ?: ಈ ಸ್ಥಳಗಳಿಗೆ ಭೇಟಿ ನೀಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 19, 2022 | 11:02 AM

ಇನ್ನೇನು ಮಾರ್ಚ್(March) ತಿಂಗಳು ಆರಂಭವಾಗುತ್ತಿದೆ. 2022 ಆರಂಭವಾಗಿ 3 ತಿಂಗಳು ಕಳೆದೇ ಹೋಯಿತು.  ಐಟಿ ರಿಟನ್ಸ್​ ಕೂಡ ಫೈಲ್​ ಮಾಡಿ ಆಯಿತು. ಹೀಗಾಗಿ ಮಾರ್ಚ್​ ತಿಂಗಳಿನಲ್ಲಿ ಒಂದೆರೆಡು ದಿನ ಒತ್ತಡದ ಜೀವನಕ್ಕೆ ಬ್ರೇಕ್​ ನೀಡಿ ಟ್ರಿಪ್(Trip)​ ಹೋಗಿ ಬನ್ನಿ. ಹಾಗಾದರೆ ಮಾರ್ಚ್​ ತಿಂಗಳಿನಲ್ಲಿ ಭೇಟಿ ನೀಡಲು ಯಾವ ಸ್ಥಳಗಳು ಸೂಕ್ತ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೊಡಿ ನೀವು ಭಾರತದಲ್ಲಿ ಯಾವೆಲ್ಲಾ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು ಎನ್ನುವ ಮಾಹಿತಿ.

ಖೀರಗಂಗಾ -ಹಿಮಾಚಲ ಪ್ರದೇಶ: ಉತ್ತರ ಹಿಮಾಚಲ ಪ್ರದೇಶದಲ್ಲಿ ಟ್ರೆಕ್ಕಿಂಗ್​ ಮಾಡುವ ಆಸೆಯಿದ್ದರೆ ಖೀರ್​ಗಂಗಾ ಉತ್ತಮ ಸ್ಥಳವಾಗಲಿದೆ. ಕತ್ತೆತ್ತಿ ನೋಡುವಷ್ಟು ದೂರ ಕಾಣುವ ಹಸಿರು  ಮರಗಳು,ಸುತ್ತಲೂ ತುಂಬಿದ ಗುಡ್ಡ ಬೆಟ್ಟಗಳು, ದೂರದಲ್ಲಿ ಕಾಣುವ ಪುಟ್ಟ ಪುಟ್ಟ ಹಳ್ಳಿಗಳ ದೃಶ್ಯ ನಿಮ್ಮ ಒತ್ತಡದ ಬದುಕಿದೆ ಅಕ್ಷರಶಃ ಮುಕ್ತಿ ನೀಡಿ ಆಹ್ಲಾದತೆಯ ಅನುಭವ ನೀಡುತ್ತದೆ.  ಹಿಮಾಷಲ ಪ್ರದೇಶಕ್ಕೆ ಭೇಟಿ ನೀಡಲು  ಮಾರ್ಚ್​​ ತಿಂಗಳು ಉತ್ತಮ ಸಮಯವಾಗಿದೆ. ಹೀಗಾಗಿ ನೀವೇನಾದರೂ ಮಾರ್ಚ್​​ ತಿಂಗಳ ಪ್ರವಾಸಕ್ಕೆ ಅಣಿಯಾಗುತ್ತಿದ್ದರೆ ಖೀರ್​ಗಂಗಾವನ್ನು ಆರಿಸಿಕೊಳ್ಳಿ.

ಬೃಂದಾವನ -ಉತ್ತರ ಪ್ರದೇಶ: ವಾಸುದೇವ ಕೃಷ್ಣ ಬೆಳೆದ ಸ್ಥಳ ಬೃಂದಾವನ. ನೀವೇನಾದರೂ ದೇವಸ್ಥಾನ ಅಥವಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯೋಚನೆ ಹೊಂದಿದ್ದರೆ ಉತ್ತರ ಪ್ರದೇಶದ ಬೃಂದಾವನ ಉತ್ತಮ ಸ್ಥಳವಾಗಿದೆ. ಚಳಿಗಾಲದ ಕೊನೆಯ ದಿನಗಳನ್ನು ಹೊಂದಿರುವ ಮಾರ್ಚ್​ ತಿಂಗಳು, ತಂಪನೆಯ ವಾತವರಣವನ್ನು ಬೃಂದಾವನದಲ್ಲಿ ಕಾಣಬಹುದು, ಬೃಂದಾವನದ ಇಸ್ಕಾನ್​ ದೇವಾಲಯ ಇನ್ನೊಂದು ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ.

ಡಹ್ರಾಡೂನ್​ -ಉತ್ತರಾಖಾಂಡ್: ಉತ್ತರಾಖಾಂಡ್​​ಗೆ ಹೋಗಲು ಡೆಹ್ರಾಡೂನ್​ ಮೊದಲ ಹೆಜ್ಜೆಯಾಗಿದೆ. ಗುಡ್ಡ ಬೆಟ್ಟಗಳ ನಡುವೆ ಸಾಗುವ ಡೆಹ್ರಾಡೂನ್​ ಹಾದಿ ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅಲ್ಲಲ್ಲಿ ಕಾಣಸಿಗುವ ಕೆರೆ, ನದಿಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಮಾರ್ಚ್​ ತಿಂಗಳಿನಲ್ಲಿ ನೀವು ಡೆಹ್ರಾಡೂನ್​ಗೆ ಭೇಟಿ ನೀಡಿದರೆ ಕೂಲ್​ ಕೂಲ್​ ವಾತಾವರಣದಲ್ಲಿ ಎಂಜಾಯ್​ ಮಾಡಬಹುದಾಗಿದೆ. ಆದ್ದರಿಂದ ಮಾರ್ಚ್​​ ತಿಂಗಳ ಪ್ರವಾಸದ ಪಟ್ಟಿಯಲ್ಲಿ ಡೆಹ್ರಾಡೂನ್​ ಹೆಸರನ್ನು ಸೇರಿಸಲು ಮರೆಯದಿರಿ.

ದೆಹಲಿ: ಬೇಸಿಗೆಯ ಮೊದಲು ದೆಹಲಿಗೆ ಭೇಟಿ ನೀಡುವುದು ಉತ್ತಮವಾಗಿದೆ. ಸ್ವಚ್ಚ ಆಕಾಶ, ಮಯಗೆ ಸೋಕುವ ತಂಪನೆಯ ಗಾಳಿಯನ್ನು ಮಾರ್ಚ್​ ತಿಂಗಳಿನಲ್ಲಿ ನೀವು ದೆಹಲಿಯಲ್ಲಿ ಕಾಣಬಹುದಾಗಿದೆ. ಅಲ್ಲದೆ ದೇಹಲಿಯ ಸಿಟಿ ರೌಂಡ್ಸ್​​ಗೆ ಮಾರ್ಚ್​ ತಿಂಗಳು ಅತ್ಯತ್ತಮ ಸಮಯವಾಗಿದೆ. ದೇಶದ ರಾಜಧಾನಿಯನ್ನು ವೀಕ್ಷಿಸುವ ಆಸೆಯಿದ್ದರೆ ಮಾರ್ಚ್​ ತಿಂಗಳಿನಲ್ಲಿಯೇ ಭೇಟಿ ನೀಡಿ.

ಊಟಿ-ತಮಿಳುನಾಡು: ವಸಂತಕಾಲದ ಆರಂಭ ತಿಂಗಳ ವಿಹಾರಕ್ಕೆ ಊಟಿ ಬೆಸ್ಟ್​ ಪ್ಲೇಸ್​​ ಆಗಿದೆ . ಇದು ಸ್ವತಂತ್ರ ಪೂರ್ವ ಭಾರತದಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟಿತು ಜತೆಗೆ ಇದು ಇಂಗ್ಲಿಷ್ ಗ್ರಾಮಾಂತರದಂತಿದೆ. ಮಾರ್ಚ್​ ತಿಂಗಳಿನಲ್ಲಿ ಹಿತವೆನಿಸುವ ಚಳಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಹೊದ್ದ ಪ್ರಕೃತಿ ಎಲ್ಲವೂ ಭೇಟಿ ನೀಡಿದವರನ್ನು ಸೆಳೆಯುತ್ತದೆ. ಹೀಗಾಗಿ ಮಾರ್ಚ್​ ತಿಂಗಳು ಊಟಿ ಭೇಟಿಗೆ ಬೆಸ್ಟ್​ ಟೈಮ್​ ಆಗಿದೆ.

ಇದನ್ನೂ ಓದಿ:

ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್​ ಟಿಪ್ಸ್​