AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಸನ್​ ಚಾರ್ಜ್ಡ್​ ವಾಟರ್​? ಇದರ ಸೇವನೆಯಿಂದಾಗುವ ಉಪಯೋಗವೇನು? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಸೋಲರೈಸ್ಡ್​ ವಾಟಲ್​ ಹೀಲಿಂಗ್​ ಅಥವಾ ಸೂರ್ಯ ಚಿಕಿತ್ಸಾ ವಿಧಾನದಲ್ಲಿ ಈ ನೀರನ್ನು ಬಳಸಲಾಗುತ್ತದೆ. ಆಯುರ್ವೇದವು ಸೂರ್ಯಾಂಶು ಸಂತಪ್ತಮ್ ಎಂದು ಹೇಳುತ್ತದೆ. ಅಂದರೆ ನೀರು ಸೂರ್ಯನ ಕಿರಣಗಳಿಂದ ಶುದ್ಧೀಕರಿಸ್ಪಲಟ್ಟಿದೆ ಎಂದಾಗಿದೆ. 

ಏನಿದು ಸನ್​ ಚಾರ್ಜ್ಡ್​ ವಾಟರ್​? ಇದರ ಸೇವನೆಯಿಂದಾಗುವ ಉಪಯೋಗವೇನು? ಇಲ್ಲಿದೆ ಮಾಹಿತಿ
ನೀರು
Follow us
TV9 Web
| Updated By: Pavitra Bhat Jigalemane

Updated on:Feb 19, 2022 | 4:36 PM

ಪುರಾಣ ಕಾಲದಿಂದಲೂ ಎಲ್ಲ ರೀತಿಯ ರೋಗ, ಅನಾರೋಗ್ಯದ ಸಮಸ್ಯೆಗಳಿಗೆ  ಆಯುರ್ವೇದ (Ayurveda) ಪರಿಹಾರವಾಗಿದೆ. ಎಂತಹ ದೀರ್ಘಕಾಲದ ಸಮಸ್ಯೆಗಳಿಗೂ ಆಯುರ್ವೇದದಲ್ಲಿ ಪರಿಹಾರವಿದೆ. ಅದೇ ರೀತಿ ದೇಹವನ್ನು ಆರೋಗ್ಯವಾಗಿಡಲು ಮತ್ತು ಶಕ್ತಿಯುತವಾಗಿಡಲು ಆಯುರ್ವೇದದ ಕೆಲವು ಅಭ್ಯಾಸಗಳು ಉತ್ತಮವಾಗಿದೆ. ಅದರಲ್ಲಿ ಪ್ರಮುಖವಾಗಿರುವುದು ಸೂರ್ಯನ ಬೆಳಕಿನಿಂದ ಬಿಸಿಯಾದ ನೀರು.  ಸೂರ್ಯನ ಬೆಳಕನ್ನು(Sun Light) ಹೀರಿಕೊಂಡ ನೀರು (Water) ಜೀವಜಲವಾಗುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.

ಸಾಮಾನ್ಯವಾಗಿ ಸೋಲರೈಸ್ಡ್​ ವಾಟಲ್​ ಹೀಲಿಂಗ್​ ಅಥವಾ ಸೂರ್ಯ ಚಿಕಿತ್ಸಾ ವಿಧಾನದಲ್ಲಿ ಈ ನೀರನ್ನು ಬಳಸಲಾಗುತ್ತದೆ. ಆಯುರ್ವೇದವು ಸೂರ್ಯಾಂಶು ಸಂತಪ್ತಮ್ ಎಂದು ಹೇಳುತ್ತದೆ. ಅಂದರೆ ನೀರು ಸೂರ್ಯನ ಕಿರಣಗಳಿಂದ ಶುದ್ಧೀಕರಿಸ್ಪಲಟ್ಟಿದೆ ಎಂದಾಗಿದೆ.  ಸೂರ್ಯನ ಬೆಳಕಿನಿಂದ ಬಿಸಿಯಾದ ನೀರು ದೇಹದಲ್ಲಿ ಶಕ್ತಿಯನ್ನು ಬಲಪಡಿಸುತ್ತದೆ. ಜತೆಗೆ ನಿಮ್ಮ ದೇಹದಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ.  ನೀವು ಬಾಟಲಿಯಲ್ಲಿ ನೀರನ್ನು ಹಾಕಿ ಅದನ್ನು ಸೂರ್ಯನ ಕಿರಣಗಳು ಬರುವಲ್ಲಿ ಇಡಿ. ನೀರಿನಲ್ಲಿರುವ ಅಶುದ್ಧ ಕಣಗಳನ್ನು ಹೋಗಲಾಡಿಸಿ, ಶುದ್ಧೀಕರಿಸುವ ಗುಣ ಸೂರ್ಯ ಕಿರಣಗಳಲ್ಲಿದೆ ಎಂದು ಹೇಳಲಾಗಿದೆ. ಇದನ್ನು ಪ್ರಿಡ್ಜ್​ನಲ್ಲಿ ಶೇಖರಿಸಿಡದೆ ಹಾಗೆಯೇ ಸೇವಿಸಿದರೆ ದೇಹಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.

ಸೂರ್ಯನ ಕಿರಣಗಳಿಂದ ಬಿಸಿಯಾದ ನೀರಿನ ಪ್ರಯೋಜನಗಳೇನು? ದೇಹದಲ್ಲಿ ಶಕ್ತಿ, ಮತ್ತು ಉತ್ಸಾಹವನ್ನು ಇ ನೀರು ಹೆಚ್ಚಿಸುತ್ತದೆ. ನಿಮ್ಮ ದೇಹವನ್ನು ಯೌವ್ವನದಿಂದ ಕೂಡಿರುವಂತೆ ಮಾಡುತ್ತದೆ. ಹಾನಿಯಾದ ಸೆಲ್ಯಲರ್​ಗಳನ್ನು ಸರಿಪಡಿಸುತ್ತದೆ. ಸೋಲರ್​ ನೀರು ಆ್ಯಂಟಿ ವೈರಲ್​, ಆ್ಯಂಟಿ ಫಂಗಲ್​, ಆ್ಯಂಟಿ ಬ್ಯಾಕ್ಟೀರಿಯಲ್​ ಗುಣಗಳನ್ನು ಹೊಂದಿದೆ. ಅಲ್ಲದೆ ಈ ನೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಸೋಲಾರ್​ ಎನರ್ಜಿಯಿಂದ ಕೂಡಿದ ನೀರಿನ ಸೇವನೆಯಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜತೆಗೆ ಹಸಿವೆಯನ್ನೂ ಹೆಚ್ಚಿಸುತ್ತದೆ.  ಆಸಿಡಿಟಿ, ಅಲ್ಸರ್​​ ಸಮಸ್ಯೆಯನ್ನೂ ಸರಿಪಡಿಸುತ್ತದೆ. ಚರ್ಮದ ಅಲರ್ಜಿ, ರಾಶಸ್​ನಂತಹ ಸಮಸ್ಯೆಗಳನ್ನು ದೂರ ಮಾಡಿ ಆರೋಗ್ಯಯುತ, ಕಾಂತಿಯುತ ಚರ್ಮವನ್ನು ನಿಮ್ಮದಾಗಿಸುತ್ತದೆ.

ಸನ್​ ಚಾರ್ಡ್ಡ್​ ವಾಟರ್​ನ್ನು ತಯಾರಿಸುವುದು ಹೇಗೆ?

ಬಣ್ಣದ ಬಾಟಲಿಯಲ್ಲಿ ಮೊದಲು ನೀರನ್ನು ತುಂಬಿಸಿ ನಂತರ ಅದನ್ನು ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿಡಿ ನೀರನ್ನು ಕನಿಷ್ಠ 8 ಗಂಟೆಗಳ ಕಾಲ ಸೂರ್ಯನ ಬಿಸಿಲಿಗೆ ತಾಗುವಂತೆ ಇಡಿ. ನೆನಪಿಡಿ ಅದನ್ನು ನಂತರ ತೆಗೆದು ಪ್ರಿಡ್ಜ್​ನಲ್ಲಿ ಇಡಬೇಡಿ. ಬಳಸುವ ಮುನ್ನ 3 ದಿನವಾದರೂ ಪ್ರತಿದಿನ 8 ಗಂಟೆಗಳ ಕಾಲ ಸೂರ್ಯ ಕಿರಣಗಳಿಗೆ ತಾಕುವಂತೆ ಇಟ್ಟು ನಂತರ ಬಳಸಿ.​ ಆದಷ್ಟು ಹಸಿರು, ಕೆಂಪು, ಹಳದಿ, ನೀಲಿ ಮತ್ತು ಕಿತ್ತಳೆ ಬಣ್ಣದ ಬಾಟಲಿಗಳಲ್ಲಿ ಣಿರನ್ನು ತುಂಬಿಸಿಡಿ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಹಿಡಿದು, ನಿದ್ರಾಹೀನತೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಪರಿಹಾರವಾಗುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಹೆಲ್ತ್​ ಶಾರ್ಟ್ಸ್  ಸುದ್ದಿಸಂಸ್ಥೆಯ ವರದಿಯನ್ನು ಅನುಸರಿಸಿ ಮಾಹಿತಿ ನೀಡಲಾಗಿದೆ.)

ಇದನ್ನೂ ಓದಿ:

Men skin care : ಪುರುಷರು ತಮ್ಮ ತ್ವಚೆಯ ಆರೈಕೆಯನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ

Published On - 4:34 pm, Sat, 19 February 22

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?